ಉಳ್ಳಾಲ: ವೈದ್ಯಕೀಯ ವಿದ್ಯಾರ್ಥಿಗೆ ತಂಡದಿಂದ ಹಲ್ಲೆ
ಉಳ್ಳಾಲ, ನ.21: ಉಳ್ಳಾಲ ಕೊಣಾಜೆ ಠಾಣಾ ವ್ಯಾಪ್ತಿಯ ಉಳ್ಳಾಲದ ಕೇಂದ್ರ ಬಸ್ಸುನಿಲ್ದಾಣದ ಬಳಿ ಇದ್ದ ಭಿನ್ನಕೋಮಿನ ವೈದ್ಯಕೀಯ ವಿದ್ಯಾರ್ಥಿ ಜೋಡಿಗಳನ್ನು ತಡೆದ ತಂಡವೊಂದು ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೋಟೆಪುರ ಕೋಡಿ ನಿವಾಸಿ ತೌಸೀಫ್ ಹಾಗೂ ಉಳ್ಳಾಲ ಸುಂದರಿಬಾಗ್ ನಿವಾಸಿ ನಿಝಾಮುದ್ದೀನ್ ಎಂದು ಗುರುತಿಸಲಾಗಿದೆ.
ದೇರಳಕಟ್ಟೆ ಸಮೀಪದ ವೈದ್ಯಕೀಯ ಕಾಲೇಜೊಂದರ ಪ್ರಥಮ ವರ್ಷದ ವಿದ್ಯಾರ್ಥಿ ರಾಂಚಿ ಮೂಲದ ವಿದ್ಯಾರ್ಥಿ ರಾಹುಲ್ ಎಂಬಾತನಿಗೆ ಹಲ್ಲೆ ನಡೆಸಲಾಗಿದೆ. ವಿದ್ಯಾರ್ಥಿ ಹಾಗೂ ಅದೇ ತರಗತಿಯ ಭಿನ್ನಕೋಮಿನ ವಿದ್ಯಾರ್ಥಿನಿ ಸೋಮವಾರ ಮಧ್ಯಾಹ್ನ ಬಳಿಕ ತರಗತಿ ಮುಗಿಸಿ ಸೋಮೇಶ್ವರ ಮತ್ತು ಉಳ್ಳಾಲ ಬೀಚ್‌ಗೆ ತೆರಳಿದ್ದರು. ಬಳಿಕ ಬಸ್ಸಿಗಾಗಿ ಉಳ್ಳಾಲ ಜಂಕ್ಷನ್‌ನಲ್ಲಿ ನಿಂತಿದ್ದರು. ಈ ಸಂದರ್ಭ ಐದು ಮಂದಿಯ ತಂಡ ಸ್ಥಳಕ್ಕೆ ಆಗಮಿಸಿ ಅವಾಚ್ಯ ಶವ್ದಗಳಿಂದ ನಿಂದಿಸಿ ಕೈ ಮತ್ತು ಮರದ ಸೋಂಟೆಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





.jpg.jpg)

