13ನೆ ವರ್ಷದ ಆಳ್ವಾಸ್ ನುಡಿಸಿರಿಗೆ ಸಂಭ್ರಮದ ತೆರೆ

ಮೂಡುಬಿದಿರೆ, ನ.20: ಕಳೆದ ಮೂರುದಿನಗಳ ಕಾಲ ವಿದ್ಯಾಗಿರಿಯಲ್ಲಿ ನಡೆದ 13ನೆ ವರ್ಷದ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯು 10 ವೇದಿಕೆಗಳಲ್ಲಿ ಕಲಾಸಕ್ತರಿಗೆ ಸಾಹಿತ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣವನ್ನು ನೀಡುವ ಮೂಲಕ ಸಮಾಪನಗೊಂಡಿತು.
ಮೂರನೆಯ ದಿನವಾದ ರವಿವಾರ ರತ್ನಾಕರವರ್ಣಿವೇದಿಕೆಯಲ್ಲಿ ಬೆಳಗ್ಗೆ ಧಾರವಾಡದ ರಯೀಝ್ ಬಾಲೇಖಾನ್ ಮತ್ತು ಹಫೀಝ್ ಬಾಲೇಖಾನ್ ಹಾಗೂ ತಂಡದಿಂದ ದಾಸವಾಣಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವು ಆರಂಭಗೊಂಡು ಮಂಗಳೂರಿನ ಸನಾತನ ನಾಟ್ಯಾಲಯ ತಂಡದಿಂದ ವಿದುಷಿ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್‌ರ ನಿರ್ದೇಶನದಲ್ಲಿ ನೃತ್ಯ ವೈವಿಧ್ಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಿತು.
ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ರಾಜಸ್ಥಾನದ ಘೇವರ್‌ಖಾನ್ ಮತ್ತು ತಂಡ ಇವರಿಂದ ರಾಜಸ್ಥಾನದ ಜಾನಪದ ವೈಭವ, ಶರಣಪ್ಪ ವಡಿಗೇರಿ ಮತ್ತು ತಂಡದಿಂದ ಜನಪದ ಹಾಡುಗಳು, ಬೆಂಗಳೂರು ರಮೇಶ್ಚಂದ್ರ ರಾಗ ಸಂಯೋಜನೆಯಲ್ಲಿ ಸಂಗೀತ ಲೋಕದ ಖ್ಯಾತ ಕಲಾವಿದರಿಂದ ಸುಗಮ ಸಂಗೀತ ಪ್ರಸ್ತುತಗೊಂಡಿತು.
ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವೇದಿಕೆಯಲ್ಲಿ ತನ್ವಿ ಡಿ.ಐ ಪುತ್ತೂರು ಇವರಿಂದ ದೇವರನಾಮ, ಭೂಮಿಕಾ ಮಧುಸೂದನ್ ಬೆಂಗಳೂರು ಇವರಿಂದ ಲಘು ಸಂಗೀತ, ಕಿಶೋರಿ ತುಳಸಿ ಹೆಗಡೆ ಶಿರಸಿ ಇವರಿಂದ ಯಕ್ಷರೂಪಕ, ಅನನ್ಯ ಎಂ. ಬೆಂಗಳೂರು ಇವರಿಂದ ಭರತನಾಟ್ಯ ನಡೆಯಿತು.
ಡಾ. ಶಿವರಾಮ ಕಾರಂತ ವೇದಿಕೆಯಲ್ಲಿ ಸಾಹಿತಿ ವೈದೇಹಿ ಅವರ ಕಥೆ, ಕಾಶಿನಾಥ್ ಅವರ ರಚನೆ ಮತ್ತು ಚಂಪಾ ಶೆಟ್ಟಿ ನಿರ್ದೇಶನದಲ್ಲಿ ಪ್ರದರ್ಶನಗೊಂಡ ರಂಗಮಂದಿರ ಬೆಂಗಳೂರು ಅಭಿನಯದ ಅಕ್ಕು ನಾಟಕ ನಾಟಕಾಸಕ್ತರ ಗಮನಸೆಳೆಯಿತು.
ಮಿಜಾರು ಅಣ್ಣಪ್ಪ ವೇದಿಕೆಯಲ್ಲಿ ದೇವಾನಂದ ಭಟ್ ಬೆಳುವಾಯಿ ಸಂಯೋಜನೆಯಲ್ಲಿ ಯಕ್ಷ- ಗಾನ-ಅಭಿನಯ- ಲಾಸ-ವಚನ ವೈವ ಮತ್ತು ಪುಂಡುವೇಷ ವೈಭವದೊಂದಿಗೆ ತೆಂಕುತಿಟ್ಟು ಯಕ್ಷಗಾನ ಸಾದರಗೊಂಡಿತು.
ಬೋಲ ಚಿತ್ತರಂಜನದಾಸ್ ವೇದಿಕೆಯಲ್ಲಿ ಹುಸೈನ್ ಕಾಟಿಪಳ್ಳ ಮತ್ತು ಬಳಗದಿಂದ ಬ್ಯಾರಿ ಸಾಹಿತ್ಯ - ಸಂಗೀತ ಸಂಗಮ, ಸಮರ ಸಾರಥಿ ಮಂಜು ರೈ ಮತ್ತು ತಂಡ, ಮಂಗಳೂರು ಬಲೇ ತೆಲಿಪಾವ, ಪ್ರಹ್ಲಾದ್ ಆಚಾರ್ಯ ಉಡುಪಿ ಇವರಿಂದ ಮಾತನಾಡುವ ಗೊಂಬೆ ಮತ್ತು ನೆರಳಿನಾಟವು ಎಲ್ಲರ ಮನಸುಗಳನ್ನು ಮೆಚ್ಚಿಸಿತು.
ಸುಬಾಶ್ಚಂದ್ರ ಪಡಿವಾಳ್ ವೇದಿಕೆ ಡಾ. ವಿ.ಎಸ್. ಆಚಾರ್ಯ ಸಭಾಭವನದಲ್ಲಿ ಬೆಳಗ್ಗೆ ಪಂಡಿತ್ ವಿನಾಯಕ ತೊರ್ವಿ ಮತ್ತು ಬಳಗ ಬೆಂಗಳೂರು ಇವರಿಂದ ಉದಯರಾಗದೊಂದಿಗೆ ಆರಂಭಗೊಂಡು ಪಂಡಿತ್ ಎಸ್. ಬಲ್ಲೇಶ್ ಹಾಗೂ ಸುರಮಣಿ ಕೃಷ್ಣ ಬಲ್ಲೇಶ್ ಚೆನ್ನೈ ಇವರಿಂದ ಶಹನಾಯಿ ವಾದನ, ಗಾರ್ಗಿ, ಅರ್ಚನಾ, ಅವನಿ , ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್ ಉಡುಪಿ ಇವರಿಂದ ಗಾನ ರಸಾಯನ, ವಾಣಿ ಮತ್ತು ವೀಣಾ ಸಹೋದರಿಯರು, ಮೈಸೂರು ಇವರಿಂದ ಹರಿಕಥಾ ಕೀರ್ತನ, ಬೆಂಗಳೂರಿನ ಹುಲಿಕಲ್ ನಾಗರಾಜ ಮತ್ತು ಬಳಗದಿಂದ ರಂಗಗೀತೆ, ಶ್ರೀವಿಭಾ ಭಟ್ ಮತ್ತು ಬಳಗ ಮಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಜೋತ್ಸ್ನಾ ಉಳ್ಳಾಲ ಇವರಿಂದ ಭರತನಾಟ್ಯ,ಪ್ರಸನ್ನ ಬಾಲ್ಕರ್ ಮತ್ತು ರಾಘವೇಂದ್ರ ಹೆಗಡೆ ಯಲ್ಲಾಪುರ ಯಕ್ಷಗಾನಾಮೃತಂ ಬೆಂಗಳೂರು ಆತ್ಮಾ ವೆಂಕಟೇಶ್ ಮತ್ತು ಬಳಗದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಅಗ್ನಿ ಮೈಸೂರು ಅವರಿಂದ ತಾಳವಾದ್ಯ ವೈವಿಧ್ಯ, ಮಹಾಲಕ್ಷ್ಮೀ ಶೆಣೈ ಮತ್ತು ಬಳಗ ಕಾರ್ಕಳ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಹರಿ ಮತ್ತು ಚೇತನಾ ನೂಪುರ್ ಪರ್ಪೋಮಿಂಗ್ ಆರ್ಟ್ಸ್ ಬೆಂಗಳೂರು ಇವರಿಂದ ಸಂಭ್ರಮ - ಕಥಕ್, ಭೂಷಣ್ಸ್ ಪರ್ಪೋರ್ಮಿಂಗ್ ಆರ್ಟ್ಸ್ ಬೆಂಗಳೂರು ಇವರಿಂದ ನಿಯೋ ಭರತನಾಟ್ಯ ಪ್ರಸ್ತುತಗೊಂಡಿತು.
ಕು.ಶಿ.ಹರಿದಾಸ ಟ್ಟ ವೇದಿಕೆ ವೇದಿಕೆಯಲ್ಲಿ ವಿದ್ವಾನ್ ದೀಪಕ್‌ಕುಮಾರ್ ಪುತ್ತೂರು ನಿರ್ದೇಶನದಲ್ಲಿ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ವತಿಯಿಂದ ನೃತ್ಯ ವೈವಿಧ್ಯ, ವಿದ್ಯಾಶ್ರೀ ರಾಧಾಕೃಷ್ಣ ನಿರ್ದೇಶನದಲ್ಲಿ ಗಾನ ನೃತ್ಯ ಅಕಾಡೆಮಿ, ಮಂಗಳೂರು ತಂಡದಿಂದ ಭಕ್ತಿ-ಭಾವ- ನೃತ್ಯ -ಸಂಗಮ, ವಿದುಷಿ ಪ್ರವಿತಾ ಅಶೋಕ್ ನಿರ್ದೇಶನದಲ್ಲಿ ನೃತ್ಯವಸಂತ ನಾಟ್ಯಾಲಯ, ಕುಂದಾಪುರ ಇದರಿಂದ ನೃತ್ಯ ಸಿಂಚನ ಹಾಗೂ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ವೇದಿಕೆಯಲ್ಲಿ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇದರಿಂದ ಪ್ರಸ್ತುತಗೊಂಡ ನರಕಾಸುರ ವಧೆ ಗರುಡ ಗರ್ವಭಂಗ ಬೊಂಬೆಯಾಟವು ಸೇರಿದ ಜನರನ್ನು ಮನಸೂರೆಗೊಳಿಸುವ ಮೂಲಕ ಕಳೆದ ಮೂರು ದಿನಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತೆ ಮುಂದಿನ ವರ್ಷದ ನುಡಿಸಿರಿಯನ್ನು ಕಾತರದಿಂದ ಕಾಯುವಂತೆ ಮಾಡಿದೆ.
ಚಿತ್ರಗಳು : ಮಾನಸ ಡಿಜಿಟಲ್ಸ್







