ಕಣ್ಣೂರ್ ಘರ್ಷಣೆ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಪಿಣರಾಯಿ

ತಿರುವನಂತಪುರಂ, ನವೆಂಬರ್ 21: ಕಣ್ಣೂರ್ ಜಿಲ್ಲೆಯ ವಿವಿಧ ಭಾಗಗಳಲ್ಲಾದ ರಾಜಕೀಯ ಘರ್ಷಣೆಗಳಲ್ಲಿ ತಪ್ಪಿಸ್ಥರ ವಿರುದ್ಧ ಪೊಲೀಸರು ನಿರ್ದಾಕ್ಷೀಣ್ಯದಿಂದ ಕ್ರಮ ಜರಗಿಸಲಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕಣ್ಣೂರಿನಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷಗಳನ್ನು ಕೊನೆಗೊಳಿಸುವುದಕ್ಕಾಗಿ ಸೇರಿದ್ದ ಸರ್ವ ಪಕ್ಷ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ಹೀಗೆ ಹೇಳಿದ್ದಾರೆಂದು ವರದಿಯಾಗಿದೆ.
ಗುಂಪುಗೂಡಿ ಪೊಲೀಸ್ ಠಾಣೆಯಿಂದ ಜನರನ್ನು ಬಿಡುಗಡೆಗೊಳಿಸುವ ರೀತಿ ವ್ಯಾಪಕವಾಗಿದೆ. ಇದರ ವಿರುದ್ಧ ಕಠಿಣಕ್ರಮಕೈಗೊಳ್ಳಬೇಕೆಂದು ಸರ್ವಪಕ್ಷ ಸಭೆ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಬಾಂಬ್ ನಿರ್ಮಾಣ ಆಯುಧ ನಿರ್ಮಾಣವನ್ನು ಪತ್ತೆಹಚ್ಚಿ ತಡೆಯಲು ಹೆಚ್ಚು ತೀವ್ರವಾದ ಕ್ರಮಗಳನ್ನು ಪೊಲೀಸರು ಕೈಗೊಳ್ಳಲಿದ್ದಾರೆ. ಆರಾಧಾನಾಲಯಗಳನ್ನು ಕೆಲವು ಸಂಘಟನೆಗಳುಮತ್ತು ಪಾರ್ಟಿಗಳು ಅಧೀನದಲ್ಲಿಟ್ಟುಕೊಳ್ಳುವ ಅಭ್ಯಾಸವಿದೆ. ಇಂತಹ ಯಾವ ಕ್ರಮವನ್ನು ಅಂಗೀಕರಿಸಲಾಗದು. ಆರಾಧಾನಾಲಯಗಳು ವಿಶ್ವಾಸಿಗಳ ಕೇಂದ್ರವಾಗಿಯೇ ಅಸ್ತಿತ್ವದಲ್ಲಿ ಉಳಿಯಬೇಕು ಎಂದು ಸರ್ವ ಪಕ್ಷ ಸಭೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂಘರ್ಷದ ನಿಮಿತ್ತ ಪಾರ್ಟಿ ಕಚೇರಿಗಳು ಮತ್ತು ಮನೆಗಳು ದಾಳಿಗೀಡಾಗುತ್ತಿವೆ. ಇಂತಹ ಪರಿಸ್ಥಿತಿಯನ್ನು ಶೀಘ್ರವೇ ನಿಲ್ಲಿಸಬೇಕು.
ಸರ್ವಪಕ್ಷ ಸಭೆಯ ನಂತರ ಉಭಯ ಕಕ್ಷಿ ಸಭೆ ನಡೆಸಲು ಸಭೆಯಲ್ಲಿಯೇ ತೀರ್ಮಾನಿಸಲಾಗಿದೆ. ರಾಜ್ಯದ ಪ್ರಧಾನ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಸ್ಥಾಪಿಸಲು ಸಂಘರ್ಷ ನಡೆಯುವ ಕೇಂದ್ರಗಳಲ್ಲಿ ಸ್ಥಳೀಯವಾಗಿ ಚರ್ಚೆಗಳನ್ನು ನಡೆಸಲು ಸಭೆ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆಂದುವರದಿ ತಿಳಿಸಿದೆ.





