‘ನೋಟು ನಿಷೇಧದಿಂದ ನನಗೆ ತೊಂದರೆಯಾಗಿಲ್ಲ’
ಬಲಾಲಿ(ಹರ್ಯಾಣ),ನ.20: ತನ್ನ ಎಲ್ಲ ಹಣ ಬ್ಯಾಂಕುಗಳಲ್ಲಿ ಸುರಕ್ಷಿತವಾಗಿ ರುವುದರಿಂದ ಮತ್ತು ತಾನು ಚೆಕ್‌ಗಳ ಮೂಲಕ ವ್ಯವಹರಿಸುವುದರಿಂದ ಪ್ರಧಾನಿ ನರೇಂದ್ರ ಮೋದಿಯವರ ನೋಟು ನಿಷೇಧ ಕ್ರಮದಿಂದ ತನಗೆ ಯಾವುದೇ ತೊಂದರೆ ಯಾಗಿಲ್ಲ ಎಂದು ಖ್ಯಾತ ಬಾಲಿವುಡ್ ನಟ ಆಮಿರ್ ಖಾನ್ ಇಂದಿಲ್ಲಿ ಹೇಳಿದರು.
ನೋಟು ನಿಷೇಧ ಕ್ರಮದ ಬಗ್ಗೆ ಬಾಲಿವುಡ್‌ನಲ್ಲಿ ಭಿನ್ನಾಭಿಪ್ರಾಯಗಳಿದ್ದು, ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಸೇರಿದಂತೆ ಹೆಚ್ಚಿನ ಸೆಲೆಬ್ರಿಟಿಗಳು ಸರಕಾರದ ಕ್ರಮವನ್ನು ಬೆಂಬಲಿಸಿದ್ದರೆ, ಇನ್ನು ಕೆಲವರು ಇದರಿಂದ ಜನರಿಗೆ ತೊಂದರೆ ಯಾಗುತ್ತಿದೆ ಎಂದು ಹೇಳಿದ್ದಾರೆ.
ಸೆಲೆಬ್ರಿಟಿಗಳಾದ ನಮಗೆ ಏನನ್ನಾದರೂ ಹೇಳಬೇಕಾದರೆ ಭಯವಾಗುತ್ತದೆ. ನಾವೇನೇ ಹೇಳಿದರೂ ಅದಕ್ಕೆ ವಿರುದ್ಧವಾಗಿ ಪರಿಗಣಿಸಲಾಗುತ್ತದೆ ಎಂದು ಕುಸ್ತಿಪಟು ಗೀತಾ ಫೋಗಟ್ ಅವರ ಮದುವೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಭೇಟಿ ನೀಡಿದ್ದ ಆಮಿರ್ ಹೇಳಿದರು. ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ತನ್ನ ‘ದಂಗಲ್’ ಚಿತ್ರದಲ್ಲಿ ಗೀತಾರ ಕುಸ್ತಿಪಟು ತಂದೆ ಮಹಾವೀರ ಸಿಂಗ್ ಫೋಗಟ್ ಅವರ ಪಾತ್ರವನ್ನು ಆಮಿರ್ ನಿರ್ವಹಿಸುತ್ತಿದ್ದಾರೆ.





