Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸರಕಾರ ಚಾಪೆಯ ಕೆಳಗೆ ನುಸುಳಿದರೆ...

ಸರಕಾರ ಚಾಪೆಯ ಕೆಳಗೆ ನುಸುಳಿದರೆ ಭ್ರಷ್ಟರು ರಂಗೋಲಿಯಡಿಗೆ...!

ವಾರ್ತಾಭಾರತಿವಾರ್ತಾಭಾರತಿ20 Nov 2016 11:49 PM IST
share

ಹೊಸದಿಲ್ಲಿ, ನ.20: ವ್ಯಾಪಕವಾಗಿರುವ ಭ್ರಷ್ಟಾಚಾರ ಹಾಗೂ ತೆರಿಗೆಗಳ್ಳತನಗಳನ್ನು ತಡೆಯಲು ದೊಡ್ಡ ವೌಲ್ಯದ ನೋಟುಗಳನ್ನು ಸರಕಾರ ರದ್ದುಗೊಳಿಸಿದೆ. ಆದರೆ, ಸರಕಾರದ ಈ ಹಠಾತ್ ಕ್ರಮಕ್ಕೆ ಸೆಡ್ಡು ಹೊಡೆಯಲು ಭಾರತೀಯರು ರೋಲೆಕ್ಸ್ ವಾಚ್ ಖರೀದಿಗೆ ‘ನಗದು ಕೂಲಿಗಳಿಂದ’ ತೊಡಗಿ ಹಲವು ವಿಶಿಷ್ಟ ದಾರಿಗಳನ್ನು ಕಂಡುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನ.8ರಂದು ರೂ.500 ಹಾಗೂ 1000 ಮುಖಬೆಲೆಯ ನೋಟುಗಳ ರದ್ದತಿಯನ್ನು ಘೋಷಿಸುವ ಮೂಲಕ ದೇಶಾದ್ಯಂತ ಆಘಾತದ ಅಲೆಗಳನ್ನು ಕಳುಹಿಸಿದ್ದರು. ಅದಾಗಿ ತಾಸಿನೊಳಗೆ ಚಲಾವಣೆಯಲ್ಲಿರುವ ನೋಟುಗಳ ಶೇ.85ರಷ್ಟು ನೋಟುಗಳು ರದ್ದಿ ಕಾಗದಗಳಾದುವು.

ಈ ಘೋಷಣೆಯು ಭಾರತದ ನಗದು ಆಧರಿತ ಆರ್ಥಿಕತೆ ಯಲ್ಲಿ ತಲ್ಲಣ ಸೃಷ್ಟಿಸಿತು. ಅಘೋಷಿತ ಹಾಗೂ ಲೆಕ್ಕ ನೀಡದ ಸಂಪತ್ತನ್ನು ಶೇಖರಿಸಿಟ್ಟ ತಮ್ಮ ಕಪ್ಪು ಹಣವನ್ನು ವಿನಿಮಯ ಗೊಳಿಸಲು ಅಥವಾ ಚಿನ್ನ ಹಾಗೂ ಐಶಾರಾಮಿ ವಸ್ತುಗಳ ಖರೀದಿಗೆ ಉಪಯೋಗಿಸಲು ಹುಚ್ಚು ಧಾವಂತ ನಡೆಸಿದರು.

ದೇಶದಲ್ಲಿ ಅಂದಾಜು 2,100 ಮಂದಿ ರೂ.340 ಕೋಟಿಗೂ ಹೆಚ್ಚು ಸಂಪತ್ತುಳ್ಳ ಕುಬೇರರಿದ್ದರೂ, 2012-13ರಲ್ಲಿ ರೂ.50 ಕೋಟಿಗಿಂತ ಹೆಚ್ಚು ಸಂಪಾದಿಸುವ ಕೇವಲ 6 ಮಂದಿಯಷ್ಟೇ ರಿಟರ್ನ್ಸ್ ದಾಖಲಿಸಿದ್ದಾರೆಂದು ನಂಬಲಾಗಿದೆ.

ರೂ.2.5 ಲಕ್ಷಕ್ಕಿಂತ ಹೆಚ್ಚು ಹಣ ಠೇವಣಿಯಿರಿಸುವವರ ವಿವರವನ್ನು ಬ್ಯಾಂಕ್‌ಗಳು ವರದಿ ಮಾಡಲೇ ಬೇಕು ಹಾಗೂ ಅಘೋಷಿತ ಆಸ್ತಿಯಿರುವುದು ಪಾವತಿಸಬೇಕಾದ ತೆರಿಗೆಯ ದುಪ್ಪಟ್ಟು ದಂಡ ಪಾವತಿಗೆ ಕಾರಣವಾಗಬಹುದೆಂದು ಸರಕಾರ ಎಚ್ಚರಿಸುತ್ತಲೇ ಬಂದಿದೆ.

ನಗದು ಕೂಲಿಗಳು: ಕೆಲವು ಕೈಗಾರಿಕೆಗಳ ಮಾಲಕರು ಹಾಗೂ ವ್ಯಾಪಾರಿಗಳು, ಡಿ.30ರ ಅಂತಿಮ ಗಡುವಿನೊಳಗೆ ತಮ್ಮಲ್ಲಿರುವ ಹಳೆಯ ನೋಟುಗಳ ಬದಲಾವಣೆಗಾಗಿ ಬ್ಯಾಂಕ್‌ಗಳಲ್ಲಿ ಸರತಿಯ ಸಾಲಿನಲ್ಲಿ ನಿಲ್ಲಲು ಸಿಬ್ಬಂದಿಯನ್ನು ವಿನಂತಿಸಿದ ಅಥವಾ ಸಂಬಳಕ್ಕೆ ಆಳುಗಳನ್ನು ನೇಮಿಸಿದ ಹಲವು ಪ್ರಕರಣಗಳು ವರದಿಯಾಗಿವೆ.

 ಮೊದಲು ಬ್ಯಾಂಕ್ ಕೌಂಟರ್‌ಗಳಲ್ಲಿ ಹಳೆ ನೋಟು ವಿನಿ ಮಯದ ಮಿತಿ ರೂ. 4,000 ಇದ್ದುದನ್ನು, ಅಪ್ರಾಮಾ ಣಿಕರು ನೋಟು ಬದಲಾಯಿಸಲು ಬಡವರನ್ನು ಸಂಬಳಕ್ಕೆ ನೇಮಿಸು ತ್ತಿರುವುದು ಸರಕಾರದ ಗಮನಕ್ಕೆ ಬಂದ ಬಳಿಕ ರೂ.2,000ಕ್ಕೆ ಇಳಿಸಲಾಗಿದೆ. ಒಬ್ಬನೇ ವ್ಯಕ್ತಿ ಹಲವು ಬಾರಿ ನೋಟು ವಿನಿಮಯ ಮಾಡುವುದನ್ನು ತಪ್ಪಿಸಲು ಚುನಾವಣೆಗಳಲ್ಲಿರುವಂತೆ ಬೆರಳಿಗೆ ಶಾಯಿ ಹಚ್ಚುವಂತೆ ಬ್ಯಾಂಕ್‌ಗಳಿಗೆ ಸರಕಾರ ಸೂಚಿಸಿತು.

ರೋಲೆಕ್ಸ್ ಖರೀದಿಗೆ ಓಟ: ನೋಟು ರದ್ದತಿ ಘೋಷಣೆಯ ಬಳಿಕ ಶ್ರೀಮಂತರು ತಮ್ಮ ಲೆಕ್ಕ ನೀಡದ ಹಣದಿಂದ ದುಬಾರಿ ವಸ್ತುಗಳನ್ನು ಖರೀದಿಸಲು ಧಾವಿಸಿದರು. ರೋಲೆಕ್ಸ್ ಹಾಗೂ ಡಿಯೋರ್‌ಗಳಂತಹ ಹಲವು ಐಶಾರಾಮಿ ಬ್ರಾಂಡ್‌ಗಳ ಮಾರಾಟಗಾರರು ನ.8ರ ಮಧ್ಯರಾತ್ರಿಯ ತನಕ ಅಂಗಡಿಗಳನ್ನು ತೆರೆದಿರಿಸುತ್ತೇವೆಂದು ಗಿರಾಕಿಗಳಿಗೆ ಇ-ಮೇಲ್ ಕಳುಹಿಸಿದ್ದರೆಂದು ಇಕಾನಮಿಕ್ ಟೈಂಸ್ ವರದಿ ಮಾಡಿದೆ.

ದಿಲ್ಲಿಯ ಜಾಗತಿಕ ಮಟ್ಟದ ಬ್ರಾಂಡೆಡ್ ಫ್ಯಾಶನ್ ಉಡುಪುಗಳ ಮಾರಾಟದ ಪ್ರಸಿದ್ಧ ಅಂಗಡಿಯೊಂದು ಅಂದು ಇಡೀ ರಾತ್ರಿ ತೆರೆದಿದ್ದು, 3 ತಾಸಿಗೂ ಕಡಿಮೆ ಅವಧಿಯಲ್ಲಿ ರೂ. 1 ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸಿದೆಯೆಂದು ಅದು ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X