ಸಹಕಾರಿ ನಿಷೇಧದ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ: ಕುಂಞಾಲಿಕುಟ್ಟಿ

ಕೋಝಿಕ್ಕೋಡ್, ನ. 21: ಸಹಕಾರಿ ಬ್ಯಾಂಕ್‌ಗಳಲ್ಲಿ ನೋಟು ಬದಲಾಯಿಸುವುದಕ್ಕೆ ಹೇರಲಾದ ನಿಷೇಧದ ವಿರುದ್ಧ ಒಗ್ಗೂಡಿ ಹೋರಾಟವನ್ನು ನಡೆಸಬೇಕಿದೆಎಂದು ಕೇರಳ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಹಾಗೂ ಮುಸ್ಲಿಂ ಲೀಗ್ ಶಾಸಕಾಂಗ ಪಕ್ಷದ ನಾಯಕ ಪಿ.ಕೆ. ಕುಂಞಾಲಿಕುಟ್ಟಿ ಹೇಳಿದ್ದಾರೆಂದು ವರದಿಯಾಗಿದೆ. ಕಿಣಶ್ಶೇರಿಯಲ್ಲಿ ಮುಸ್ಲಿಂ ಲೀಗ್ ಕಚೇರಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅವರು,
ಜಂಟಿ ಹೋರಾಟ ಬೇಡ ಎಂದು ಹೇಳಿಕೆ ನೀಡಿದ್ದ ಕೆ.ಪಿ.ಸಿ.ಸಿ ಅಧ್ಯಕ್ಷ ವಿ.ಎಂ. ಸುಧೀರನ್‌ರ ಅಭಿಪ್ರಾಯಕ್ಕೆ ಪತ್ರಕರ್ತರೊಂದಿಗೆ ಮಾತಾಡಿ ಈ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಹಕಾರಿ ಬ್ಯಾಂಕ್‌ಗಳನ್ನು ವಶಪಡಿಸುತ್ತಾರೆ ಎಂದು ಹೇಳುವ ಸಮಯ ಇದಲ್ಲ. ರಾಜಕೀಯವನ್ನು ದೂರ ಇಟ್ಟು ಅಭಿಪ್ರಾಯವನ್ನು ವ್ಯಕ್ತಪಡಿಸಬೇಕಾದ ಸಮಯ ಇದು. ಸಹಕಾರಿ ಕ್ಷೇತ್ರದ ಸಂಸ್ಥೆಗಳು, ಉದ್ಯೋಗಿಗಳು ಒಗ್ಗೂಡಿ ಹೋರಾಟಕ್ಕಿಳಿದಿರುವಾಗ ನಾವುದೂರ ಉಳಿಯುವುದು ಸರಿಯಲ್ಲ. ಎಲ್ಲರೂ ಒಟ್ಟುಗೂಡಿ ಹೋರಾಟ ನಡೆಸಬೇಕಿದೆ ಎಂದು ಲೀಗ್‌ನ ಅಭಿಪ್ರಾಯವಾಗಿದೆ. ಆದರೆ ಯುಡಿಎಫ್‌ನ ನಿಲುವನ್ನು ನಾಯಕರು ತಿಳಿಸಲಿದ್ದಾರೆಂದು ಕುಂಞಾಲಿಕುಟ್ಟಿ ಹೇಳಿದ್ದಾರೆಂದು ವರದಿ ತಿಳಿಸಿದೆ.





