ಅಸ್ಸಾಂ: ರೂ. 1.15 ಕೋಟಿ ಮೌಲ್ಯದ ಹಳೆಯ ನೋಟು ಬ್ಯಾಂಕ್‌ನಿಂದ ಕಳವು

ಧೆಂಕನಾಲ್(ಒಡಿಶಾ), ನ.21: ಒಡಿಶಾ ಗ್ರಾಮ್ಯ ಬ್ಯಾಂಕ್‌ನ ಇಲ್ಲಿನ ಶಾಖೆಯಿಂದ ಕನಿಷ್ಠ ರೂ. 1.15 ಕೋಟಿ ವೌಲ್ಯದ ಈಗ ರದ್ದಾಗಿರುವ ರೂ. 500 ಹಾಗೂ 1000ದ ನೋಟುಗಳು ಕಳವಾಗಿವೆಯೆಂದು ಪೊಲೀದರಿಂದು ತಿಳಿಸಿದ್ದಾರೆ.
ಎರಡು ದಿನಗಳ ವಾರಾಂತ್ಯ ರಜೆಯ ಬಳಿಕ ಇಂದು ಬ್ಯಾಂಕ್‌ನ ಅಧಿಕಾರಿಗಳು ಬ್ಯಾಂಕನ್ನು ತೆರೆದಾಗ ಈ ಘಟನೆ ಬೆಳಕಿಗೆ ಬಂದಿದೆಯೆಂದು ಧೆಂಕನಾಲ್ ಪಟ್ಟಣದ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕ ಅಭಿನವ್ ದಲುವಾ ಹೇಳಿದ್ದಾರೆ.
ಬ್ಯಾಂಕ್‌ನಲ್ಲಿ ಸುಮಾರು ರೂ. 8 ಕೋಟಿ ವೌಲ್ಯದ ಹಳೆಯ ನೋಟುಗಳಿದ್ದವು. ಒಂದು ಕಬ್ಬಿಣದ ಪೆಟ್ಟಿಗೆಯಿಂದ ರೂ. 1.15 ಕೋಟಿ ಕಳವಾಗಿರುವುದು ಕಂಡು ಬಂದಿದೆಯೆಂದು ಅವರು ಹೇಳಿದ್ದಾರೆ.
ಈ ಹಣವು ನಿಷೇಧಿತ ರೂ. 500 ಹಾಗೂ 1000ದ ನೋಟುಗಳಾಗಿವೆ. ತಾವು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದೇವೆಂದು ಧೆಂಕನಾಲ್‌ನ ಎಸ್ಪಿ, ಬಸಂತ ಕುಮಾರ್ ಪಾಣಿಗ್ರಾಹಿ ತಿಳಿಸಿದ್ದಾರೆ.
ಈ ಅಪರಾಧದ ಹಿಂದೆ ಒಳಗಿನವರಿದ್ದಾರೆಂದು ತಾವು ಬಲವಾಗಿ ಶಂಕಿಸಿದ್ದೇವೆ. ಸ್ಟ್ರಾಂಗ್ ರೂಂನಲ್ಲಿ ರೂ. 7 ಕೋಟಿ ಕದಲದಿರುವುದು ತಮಗೆ ಆಶ್ಚರ್ಯ ತಂದಿದೆ. ಎಲ್ಲ ಹಣವನ್ನು ಮೂರು ದೊಡ್ಡ ಪೆಟ್ಟಿಗೆಗಳಲ್ಲಿರಿಸಲಾಗಿತ್ತೆಂದು ಅವರು ಹೇಳಿದ್ದಾರೆ.
ಧೆಂಕನಾಲ್ ಪೊಲೀಸ್ ಠಾಣೆಯಿಂದ ಬ್ಯಾಂಕ್ ಕಲ್ಲೆಸೆತದ ದೂರದಲ್ಲಿದೆ. ಈ ಕಳವಿನಲ್ಲಿ ಶಾಮೀಲಾದವರ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.







