Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಅಧಿವೇಶನದ ವೇಳೆ ಗದ್ದಲ ತಪ್ಪಿಸಲು...

ಅಧಿವೇಶನದ ವೇಳೆ ಗದ್ದಲ ತಪ್ಪಿಸಲು ನಿಯಮಾವಳಿಗಳು ಸಿದ್ಧ

ಏನೆಲ್ಲಾ ನಿಯಮಗಳಿವೆ ನೋಡಿ

ವಾರ್ತಾಭಾರತಿವಾರ್ತಾಭಾರತಿ21 Nov 2016 7:55 PM IST
share
ಅಧಿವೇಶನದ ವೇಳೆ ಗದ್ದಲ ತಪ್ಪಿಸಲು ನಿಯಮಾವಳಿಗಳು ಸಿದ್ಧ

ಬೆಳಗಾವಿ(ಸುವರ್ಣ ವಿಧಾನಸೌಧ) ನ.21: ಗದ್ದಲ-ಕೋಲಾಹಲ ತಪ್ಪಿಸಿ, ಸುಗಮ ಕಲಾಪದ ದೃಷ್ಟಿಯಿಂದ ವಿಧಾನಸಭೆ ನಿಯಮಾವಳಿಗಳಿಗೆ ತಿದ್ದುಪಡಿ ತರಲು ವಿಧಾನ ಮಂಡಲ ಜಂಟಿ ನಿಯಮಾವಳಿ ಸಮಿತಿ ಶಿಫಾರಸು ಮಾಡಿದೆ.

ಸೋಮವಾರ ವಿಧಾನಸಭೆ ಕಲಾಪದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಜಂಟಿ ನಿಯಮಾವಳಿಗಳ ಸಮಿತಿ ವರದಿ ಮಂಡಿಸಿದರು. ಕಲಾಪದಲ್ಲಿ ಮಧ್ಯಾಹ್ನದ ನಂತರ ನಿಲುವಳಿ ಸೂಚನೆ ಮಂಡಿಸಬೇಕು, ದಿನದ ಕಲಾಪವನ್ನು ವ್ಯವಸ್ಥಿತವಾಗಿ ಎರಡು ಅವಧಿಗೆ ವಿಂಗಡಿಸಬೇಕು. ಶೂನ್ಯವೇಳೆಗೆ ಅಧಿಕೃತ ಮಾನ್ಯತೆ ನೀಡಬೇಕೆಂದು ಶಿಫಾರಸು ಮಾಡಲಾಗಿದೆ.

ವಿಧಾನಸಭೆಲ್ಲಿ ಮಂಡಿಸಲಾದ ಸಮಿತಿ ವರದಿಯನ್ನು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು. ಸ್ಪೀಕರ್ ಕೆ.ಬಿ.ಕೋಳಿವಾಡ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ಉಪ ನಾಯಕ ವೈ.ಎಸ್.ವಿ.ದತ್ತ, ಕಾನೂನು ಸಚಿವ ಟಿ.ಬಿ.ಜಯಚಂದ್ರ ಸಭೆಯಲ್ಲಿ ಪಾಲ್ಗೊಂಡಿದ್ದರು.

ನ.25ರಂದು ಮತ್ತೊಮ್ಮೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ ನಂತರ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಅಲ್ಲಿ ಅಂಗೀಕಾರವಾದರೆ ಹೊಸ ನಿಯಮಾವಳಿಗಳಂತೆ ಸದನ ನಡೆಸಲು ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲಿಯವರೆಗೂ ಹಳೆಯ ನಿಯಮಾವಳಿಗಳಂತೆ ಕಲಾಪ ನಡೆಯಲಿದೆ ಎಂದು ತಿಳಿದು ಬಂದಿದೆ.

ಶಿಫಾರಸುಗಳು: ಬೆಂಗಳೂರಿನ ವಿಧಾನಸೌಧ ಮತ್ತು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿರುವ ಸಭಾಮಂದಿರ, ಲಾಬಿಗಳು, ಗ್ಯಾಲರಿಗಳನ್ನು ಸಭಾಧ್ಯಕ್ಷರ ಅಧೀನಕ್ಕೆ ಒಳಪಡುವ ವಿಧಾನಸಭೆಯ ಆವರಣ ಎಂದು ಪರಿಗಣಿಸಬೇಕು.

ಕೋರಂ (ಸದಸ್ಯರ ಹಾಜರಾತಿ) ಎಂಬುದಕ್ಕೆ ಈವರೆಗೂ ಸ್ಪಷ್ಟವಾದ ಅರ್ಥವಿವರಣೆ ಇರಲಿಲ್ಲ, ಕೋರಂ ಎಂದರೆ ಸಭೆಯಲ್ಲಿರುವ ಒಟ್ಟು ಸದಸ್ಯರ ಸಂಖ್ಯೆಯ ಹತ್ತನೆಯ ಒಂದರಷ್ಟು ಸಂಖ್ಯೆಯ ಸದಸ್ಯರು ಎಂದು ಪರಿಗಣಿಸತಕ್ಕದ್ದು ಎಂದು ಸಮಿತಿ ಶಿಫಾರಸು ಮಾಡಿದೆ.

ನಿಲುವಳಿಗೆ ಮಾನ್ಯತೆ: ವಿಧಾನಮಂಡಲದ ಕಲಾಪದಲ್ಲಿ ಈವರೆಗೂ ಅನೌಪಚಾರಿಕವಾಗಿ ಜಾರಿಯಲ್ಲಿರುವ ಶೂನ್ಯವೇಳೆಗೆ ಈವರೆಗೂ ಸ್ಪಷ್ಟವಾದ ಅರ್ಥ ವಿವರಣೆ ಇಲ್ಲ. ಅದಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಜಂಟಿ ನಿಯಮಾವಳಿ ಸಮಿತಿ ಶಿಫಾರಸು ಮಾಡಿದೆ.

ಪ್ರಶ್ನೋತ್ತರ ವೇಳೆ, ಕಾರ್ಯದರ್ಶಿ ವರದಿ, ಸದನದ ಮುಂದೆ ಮಂಡಿಸಬೇಕಾದ ಕಾಗದ ಪತ್ರಗಳು, ಸಮಿತಿ ವರದಿಗಳ ಮಂಡನೆ ತರುವಾಯ, ಯಾವುದಾದರೂ ಇದ್ದಲ್ಲಿ ಹಾಗೂ ಕಾರ್ಯ ಕಲಾಪಗಳ ಪಟ್ಟಿಯನ್ನು ಪ್ರಾರಂಭಿಸುವ ಮೊದಲಿನ ಅವಧಿಯನ್ನು ಶೂನ್ಯವೇಳೆ ಎಂದು ಕರೆಯಲು ಸಲಹೆ ಮಾಡಿದ್ದು, ಶೂನ್ಯವೇಳೆಗೆ ಅಧಿಕೃತ ಮಾನ್ಯತೆ ದೊರಕಿಸುವ ಪ್ರಯತ್ನಗಳು ನಡೆದಿವೆ.

ಈವರೆಗೂ ಪ್ರಶ್ನೋತ್ತರ ಅವಧಿಯ ನಂತರ ಶೂನ್ಯವೇಳೆಯನ್ನು ಕೈಗೆತ್ತಿಕೊಳ್ಳಲಾಗುತ್ತಿತ್ತು. ಈಗ ನಿಯಮ 59ಕ್ಕೆ ತಿದ್ದುಪಡಿ ತಂದು ಎ, ಬಿ, ಸಿ, ಡಿ ಕಲಂಗಳನ್ನು ಸೇರಿಸಲಾಗಿದೆ. ಇದರ ಅನ್ವಯ ಪ್ರಶ್ನೋತ್ತರ ಮತ್ತು ಕಾಗದ ಪತ್ರಗಳ ಮಂಡನೆ ತರುವಾಯ ಸ್ಪೀಕರ್ ಪೂರ್ವಾನುಮತಿ ಪಡೆದು ಇತ್ತೀಚಿನ ಪ್ರಮುಖ ಘಟನೆಗಳನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಆವಕಾಶ ಕಲ್ಪಿಸಲಾಗಿದೆ.

ಶೂನ್ಯವೇಳೆಗೆ ನೀಡುವ ಸೂಚನಾ ಪತ್ರ 150 ಪದಗಳನ್ನು ಮೀರಬಾರದು, ಪ್ರತಿದಿನ 10 ಸೂಚನೆಗಳನ್ನು ಕೈಗೆತ್ತಿಕೊಳ್ಳಬಹುದು, ಆದ್ಯತೆ ಮೇರೆಗೆ ಇನ್ನೂ ಉಳಿದ 5 ಸೂಚನೆಗಳನ್ನು ಸ್ಪೀಕರ್ ವಿವೇಚನೆ ಮೇರೆಗೆ ಕೈಗೆತ್ತಿಕೊಳ್ಳುವುದು, ಪ್ರತಿಯೊಬ್ಬ ಶಾಸಕರು ದಿನಕ್ಕೆ ಒಂದೆ ಸೂಚನೆಯನ್ನು ಮಂಡಿಸಬೇಕು, ಕಲಾಪ ಆರಂಭವಾಗುವ ಮುನ್ನಾ ಒಂದು ಗಂಟೆ ಮುನ್ನಾ ಸ್ಪೀಕರ್ ಅವರಿಗೆ ಸೂಚನಾ ಪತ್ರ ತಲುಪಿಸಬೇಕು. ಶಾಸಕರು ಮೂರು ನಿಮಿಷಕ್ಕೆ ಮೀರದಂತೆ ಕಾಲಮಿತಿಯ ಒಳಗೆ ಶೂನ್ಯವೇಳೆಯಲ್ಲಿ ಪ್ರಸ್ತಾಪಿತ ವಿಷಯದ ಮೇಲೆ ಕಲಾಪದಲ್ಲಿ ಸ್ಥೂಲ ವಿವರಣೆ ನೀಡಬೇಕು. ಪ್ರಸ್ತಾಪಿತ ವಿಷಯಗಳಿಗೆ ಸರಕಾರ ತಕ್ಷಣ ಅಥವಾ ಗರಿಷ್ಠ ಮೂರು ದಿನಗಳ ಒಳಗೆ ಉತ್ತರ ನೀಡಬೇಕು ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ.

ನಿಲುವಳಿಗೆ ಕಡಿವಾಣ: ಪ್ರತಿದಿನ ಸದನ ಸಮಾವೇಶಗೊಂಡ ತಕ್ಷಣವೇ ಸ್ಪೀಕರ್ ಅವರಿಗೆ ಎದುರಾಗುವುದು ನಿಲುವಳಿ ಸೂಚನೆಯ ಪ್ರಸ್ತಾಪ, ಇದರ ಚರ್ಚೆಗೆ ಅವಕಾಶ ನೀಡಬೇಕೋ ಬೇಡವೋ ಎಂಬ ಕುರಿತೆ ಬಹಳಷ್ಟು ಚರ್ಚೆಗಳು ನಡೆಯುತ್ತವೆ. ಇದರಿಂದ ಬಹಳಷ್ಟು ಕಾಲಹರಣ ಆಗಿ ಪ್ರಮುಖ ಕಾಯ್ದೆಗಳು ಚರ್ಚೆಯಾಗದೇ ಕೊನೆಯ ಕ್ಷಣದಲ್ಲಿ ಅಂಗೀಕಾರಗೊಳ್ಳುತ್ತಿವೆ. ನಿಲುವಳಿ ಸೂಚನೆ ಚರ್ಚೆಯೂ ಗಂಭೀರವಾಗಿ ನಡೆಯುತ್ತಿಲ್ಲ ಎಂಬುದನ್ನು ಮನಗಂಡಿರುವ ಸಮಿತಿ ನಿಯಮ 60, 64 ಮತ್ತು 65ಕ್ಕೆ ತಿದ್ದುಪಡಿ ತರಲು ಶಿಫಾರಸು ಮಾಡಿದೆ

ಬೆಳಗ್ಗೆ 10.30 ರಿಂದ 2 ಗಂಟೆವರೆಗೂ ಬೆಳಗಿನ ಉಪವೇಶನ(ಕಲಾಪ) ಎಂದು, ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೂ ಮಧ್ಯಾಹ್ನದ ಉಪವೇಶವ(ಕಲಾಪ) ಎಂದು ಕರೆಯಲು ನಿಯಮಾವಳಿಗೆ ತಿದ್ದುಪಡಿ ತರಲು ಸಮಿತಿ ಶಿಫಾರಸು ಮಾಡಲಾಗಿದೆ. ಉಪವೇಶನ ಎಂದರೆ ಸದನ ಪ್ರಾರಂಭವಾದಾಗಿನಿಂದ ಸದನವನ್ನು ಮುಂದೂಡುವವರೆಗೂ ಯಾವುದೇ ದಿನದಂದು ಸದನದ ಕಾರ್ಯಕಲಾಪಗಳನ್ನು ನಡೆಸಲು ಸದನದ ಸದಸ್ಯರು ಉಪವೇಶನ ನಡೆಸುವುದು ಎಂದು ಭಾವಿಸಬೇಕು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X