ಹೈಟೆಕ್ ವೇಶ್ಯಾವಾಟಿಕೆ: ಸಿನೆಮಾ ಚಿತ್ರರಂಗದ ಒಬ್ಬನ ಬಂಧನ

ಅಂಗಮಾಲಿ, ನ. 21: ಸಿನೆಮಾ, ಸೀರಿಯಲ್‌ಗಳಲ್ಲಿ ಅವಕಾಶ ನೀಡಲಾಗುವುದು ಎಂದು ನಂಬಿಕೆಹುಟ್ಟಿಸಿ ರಾಜ್ಯದ ವಿವಿಧ ಭಾಗಗಳಿಂದ ಯುವತಿಯರನ್ನು ಪುಸಲಾಯಿಸಿ ಕರೆತಂದು ವೇಶ್ಯಾವಾಟಿಕೆಗೆ ದೂಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅಂಗಮಾಲಿ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಬಂಧಿತನನ್ನು ಕೊಲ್ಲಂ ಕರುನಾಗಪಳ್ಳಿ ಎಸ್.ವಿ. ಮಾರ್ಕೆಟ್ ಬಳಿಯ ಅಂಡ್ರೋ ಯಾನೆ ಜೋನ್(ಕಾಳ ಜೋನ್-62) ಎಂದು ಗುರುತಿಸಲಾಗಿದೆ. ಆಲುವ ಡಿವೈಎಸ್ಪಿ ಕೆ.ಜಿ. ಬಾಬುಕುಮಾರ್ ನಿರ್ದೇಶನ ಪ್ರಕಾರ ಅಂಗಮಾಲಿ ಸಿಐ ಎಸ್. ಮುಹಮ್ಮದ್ ರಿಯಾಝ್ಆರೋಪಿಯನ್ನು ಬಂಧಿಸಿದ್ದಾರೆ.
ತೃಕ್ಕಾಕರ ಕೇಂದ್ರವಾಗಿಟ್ಟು ಗ್ಲೋಬಲ್ ಮೀಡಿಯಾ ರೀಸರ್ಚ್ ಸೆಂಟರ್‌ನ ಶಾಖೆಗೆಂದು ಹೇಳಿ ಚೆಂಙಮನಾಡ್ ಜಂಕ್ಷನ್‌ನಲ್ಲಿನ ಕಟ್ಟಡವೊಂದನ್ನು ಒಂದುವರ್ಷದ ಹಿಂದೆ ಬಾಡಿಗೆ ಪಡೆದು ಸಂಸ್ಥೆ ಆರಂಭಿಸಲಾಗಿತ್ತು.ನೆಡುಂಬಾಶ್ಶೇರಿ ಕರಿಯಾಟ್ಟೆ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದ್ದರು. ಆನ್‌ಲೈನ್ ಮೂಲಕ ವ್ಯವಹಾರ ಕುದುರಿಸಲಾಗುತ್ತಿತ್ತು. ಭಾರೀ ಮೊತ್ತದ ಹಣ ನೀಡುವ ವಾಗ್ದಾನ ನೀಡಿ ಸಿನೆಮಾ. ಸೀರಿಯಲ್. ಬ್ಯೂಟಿಷಿಯನ್ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ, ಅವಿವಾಹಿತ ಯುವತಿಯರನ್ನು ಆರೋಪಿ ಜೋನ್ ವೇಶ್ಯಾವಾಟಿಕೆಗೆ ದೂಡುತ್ತಿದ್ದ ಎನ್ನಲಾಗಿದೆ.
ಘಟನೆ ಬಹಿರಂಗಪಡಿಸಿದರೆ ಮಹಿಳೆಯರ ವೀಡಿಯೊ ಇಂಟರ್‌ನೆಟ್‌ಗೆ ಹಾಕುವೆ ಎಂದು ಬೆದರಿಸುತ್ತಿದ್ದ. ಉನ್ನತ ಮಟ್ಟದ ಪ್ರಭಾವವನ್ನು ಹೊಂದಿರುವ ಈತನನ್ನು ಸಿನೆಮಾಕ್ಷೇತ್ರದಲ್ಲಿ ಕಾಳ ಜೋನ್ ಎಂದು ಗುರುತಿಸಲಾಗುತ್ತಿತ್ತು. ನೆಡುಂಬಾಶ್ಶೇರಿಯ ಅತ್ತಾಣಿ ಎಂಬಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಪ್ಲಾಟ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವೇಶ್ಯಾವಾಟಿಕೆ ನಡೆಸಲು ಈತ ಉದ್ದೇಶಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ವೇಶ್ಯಾವಾಟಿಗೆ ಬಲಿಯಾದ ಯುವತಿಯೊಬ್ಬಳು ಚೆಂಞಮನಾಡ್ ಠಾಣೆಯಲ್ಲಿ ನೀಡಿದ ದೂರಿನ ಹಿನ್ನೆಲೆಯಲ್ಲಿ ನಾಟಕೀಯವಾಗಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.







