Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕರೆನ್ಸಿ ಅಮಾನ್ಯತೆ... ಒಳಿತೆಷ್ಟು ...?...

ಕರೆನ್ಸಿ ಅಮಾನ್ಯತೆ... ಒಳಿತೆಷ್ಟು ...? ಕೆಡುಕೆಷ್ಟು....?

ಗಿರೀಶ್ ಶಹಾಣೆಗಿರೀಶ್ ಶಹಾಣೆ20 Nov 2016 11:59 PM IST
share
ಕರೆನ್ಸಿ ಅಮಾನ್ಯತೆ...  ಒಳಿತೆಷ್ಟು ...?  ಕೆಡುಕೆಷ್ಟು....?

ಕರೆನ್ಸಿ ಅಮಾನ್ಯತೆಗೆ ಭಯೋತ್ಪಾದನಾ ವಿರೋಧಿ ಸ್ವರೂಪವನ್ನು ನೀಡುವುದು ಅಮಾನ್ಯತೆಯ ಪರ ವಾದದ ಅತ್ಯಂತ ದುರ್ಬಲಕೊಂಡಿಯಾಗಿದೆ. ಹಳೆಯ 1,000 ರೂ. ಮುಖಬೆಲೆಯ ನೋಟುಗಳ ಹಾಗೆಯೇ 2,000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಫೋರ್ಜರಿ ಮಾಡುವುದು ಸುಲಭವೆಂಬುದು ಬಹಿರಂಗವಾದ ಬಳಿಕ ಈ ವಾದವು ಮತ್ತಷ್ಟು ದುರ್ಬಲಗೊಂಡಿದೆ. ಆದರೆ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ನೋಟುಗಳ ಅಮಾನ್ಯತೆಯನ್ನು ಭಯೋತ್ಪಾದನೆಯ ಆ್ಯಂಗಲ್‌ನೊಂದಿಗೆ ಥಳಕು ಹಾಕಲು ಕಷ್ಟಪಟ್ಟು ಪ್ರಯತ್ನಿಸುತ್ತಿದ್ದಾರೆ. 

ಕರೆನ್ಸಿ ಅಮಾನ್ಯತೆಯು ದೇಶದಲ್ಲಿ ವ್ಯಾಪಕ ಗೊಂದಲ, ಆತಂಕವನ್ನು ಸೃಷ್ಟಿಸಿದೆ. ಕಳೆದ ಕೆಲವು ದಿನದಿಂದ ನಡೆಯುತ್ತಿರುವ ಅಮಾನ್ಯತೆ ಪ್ರಕ್ರಿಯೆಯನ್ನು ಕೂಲಂಕಶವಾಗಿ ನೋಡಿದಾಗ ನನಗೆ ಇದರ ಸಾಧಕ, ಬಾಧಕಗಳ ಅರಿವಾಗಿದೆ.

ತಾನು ಯಾರ ಕೈಗೊಂಬೆಯಲ್ಲವೆಂಬುದನ್ನು ಪ್ರಧಾನಿ ನರೇಂದ್ರ ಮೋದಿ ಈ ಮೂಲಕ ಸಾಬೀತುಪಡಿಸಿದ್ದಾರೆ. ಅವರ ಈ ನಡೆಯು ಅವರ ಅನೇಕ ಬೆಂಬಲಿಗರಿಗೇ ಆಘಾತವನ್ನುಂಟು ಮಾಡಿದೆ. ಇದೇ ವೇಳೆ ದೇಶಾದ್ಯಂತ ವರ್ತಕರಿಗೆ ವ್ಯಾಪಕ ನಷ್ಟಕ್ಕೆ ಕಾರಣವಾಗಿದೆ. ಆದಾಗ್ಯೂ ರಾಜಕೀಯ ದೃಷ್ಟಿಯಿಂದ ಇದೊಂದು ಅತ್ಯಂತ ದಿಟ್ಟ ಹಾಗೂ ವೀರೋಚಿತ ಹೆಜ್ಜೆಯಾಗಿದೆ.

ಸಾಧಕಗಳು

ಕರೆನ್ಸಿ ಅಮಾನ್ಯತೆಯಿಂದಾಗಿ ಅಗಾಧ ಪ್ರಮಾಣದ ಸಂಪತ್ತು ಶ್ರೀಮಂತವರ್ಗದಿಂದ ಕಡಿಮೆ ಸ್ಥಿತಿವಂತರಿಗೆ ವರ್ಗಾವಣೆಗೊಳ್ಳಲು ಕಾರಣವಾಗುತ್ತದೆ. ಕಡಿಮೆ ಆದಾಯವಿರುವವರ ಖಾತೆಗೆ ಹಳೆಯ 500 ರೂ. ಹಾಗೂ 1 ಸಾವಿರ ರೂ. ನೋಟುಗಳನ್ನು ಹಾಕಿಸುವುದು ಹಾಗೂ ಒಮ್ಮೆ ಹೊಸ ಕರೆನ್ಸಿ ಮುಕ್ತವಾಗಿ ದೊರೆಯತೊಡಗಿದಾಗ ಖಾತೆದಾರನಿಗೆ ಮೊದಲೇ ಮಾಡಿಕೊಂಡ ಒಪ್ಪಂದದಂತೆ ಪರ್ಸೆಂಟೇಜ್ ಕಮೀಶನ್ ನೀಡಿ, ಆ ಹಣವನ್ನು ಹಿಂಪಡೆಯುವುದು, ಕಪ್ಪುಹಣವನ್ನು ಬಿಳುಪುಗೊಳಿಸಲು ಇರುವ ಅತ್ಯಂತ ಚಲಾಕಿತನದ ಮಾರ್ಗವಾಗಿದೆ. 2.5 ಲಕ್ಷಕ್ಕಿಂತಲೂ ಕಡಿಮೆ ಮೊತ್ತದ ನಗದು ಠೇವಣಿಗಳ ಕುರಿತಾಗಿ ಯಾವುದೇ ತನಿಖೆಯನ್ನು ನಡೆಸಲಾಗುವುದಿಲ್ಲವೆಂದು ಅರುಣ್ ಜೇಟ್ಲಿ ಭರವಸೆ ನೀಡಿರುವುದು, ಈ ರೀತಿಯ ವಹಿವಾಟುಗಳಿಗೆ ಸುಗಮಹಾದಿಯನ್ನು ಕಲ್ಪಿಸಿಕೊಟ್ಟಿದೆ.

ಕರೆನ್ಸಿ ಅಮಾನ್ಯತೆಯ ಪರಿಣಾಮವಾಗಿ ಲಕ್ಷಾಂತರ ಜನರು ಇದೇ ಮೊದಲ ಬಾರಿಗೆ ಬ್ಯಾಂಕಿಂಗ್ ಅಥವಾ ಇಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿರುವುದರಿಂದ ಅವರು ತಮಗಾಗಿಯೇ ದೀರ್ಘಾವಧಿಯ ಪ್ರಯೋಜನಗಳನ್ನು ಸೃಷ್ಟಿಸುವ ಜೊತೆಗೆ ಆರ್ಥಿಕತೆಗೆ ದೊಡ್ಡ ಮಟ್ಟದ ಕೊಡುಗೆಯನ್ನು ನೀಡುತ್ತಿದ್ದಾರೆ.
ರದ್ದಾದ ಹಣವು ಗಣನೀಯ ಪ್ರಮಾಣದಲ್ಲಿ ಮರಳಲು ವಿಫಲವಾದಲ್ಲಿ ಸರಕಾರಕ್ಕೆ ಅದೃಷ್ಟವಶಾತ್ ಲಾಭವೇ ಆಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇದಕ್ಕೆ ಸರಿಸಮಾನದ ಮೊತ್ತವನ್ನು ಬ್ಯಾಂಂಕ್‌ಗಳಿಗೆ ಡಿವಿಡೆಂಡ್ ಆಗಿ ವರ್ಗಾಯಿಸಬಹುದೆಂದು ಕೆಲವು ತಜ್ಞರು ಸಹೆ ನೀಡಿದ್ದಾರೆ.ಕರೆನ್ಸಿ ಅಮಾನ್ಯತೆಯಿಂದಾಗಿ ಆಘೋಷಿತ ನಗದನ್ನು ದಾಸ್ತಾನು ಮಾಡಿರುವವರು, ಇದೇ ಮೊದಲ ಬಾರಿ ಕೆಲವು ಬಗೆಯ ಶಿಕ್ಷೆಯನ್ನು ಎದುರಿಬೇಕಾಗಿ ಬರಬಹುದು.

ನೋಟು ಅಮಾನ್ಯತೆಯ ಕೆಡುಕುಗಳು

ಕರೆನ್ಸಿ ಅಮಾನ್ಯತೆಯೊಂದಿಗೆ ಕಪ್ಪುಹಣದ ಸಾಮ್ರಾಜ್ಯವು ಅಂತ್ಯಗೊಳ್ಳಲಾರದು ಅಥವಾ ಅದಕ್ಕೆ ಗಣನೀಯವಾದ ಧಕ್ಕೆಯನ್ನುಂಟು ಮಾಡುವುದೆಂದು ಹೇಳಲು ಸಾಧ್ಯವಿಲ್ಲ. ಎನ್. ಚಂದ್ರಮೋಹನ್, ಪ್ರಭಾತ್ ಪಟ್ನಾಯಕ್ ಹಾಗೂ ಪ್ರಣಬ್ ಸೇನ್ ಬೆಟ್ಟು ಮಾಡಿರುವಂತೆ ನೋಟುಗಳ ಅಮಾನ್ಯತೆಯು ಕಪ್ಪುಹಣದ ದಾಸ್ತಾನಿನ ಮೇಲೆ ಪರಿಣಾಮ ಬೀರುವುದೇ ಹೊರತು ಕಪ್ಪುಹಣದ ಹರಿವಿನ ಮೇಲಲ್ಲ. ಒಮ್ಮೆ ಕಪ್ಪುಹಣ ಮತ್ತೆ ಮರುಸಂಗ್ರಹವಾದಲ್ಲಿ ಭ್ರಷ್ಟಾಚಾರ ಯಂತ್ರವು ಪೂರ್ಣಶಕ್ತಿಯೊಂದಿಗೆ ಕಾರ್ಯಾಚರಿಸಲಿದ್ದು, ಹೊಸತಾಗಿ ಅಗಾಧ ಪ್ರಮಾಣದ ಅಘೋಷಿತ ಸಂಪತ್ತನ್ನು ಸೃಷ್ಟಿಸಲಿದೆ.
  
 ತೆರಿಗೆ ಪಾವತಿಸದ ಈ ಹಣದ ದಾಸ್ತಾನುಗಳನ್ನು ಗಡುವಿಗೆ ಮೊದಲೇ ಯಶಸ್ವಿಯಾಗಿ ಹೊಸ ನೋಟುಗಳಾಗಿ ಪರಿವರ್ತಿಸುವ ಸಾಧ್ಯತೆಗಳಿವೆ. ವಿಶೇಷವಾಗಿ ರಾಜಕಾರಣಿಗಳು ಬ್ಯಾಂಕುಗಳ ಮೇಲೆ ನಿಯಂತ್ರಣ ಹೊಂದಿರುತ್ತಾರೆ ಅಥವಾ ಬ್ಯಾಂಕುಗಳನ್ನು ನಿಯಂತ್ರಿಸುವವರ ಜೊತೆ ನಿಕಟವಾದ ಸಂಪರ್ಕವನ್ನು ಇಟ್ಟುಕೊಂಡಿರುತ್ತಾರೆ. ಒಂದು ವೇಳೆ ದಾಳಿಯ ಮುಖ್ಯ ಗುರಿ ತಪ್ಪಿದಲ್ಲಿ ಅಥವಾ ಅದಕ್ಕೆ ಸಣ್ಣ ಮಟ್ಟದ ಹಾನಿಯಾದರೆ, ಇತರ ಕೋಟ್ಯಂತರ ಮಂದಿ ನೋವಿನಿಂದ ಯಾತನೆ ಪಟ್ಟರೆ ಅಥವಾ ಗಂಭೀರವಾದ ಗಾಯಗಳಾದರೆ, ಈ ದಾಳಿಯ ಬುದ್ಧಿಮತ್ತೆಯನ್ನೇ ಪ್ರಶ್ನಿಸಬೇಕಾಗುತ್ತದೆ. ನೋಟುಗಳ ಅಮಾನ್ಯತೆಯ ವಿಷಯಕ್ಕೂ ಇದು ಅನ್ವಯವಾಗುತ್ತದೆ.
 ಹಣದ ಹರಿವನ್ನು ತ್ವರಿತವಾಗಿ ಪುನರ್‌ಸ್ಥಾಪಿಸದೆ ಇದ್ದಲ್ಲಿ ದೇಶದ ಆರ್ಥಿಕತೆ ಗಣನೀಯವಾಗಿ ಇಳಿಮುಖವಾಗಲಿದೆ ಎಂದು ಅಜಯ್‌ಶಾ ಗಮನಸೆಳೆಯುತ್ತಾರೆ. ಸರಕಾರವು ವಿರುದ್ಧ ದಿಕ್ಕಿನಿಂದ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿರುವುದರಿಂದ ಜನಸಾಮಾನ್ಯರು ಹಾಗೂ ಸಣ್ಣ ಪುಟ್ಟ ಸಂಸ್ಥೆಗಳು ಬಾಧೆಗೊಳಗಾಗುತ್ತಿದ್ದಾರೆಂದು ಗೌತಮ್ ಭಾನ್ ಹೇಳುತ್ತಾರೆ.
ಕರೆನ್ಸಿ ಅಮಾನ್ಯತೆಗೆ ಭಯೋತ್ಪಾದನಾ ವಿರೋಧಿ ಸ್ವರೂಪವನ್ನು ನೀಡುವುದು ಅಮಾನ್ಯತೆಯ ಪರ ವಾದದ ಅತ್ಯಂತ ದುರ್ಬಲಕೊಂಡಿಯಾಗಿದೆ. ಹಳೆಯ 1,000 ರೂ. ಮುಖಬೆಲೆಯ ನೋಟುಗಳ ಹಾಗೆಯೇ 2,000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಫೋರ್ಜರಿ ಮಾಡುವುದು ಸುಲಭವೆಂಬುದು ಬಹಿರಂಗವಾದ ಬಳಿಕ ಈ ವಾದವು ಮತ್ತಷ್ಟು ದುರ್ಬಲಗೊಂಡಿದೆ. ಆದರೆ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ನೋಟುಗಳ ಅಮಾನ್ಯತೆಯನ್ನು ಭಯೋತ್ಪಾದನೆಯ ಆ್ಯಂಗಲ್‌ನೊಂದಿಗೆ ಥಳಕು ಹಾಕಲು ಕಷ್ಟಪಟ್ಟು ಪ್ರಯತ್ನಿಸುತ್ತಿದ್ದಾರೆ. ಭಯೋತ್ಪಾದನೆಗೆ ದೊರೆಯುತ್ತಿದ್ದ ಆರ್ಥಿಕ ನೆರವಿಗೆ ಅಂಕುಶ ಹಾಕಿದ ಪರಿಣಾಮವಾಗಿ ಕಾಶ್ಮೀರದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಿಂತುಹೋಗಿವೆಯೆಂದು ಅವರು ವಾದಿಸಿದ್ದಾರೆ. ಒಂದು ವೇಳೆ ಕಾಶ್ಮೀರದಲ್ಲಿ ಹಿಂಸಾಚಾರವು ಮತ್ತೆ ತಲೆಯೆತ್ತಿದಲ್ಲಿ ನೋಟುಗಳ ಅಮಾನ್ಯತೆಯ ಕ್ರಮವು ವಿಫಲವಾಗಿದೆಯೆಂಬುದನ್ನು ಅವರು ಒಪ್ಪಿಕೊಳ್ಳುವರೆಂದು ನಾನು ಆಶಿಸುತ್ತೇನೆ.
ಚುನಾಯಿತ ನಾಯಕರು ಪ್ರತಿಕೂಲ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆಯೇ ಪ್ರಮುಖ ನಿರ್ಧಾರಗಳನ್ನು ಹೇಗೆ ಕೈಗೊಳ್ಳಬಹುದೆಂಬುದು ನನ್ನನ್ನು ಸದಾ ಅಚ್ಚರಿಗೀಡು ಮಾಡುತ್ತಿದೆ. ಸದ್ದಾಂ ಹುಸೇನ್ ಪತನದ ಆನಂತರ ಇರಾಕ್ ಹೇಗಿರಬೇಕೆಂಬ ಬಗ್ಗೆ ಜಾರ್ಜ್ ಬುಶ್ ಯಾವುದೇ ಯೋಜನೆಯನ್ನು ಹೊಂದಿರಲಿಲ್ಲ. ಯುರೋಪ್ ಒಕ್ಕೂಟದಿಂದ ಬ್ರಿಟನ್ ನಿರ್ಗಮಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹವನ್ನು ಘೋಷಿಸುವಾಗ ಆಗಿನ ಬ್ರಿಟಿಶ್ ಪ್ರಧಾನಿ ಡೇವಿಡ್ ಕ್ಯಾಮರೂನ್‌ಗೆ ಯಾವುದೇ ಮುನ್ನೋಟವಿರಲಿಲ್ಲ. ಅದೇ ರೀತಿ ಕರೆನ್ಸಿ ಅಮಾನ್ಯತೆಯನ್ನು ಪ್ರಕಟಿಸಿದಾಗ, ಮೋದಿಗೆ ಅದರ ಪ್ರತಿಕೂಲ ಪರಿಣಾಮಗಳ ಬಗ್ಗೆ ಯಾವುದೇ ಸುಳಿವಿರಲಿಲ್ಲ. ಒಂದು ಕಾರ್ಯಾಚರಣೆಯ ಯಶಸ್ವಿಯಾಗಬೇಕಾದರೆ ಅಚ್ಚರಿಯ ಕ್ರಮವನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯಿರುತ್ತದೆ. ಆದರೆ ಕೇವಲ ಅಚ್ಚರಿಯನ್ನು ನೀಡುವ ಬಗ್ಗೆಯೇ ಹೆಚ್ಚು ಮೋದಿ ಸರಕಾರದ ಗಮನಹರಿಸಿದ್ದರಿಂದ ಸಮಸ್ಯೆಯನ್ನು ಎದುರಿಸುವುದಕ್ಕೆ ಅದಕ್ಕೆ ಆಡಳಿತವನ್ನು ಸಿದ್ಧಗೊಳಿಸಲು ಸಾಧ್ಯವಾಗದೆ ಹೋಯಿತು.
   ಎಟಿಎಂನಿಂದ ಒಂದು ಬಾರಿಗೆ ಹಿಂಪಡೆಯಬಹುದಾದ ಹಣದ ಗರಿಷ್ಠ ಮಿತಿಯನ್ನು 2 ಸಾವಿರ ರೂ.ಗಳಿಂದ 2500 ರೂ.ಗಳಿಗೆ ಹೆಚ್ಚಿಸಿರುವುದು ಹಾಗೂ ನಗದು ವಿನಿಮಯವನ್ನು 4 ಸಾವಿರ ರೂ.ಗಳಿಂದ ಇಳಿಕೆ ಮಾಡಿರುವುದರಿಂದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಲು ಸಾಧ್ಯವಿಲ್ಲ.
 ಮೋದಿ ನಾಯಕತ್ವದಲ್ಲಿ ಬಿಜೆಪಿಯು ಈ ತನಕ ಮುಖ್ಯವಾಹಿನಿಯ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮ(ಸೋಶಿಯಲ್ ಮೆಡಿಯಾ)ಗಳನ್ನು ನಿಭಾಯಿಸುವಲ್ಲಿ ನಿಷ್ಣಾತವಾಗಿತ್ತು. ಆದರೆ ದೇಶಾದ್ಯಂತ ಕೋಟ್ಯಂತರ ಜನರು ತಾವೇ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಪಡೆಯುವುದಕ್ಕಾಗಿ ಬ್ಯಾಂಕುಗಳು, ಎಟಿಎಂಗಳ ಮುಂದೆ ಗಂಟೆಗಟ್ಟಲೆ ಸರತಿಸಾಲಿನಲ್ಲಿ ನಿಲ್ಲುತ್ತಿರುವ ಶೋಚನೀಯ ಕಥೆಯ ಮೇಲೆ ಹಿಡಿತ ಸಾಧಿಸುವುದು ಬಿಜೆಪಿಗೆ ತುಂಬಾ ಕಷ್ಟಕರವಾಗಿಬಿಟ್ಟಿದೆ.
 ಮೋದಿಯ ಸ್ವಪ್ರಶಂಸೆಯು ಎಲ್ಲಾ ಎಲ್ಲೆಗಳನ್ನು ಮೀರಿ ಬೆಳೆದುಬಿಟ್ಟಿದೆ. ಅವರು ನಿರಂತರವಾಗಿ ತಾನೊಬ್ಬ ವಿಭಿನ್ನ ವ್ಯಕ್ತಿಯೆಂದು ಪ್ರಸ್ತಾಪಿಸುತ್ತಲೇ ಇರುತ್ತಾರೆ. ಯಾವುದೇ ಶ್ರೇಯಸ್ಸನ್ನು ಅವರು ತನ್ನ ತಂಡದೊಂದಿಗೆ ಹಂಚಿಕೊಳ್ಳುವುದೇ ಇಲ್ಲ. ಕಳೆದ ವಾರ ಗೋವಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮೋದಿ ದೇಶದ ಹಿತಕ್ಕಾಗಿ ತಾನು ಮಾಡಿದ ತ್ಯಾಗಗಳೆಂದು ಅವರು ಯಾವುದನ್ನು ಪರಿಗಣಿಸಿದ್ದಾರೋ ಅವುಗಳ ಬಗ್ಗೆ ಹೇಳಿಕೊಂಡಾಗ ಅವರ ಕಣ್ಣಾಲಿಗಳಲ್ಲಿ ನೀರುತುಂಬಿತ್ತು.
ಇನ್ನೊಂದೆಡೆ ಬಿಜೆಪಿ ‘ಕೇವಲ ಫೋಟೋ ಪ್ರದರ್ಶನದ ಉದ್ದೇಶಕ್ಕಷ್ಟೇ ಪ್ರಧಾನಿಯ ತಾಯಿಯನ್ನು ಗಾಲಿಕುರ್ಚಿಯಲ್ಲಿ ಕುಳ್ಳಿರಿಸಿ ಮಂಗಳವಾರ ಬ್ಯಾಂಕಿಗೆ ಕರೆತಂದಿತು. ಇದರಿಂದ ಉತ್ತೇಜಿತನಾದ ಕೆಲವು ಪತ್ರಕರ್ತರು ‘‘ಪ್ರಧಾನಿ ನರೇಂದ್ರ ಮೋದಿಯವರ 97 ವರ್ಷ ವಯಸ್ಸಿನ ತಾಯಿ, ಗಾಂಧಿನಗರದ ಗ್ರಾಮದಲ್ಲಿರುವ ಬ್ಯಾಂಕೊಂದಕ್ಕೆ ಭೇಟಿ ನೀಡಿದರು ಹಾಗೂ ಅವರಲ್ಲಿರುವ ಹಳೆಯ ನೋಟುಗಳನ್ನು ವಿನಿಮಯ ಮಾಡಿದರು’’ ಎಂದು ವರದಿ ಮಾಡಿದ.
  ಆದರೆ ಈ ಬ್ಯಾಂಕ್‌ಗೆ ಇತರ ಗ್ರಾಹಕರು ಆಗಮಿಸುವಾಗ ಅವರಿಗೆ ಯಾವುದೇ ಅಧಿಕಾರಿಗಳ ಬೆಂಗಾವಲು ಇರಲಿಲ್ಲ. ಈ ಬ್ಯಾಂಕ್‌ನಲ್ಲಿ ಗ್ರಾಹಕಿ ಹೀರಾಬೆನ್ ಅವರಿಗೆ, ಮೆನೇಜರ್ ಅವರು ಔಪಚಾರಿಕವಾಗಿ ನಗದು ಹಣವನ್ನು ಹಸ್ತಾಂತರಿಸುವಾಗ ಬ್ಯಾಂಕಿನ ಇತರ ಎಲ್ಲಾ ವ್ಯವಹಾರ ಚಟುವಟಿಕೆಗಳು ವಸ್ತುಶಃ ಸ್ತಬ್ಧಗೊಂಡಿದ್ದವು. ನೋಟು ಅಮಾನ್ಯತೆಯಿಂದ ಜನಾಸಾಮಾನ್ಯರು ಎದುರಿಸುತ್ತಿರುವ ಅನಾನುಕೂಲತೆಗಳ ಬಗ್ಗೆ ಉದ್ಭವಿಸಿರುವ ವ್ಯಾಪಕ ಅಸಮಾಧಾನವನ್ನು ತಣ್ಣಗಾಗಿಸಲು ಬಿಜೆಪಿಗೆ ಇದೊಂದು ಅವಕಾಶವನ್ನು ಒದಗಿಸಿತು.‘‘ಮೋದಿಯವರ ತಾಯಿ ಹೀಗೆ ಮಾಡುವುದಾದರೆ, ದೇಶದ ಮಹಾನ್ ಹಿತದೃಷ್ಟಿಯಿಂದ ನೀವು ಸ್ವಲ್ಪ ಕಷ್ಟಪಡಲು ಯಾಕೆ ಸಾಧ್ಯವಿಲ್ಲ’’ ಎಂಬ ಪ್ರಶ್ನೆಯನ್ನು ಅದು ಕೇಳುತ್ತಿದೆ.
ಆದರೆ ದೇಶದ ಅನೇಕ ಜನರು ತಮ್ಮ ಹಣಕ್ಕಾಗಿ ಬ್ಯಾಂಕುಗಳಿಗೆ ತೆರಳಿದರೂ, ಬರಿಗೈಲಿ ವಾಪಾಸಾಗುತ್ತಿದ್ದಾರೆ. ಪರಿಸ್ಥಿತಿ ಈಗ ಕೈಮೀರಿ ಹೋಗುತ್ತಿದೆ. ತಾವು ಅನುಭವಿಸುತ್ತಿರುವ ನೋವಿನಿಂದ ದೇಶಕ್ಕೆ ಲೇಶಮಾತ್ರವೂ ಪ್ರಯೋಜನವಿಲ್ಲವೆಂಬುದು ಅವರಿಗೆ ಅರಿವಾದಾಗ ಪರಿಸ್ಥಿತಿ ವಿಕೋಪಕ್ಕೆ ತೆರಳಲೂಬಹುದು.

ಕೃಪೆ: scroll.in

share
ಗಿರೀಶ್ ಶಹಾಣೆ
ಗಿರೀಶ್ ಶಹಾಣೆ
Next Story
X