ಮೊಹಾಲಿ ಟೆಸ್ಟ್‌ಗೆ ಬ್ರಾಡ್ ಅಲಭ್ಯ?

ವಿಶಾಖಪಟ್ಟಣ, ನ.20: ‘‘ಬಲಗಾಲಿನ ನೋವಿನಿಂದ ಚೇತರಿಸಿಕೊಳ್ಳಲು ನನಗೆ ಇನ್ನೂ ಕೆಲವು ಸಮಯ ಬೇಕಾಗಬಹುದು’’ ಎಂದು ಹೇಳಿರುವ ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ನ.26 ರಂದು ಆರಂಭವಾಗಲಿರುವ ಮೂರನೆ ಟೆಸ್ಟ್‌ನಿಂದ ಹೊರಗುಳಿಯುವ ಸೂಚನೆ ನೀಡಿದ್ದಾರೆ.
ಎರಡನೆ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನ 2ನೆ ಓವರ್‌ನಲ್ಲಿ ಚೆಂಡನ್ನು ತಡೆಯಲು ಡೈವ್ ಮಾಡಿದಾಗ ನನ್ನ ಕಾಲಿನ ನರಕ್ಕೆ ಹಾನಿಯಾಗಿದೆ. ಕಾಲಿಗೆ ಗಾಯವಾಗಿದ್ದರೂ ಬೇರೆ ವಿಧಿಯಿಲ್ಲದೆ ಪಂದ್ಯವನ್ನು ಆಡಿದ್ದೇನೆ ಎಂದು ಬ್ರಾಡ್ ಹೇಳಿದ್ದಾರೆ.
ಬ್ರಾಡ್ ಶನಿವಾರ ಗಾಯಗೊಂಡಿದ್ದರೂ ಎರಡನೆ ಟೆಸ್ಟ್‌ನ 2ನೆ ಇನಿಂಗ್ಸ್‌ನಲ್ಲಿ 33 ರನ್‌ಗೆ 4 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ.
‘‘ಮುಂಬೈ ಟೆಸ್ಟ್ ಆರಂಭವಾಗಲು ಇನ್ನೂ 17 ದಿನಗಳು ಬಾಕಿಯಿದೆ. ನಾನು ಖಂಡಿತವಾಗಿಯೂ ಮುಂಬೈನಲ್ಲಿ ನಡೆಯುವ ನಾಲ್ಕನೆ ಟೆಸ್ಟ್‌ಗೆ ಲಭ್ಯವಿರುವೆ. ಆದರೆ, ಮೊಹಾಲಿಯಲ್ಲಿ ನಡೆಯುವ ಮೂರನೆ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಕಡಿಮೆ. ಮೊಹಾಲಿ ಭಾರತದಲ್ಲಿರುವ ವೇಗದ ಬೌಲರ್‌ಗಳ ನೆಚ್ಚಿನ ಮೈದಾನವಾಗಿದೆ. ಕಾಲಿನಲ್ಲಿ ಸ್ವಲ್ಪ ನೋವಿದೆ. ವೇಗದ ಬೌಲರ್‌ಗೆ ಇದು ಸರ್ವೇಸಾಮಾನ್ಯವಾಗಿದೆ’’ ಎಂದು ತನ್ನ ಬಲಗಾಲಿನ ನೋವಿನ ಬಗ್ಗೆ ಬ್ರಾಡ್ ಪ್ರತಿಕ್ರಿಯಿಸಿದರು.







