Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಭ್ರಷ್ಷ ರಾಜಕಾರಣಿಗಳಿಗೆ 12 ಪ್ರಶ್ನೆಗಳು

ಭ್ರಷ್ಷ ರಾಜಕಾರಣಿಗಳಿಗೆ 12 ಪ್ರಶ್ನೆಗಳು

ಎಂ.ಮದನಗೋಪಾಲ್ಎಂ.ಮದನಗೋಪಾಲ್20 Nov 2016 6:18 PM IST
share
ಭ್ರಷ್ಷ ರಾಜಕಾರಣಿಗಳಿಗೆ 12 ಪ್ರಶ್ನೆಗಳು

ನಾನು ಮದಭುಶಿ ಮದನ್ ಗೋಪಾಲ್. ನಿವೃತ್ತ ಐಎಎಸ್ ಅಧಿಕಾರಿ. ಈ ಕೆಳಗಿನ ಅಂಶದ ಬಗ್ಗೆ ಎಲ್ಲ ಓದುಗರು ಗಮನ ಹರಿಸಲು ಮೊಟ್ಟಮೊದಲನೆಯದಾಗಿ ಕಳಕಳಿಯಿಂದ ಮನವಿ ಮಾಡುತ್ತೇನೆ.
ದೇಶದಲ್ಲಿ 500 ಹಾಗೂ 1,000 ರೂ. ನೋಟುಗಳ ಚಲಾವಣೆಯನ್ನು ರದ್ದು ಮಾಡಿದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮುಂದೆ ನಾನು ಹಲವು ಪ್ರಶ್ನೆಗಳನ್ನು ಇಡಬಯಸುತ್ತೇನೆ. ಸಹಾಯಕ ಚುನಾವಣಾ ಅಧಿಕಾರಿಯಿಂದ ಹಿಡಿದು, ಚುನಾವಣಾ ಅಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ, ವೀಕ್ಷಕ ಹಾಗೂ ಭಾರತ ಚುನಾವಣಾ ಆಯೋಗದ ವಿಶೇಷ ವೀಕ್ಷಕ ಹೀಗೆ ಹಲವು ಹುದ್ದೆಗಳಲ್ಲಿ 12ಕ್ಕೂ ಹೆಚ್ಚು ಚುನಾವಣೆಗಳನ್ನು ನಿರ್ವಹಿಸಿದ್ದೇನೆ. ಮತಪಟ್ಟಿ ಮೇಲ್ವಿಚಾರಣೆ ಹಾಗೂ ಪರಾಮರ್ಶೆ ಅಧಿಕಾರಿಯಾಗಿಯೂ ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಪಂಜಾಬ್, ಅಸ್ಸಾಂ, ಬಿಹಾರ, ಮಹಾರಾಷ್ಟ್ರ ಮತ್ತಿತರ ಕಡೆಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಜತೆಗೆ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಇತರ ಸಂಘ ಸಂಸ್ಥೆಗಳ ಚುನಾವಣೆಯನ್ನೂ ನಡೆಸಿದ್ದೇನೆ.
ದೇಶದಲ್ಲಿ 500 ಹಾಗೂ 1,000 ರೂ. ನೋಟು ಚಲಾವಣೆಯಿಂದ ರದ್ದು ಮಾಡಿದ ಸರಕಾರದ ಕ್ರಮದ ವಿರುದ್ಧ ರಾಜಕೀಯ ಪಕ್ಷಗಳು ಬೊಬ್ಬೆ ಹೊಡೆಯುತ್ತಿರುವುದು ನನಗೆ ಅಚ್ಚರಿ ತಂದಿದೆ. ಖಂಡಿತವಾಗಿಯೂ ಇದರಿಂದ ಜನರಿಗೆ ಸ್ವಲ್ಪಮಟ್ಟಿನ ಅನನುಕೂಲವಾಗಿದೆ ಹಾಗೂ ಸಹಜ ಆರ್ಥಿಕ ಚಟುವಟಿಕೆಗಳಿಗೆ ಧಕ್ಕೆಯಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಗದು ವಹಿವಾಟನ್ನೇ ನಡೆಸುವ ಮಂದಿಗೆ ಆಗಿರುವ ಪರಿಣಾಮವನ್ನು ಸರಕಾರ ಕೀಳಂದಾಜು ಮಾಡಿದೆ. ಖಂಡಿತವಾಗಿಯೂ ಸರಕಾರ ಇನ್ನಷ್ಟು ಹೆಚ್ಚು ಯೋಜನಾಬದ್ಧವಾಗಿ, ವೈಜ್ಞಾನಿಕ ಹಾಗೂ ವ್ಯವಸ್ಥಿತವಾಗಿ ಇದನ್ನು ನಿರ್ವಹಿಸಬೇಕಿತ್ತು. ಈ ಎಲ್ಲ ಅಂಶಗಳ ಬಗ್ಗೆ ಟೀಕಿಸಲು ಮತ್ತು ಪ್ರಜಾಪ್ರಭುತ್ವದ ಅಂಗವಾಗಿ ಇದನ್ನು ಪ್ರಶ್ನಿಸಲು ವಿರೋಧ ಪಕ್ಷಗಳಿಗೆ ಹಕ್ಕು ಇದೆ. ಆದರೆ ದೀರ್ಘಾವಯಲ್ಲಿ ಇದರಿಂದ ಆರ್ಥಿಕತೆಯ ಮೇಲಾಗುವ ಧನಾತ್ಮಕ ಪರಿಣಾಮದ ಬಗ್ಗೆ ಅವರಿಗೆ ಕಲ್ಪನೆ ಇದೆಯೇ? ಭಾರತ ಸರಕಾರದ ಈ ಕ್ರಾಂತಿಕಾರಿ ನಡೆಯಿಂದ ಅಭಿವೃದ್ಧಿ ಹಾಗೂ ಪ್ರಗತಿಗೆ ದೊರಕುವ ಉತ್ತೇಜನದ ಬಗ್ಗೆ ಕಲ್ಪನೆ ಇದೆಯೇ? ಆರ್ಥಿಕತೆಯಲ್ಲಿ ಕಪ್ಪುಹಣ ಬೀರುವ ಋಣಾತ್ಮಕ ಪರಿಣಾಮವನ್ನು ಎಲ್ಲ ರಾಜಕೀಯ ಪಕ್ಷಗಳು ಚೆನ್ನಾಗಿ ತಿಳಿದುಕೊಂಡಿವೆ ಎಂಬ ನಂಬಿಕೆ ನನ್ನದು. ಇಷ್ಟಾಗಿಯೂ ಸರಕಾರದ ನಿರ್ಧಾರದ ವಿರುದ್ಧ ಗದ್ದಲ ಎಬ್ಬಿಸುವ ಮೂಲಕ ಅರಾಜಕ ಸ್ಥಿತಿಯನ್ನು ನಿರ್ಮಿಸುವುದು ಹಾಗೂ ಸಮಾಜದ ಕೆಲ ವರ್ಗಗಳು, ತಪ್ಪು ಪರಿಕಲ್ಪನೆಯಿಂದ ಅಕಾರಾರೂಢ ಪಕ್ಷವನ್ನು ದೂರುವಂತೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ನನ್ನ ಕೆಲವು ಪ್ರಶ್ನೆಗಳಿವೆ

1.ಚುನಾವಣೆಗಳಲ್ಲಿ ಹಣದ ಪ್ರಭಾವ ಹೆಚ್ಚುತ್ತಿರುವುದು ಒಂದು ಪಿಡುಗು ಎಂಬ ಅರಿವು ಈ ರಾಜಕೀಯ ಪಕ್ಷಗಳಿಗೆ ಇಲ್ಲವೇ?

2. ಪ್ರತೀ ಚುನಾವಣೆಯಲ್ಲಿ ಹಣದ ಪ್ರಭಾವವೇ ಪ್ರಮುಖವಾಗುವುದರಿಂದ, ಸಮಾಜದಲ್ಲಿ ದೇಶದ ಬಗ್ಗೆ ಕಳಕಳಿ ಇರುವ, ವಿಶ್ವಾಸಾರ್ಹ, ಪ್ರಾಮಾಣಿಕ ವ್ಯಕ್ತಿಗೆ ಶಾಸಕ ಅಥವಾ ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ರಾಜಕೀಯ ಪಕ್ಷಗಳ ಟಿಕೆಟ್ ಸಿಗುವುದು ಸಾಧ್ಯವೇ ಹಾಗೂ ಅವರು ಚುನಾವಣೆಗಳನ್ನು ಗೆಲ್ಲಲು ಸಾಧ್ಯವೇ?

3. ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹಣ ದಟ್ಟ ಪ್ರಭಾವ ಬೀರುವ ಕೆಟ್ಟ ಉದಾಹರಣೆ, ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಎಲ್ಲ ಬಗೆಯ ಚುನಾವಣೆಗಳಾದ ಗ್ರಾಮಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಸಹಕಾರ ಸಂಘಗಳು, ನಗರ ಸ್ಥಳೀಯ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳಡಿ ರಚಿಸುವ ಗ್ರಾಮಮಟ್ಟದ ಸಮಿತಿಗಳು, ವಿಶ್ವವಿದ್ಯಾ ನಿಲಯಗಳ ಸೆನೆಟ್ ಹಾಗೂ ಸಿಂಡಿಕೇಟ್, ಡಿಸಿಸಿ ಬ್ಯಾಂಕ್, ವೃತ್ತಿಪರ ಸಂಸ್ಥೆಗಳು, ಕ್ಲಬ್‌ಗಳು ಹಾಗೂ ಇತರ ಸಂಘ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳಲ್ಲೂ ಪಾತ್ರ ವಹಿಸುವುದಿಲ್ಲವೇ?

4. ಹಣದ ಪ್ರಭಾವ ಚುನಾವಣೆಗಳಲ್ಲಿ ಪ್ರಮುಖವಾಗುವುದು ಎಲ್ಲ ಪ್ರಜಾಸತ್ತಾತ್ಮಕ ಸಂಘ ಸಂಸ್ಥೆಗಳಿಗೆ ಅಗೌರವ ಅಲ್ಲವೇ? ಈ ಮೂಲಕ ಜನಸಾಮಾನ್ಯರಲ್ಲಿ ವಿಶ್ವಾಸಾರ್ಹತೆ ಹಾಗೂ ವಿಶ್ವಾಸವನ್ನು ಇವರು ಕಳೆದುಕೊಳ್ಳುವುದಿಲ್ಲವೇ?

5. ಚುನಾವಣೆಗಳು ಒಂದು ಪ್ರಹಸನವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ, ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ಬಲಗೊಳ್ಳಲು ಇದು ಕಾರಣವಾಗುವುದಿಲ್ಲವೇ? ಈ ಮೂಲಕ ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿದ ಅಂಶಗಳಿಗೆ ಎಸಗುವ ದ್ರೋಹವಾಗುವುದಿಲ್ಲವೇ?

6. ಹಲವು ಜನಪ್ರಿಯ ಸಿನೆಮಾಗಳಲ್ಲಿ ರಾಜಕಾರಣಿಗಳನ್ನು ಮತ್ತು ಸರಕಾರಿ ವ್ಯವಸ್ಥೆಯ ಅಧಿಕಾರಿಗಳನ್ನು ಕ್ರೂರಿ ಅಥವಾ ಭ್ರಷ್ಟಾಚಾರಿ ಎಂಬ ಕಾರಣಕ್ಕಾಗಿ ಯುವ ಪೊಲೀಸ್ ಅಧಿಕಾರಿಗಳು ಹೊಡೆಯುವ ದೃಶ್ಯಗಳು ಬಂದಾಗ ಜನ ಏಕೆ ಚಪ್ಪಾಳೆ ಹೊಡೆದು, ಕೇಕೇ ಹಾಕುತ್ತಾರೆ?

7. ವಿಶ್ವಾಸದ ಕೊರತೆಯಿಂದಾಗಿ ಜನರು ಇಡೀ ಚುನಾವಣಾ ಪ್ರಕ್ರಿಯೆಯಿಂದಲೇ ವಿಮುಖವಾಗುವ ಅಥವಾ ಅನಾಸಕ್ತಿ ಹೊಂದುವುದು ಭಾರತೀಯ ಪ್ರಜಾಪ್ರಭುತ್ವಕ್ಕೆ ಒಳ್ಳೆಯದೇ?

8. ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ, ಜನಸೇವೆ ಹಾಗೂ ಪ್ರಾಮಾಣಿಕತೆಗೆ ಹೆಸರಾದ ಮುತ್ಸದ್ದಿ ನಾಯಕರು, ಪ್ರಸ್ತುತ ಚುನಾವಣಾ ರಾಜಕೀಯವನ್ನು ಕರಾಳ ಎಂದು ಪರಿಗಣಿಸುವುದು ಏಕೆ?

 9. ಜನರಲ್ಲಿ ಹತಾಶೆ ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ವಿಶ್ವಾಸಾರ್ಹತೆ ಕಡಿಮೆಯಾಗುವ ಕಾರಣದಿಂದ ದೇಶದ ಸಂವಿಧಾನದ ಬಗ್ಗೆ ನಂಬಿಕೆ ಇಲ್ಲದ ಎಲ್ಲ ಬಗೆಯ ರಾಷ್ಟ್ರವಿರೋಧಿ ಶಕ್ತಿಗಳು, ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು ಹಾಗೂ ಉಗ್ರಗಾಮಿ ಗುಂಪುಗಳು ಬಲಗೊಳ್ಳುತ್ತಿರುವುದು ನಿಜವಲ್ಲವೇ? ಇವರು ಜನರ ಭಾವನೆಗಳನ್ನು ಶೋಷಿಸಿಕೊಂಡು, ಕಾನೂನುಬದ್ಧ ಚೌಕಟ್ಟು ಹಾಗೂ ರಾಷ್ಟ್ರೀಯ ಹಿತಾಸಕ್ತಿಯ ವಿರುದ್ಧ ಕಾರ್ಯನಿರ್ವಹಿಸುವುದು ವಾಸ್ತವವಲ್ಲವೇ?

10.ದೊಡ್ಡ ಪ್ರಮಾಣದ 500 ಹಾಗೂ 1000 ರೂ. ನೋಟುಗಳನ್ನು ಚುನಾವಣೆ ಸಂದರ್ಭದಲ್ಲಿ ವಶಪಡಿಸಿಕೊಳ್ಳುತ್ತಿದ್ದುದು ವಾಸ್ತವವಲ್ಲವೇ? (ಪಕ್ಷಭೇದವಿಲ್ಲದೇ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಇದನ್ನು ಸಾಗಿಸುವ ಹಾಗೂ ದಾಸ್ತಾನು ಮಾಡುತ್ತಾರೆ). ಇದರಿಂದ ಚುನಾವಣೆಯಲ್ಲಿ ಇಂಥ ಹಣದ ಪ್ರಭಾವ ದಟ್ಟವಾಗುತ್ತಿರುವುದು ಸ್ಪಷ್ಟವಾಗಿ ವೇದ್ಯವಾಗುತ್ತದೆ. ಇದನ್ನು ತಡೆಯಲು ಭಾರತದ ಚುನಾವಣಾ ಆಯೋಗ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡರೂ ಹಣದ ಪ್ರಭಾವ ಮಟ್ಟಹಾಕಲು ಸಾಧ್ಯವಾಗಿಲ್ಲ.

11.ಎಲೆಕ್ಷನ್ ವಾಚ್ ಎಂಬ ನಾಗರಿಕ ಸಮಾಜ ಸಂಸ್ಥೆಯೊಂದು, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆಸ್ತಿ ಹಾಗೂ ಜವಾಬ್ದಾರಿಗಳ ಬಗ್ಗೆ ವಿಸ್ತೃತ ಹಾಗೂ ಸಂಶೋಧನಾ ಮಾಹಿತಿಯನ್ನು ಬಿಡುಗಡೆ ಮಾಡುತ್ತದೆ. ಬಹುತೇಕ ಪ್ರಕರಣಗಳಲ್ಲಿ, ಅಭ್ಯರ್ಥಿಗಳ ಆದಾಯ ಹಾಗೂ ಆಸ್ತಿ ಊಹಾತೀತ ಪ್ರಮಾಣದಲ್ಲಿ ಬೆಳೆದಿರುತ್ತದೆ. ಭಾರತದ ಜನಸಾಮಾನ್ಯರ ಆದಾಯ ಅಥವಾ ಆಸ್ತಿಮಟ್ಟ ಆ ಪ್ರಮಾಣದಲ್ಲಿ ಏಕೆ ಏರಿಕೆಯಾಗುವುದಿಲ್ಲ?

12.ಎಲ್ಲ ರಾಜಕೀಯ ಪಕ್ಷಗಳು ತಮಗೆ ದೇಣಿಗೆ ಸಲ್ಲಿಸುವವರ ಪಟ್ಟಿಯನ್ನು ಕನಿಷ್ಠ ಒಂದು ವರ್ಷಕ್ಕೊಮ್ಮೆ ಏಕೆ ಬಿಡುಗಡೆ ಮಾಡುವುದಿಲ್ಲ? ಅದರಲ್ಲೂ ಮುಖ್ಯವಾಗಿ ನಗದು, ಅಮೂಲ್ಯ ವಸ್ತು, ಚೆಕ್ ಅಥವಾ ಬ್ಯಾಂಕ್ ಡಿಡಿ ಮೂಲಕ ಪಕ್ಷಗಳಿಗೆ ದೇಣಿಗೆ ನೀಡುವ ವ್ಯಕ್ತಿಗಳು, ಕಂಪೆನಿಗಳು, ಸೊಸೈಟಿ ಹಾಗೂ ಸಂಘ ಸಂಸ್ಥೆಗಳ ಬಗ್ಗೆ ಏಕೆ ಬಹಿರಂಗಪಡಿಸುವುದಿಲ್ಲ? ಈ ಮಾಹಿತಿಯನ್ನು ಏಕೆ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ತಂದಿಲ್ಲ?
 ಅಂತಿಮವಾಗಿ ಹೇಳಬೇಕೆಂದರೆ, ಎಲ್ಲ ರಾಜಕೀಯ ಪಕ್ಷಗಳಿಗೂ ಈ ಪ್ರಶ್ನೆಗಳಿಗೆ ಉತ್ತರ ಗೊತ್ತಿದೆ. ಆದರೆ ಸ್ವಚ್ಛ ಚಾರಿತ್ರ್ಯದಿಂದ ದೇಶದ ಜನರ ಮುಂದೆ ಬರುವ ಧೈರ್ಯ ಹಾಗೂ ಬದ್ಧತೆ ನಮ್ಮ ರಾಜಕಾರಣಿಗಳಿಗೆ ಇದೆಯೇ? ನಡುಗುವ ಹಾಗೂ ಎದೆಬಡಿದ ಹೆಚ್ಚಿಸಿಕೊಂಡು ಜನರ ಮುಂದೆ ಬರುವ ಇವರಿಗೆ ದೇಶದ ಜನಸಾಮಾನ್ಯರ ಬಗ್ಗೆ ಅವರಿಗೆ ಕಳಕಳಿ ಇದೆಯೇ?

share
ಎಂ.ಮದನಗೋಪಾಲ್
ಎಂ.ಮದನಗೋಪಾಲ್
Next Story
X