ತನ್ನದೇ ಟೆಂಪೊಗೆ ಬಲಿಯಾದ ಟೆಂಪೊ ಮಾಲಕ

ಹಿರಿಯಡ್ಕ, ನ.21: ಪೆರ್ಡೂರು ಗ್ರಾಮದ ಶಾನರಬೆಟ್ಟು ಎಂಬಲ್ಲಿ ನ.20 ರಂದು ಅಪರಾಹ್ನ ವೇಳೆ ತನ್ನದೇ ಮರಳಿನ ಟೆಂಪೊದ ಅಡಿಗೆ ಬಿದ್ದು ಮಾಲಕರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಅನಿಲ್ ಶೆಟ್ಟಿ(37) ಎಂದು ಗುರುತಿಸಲಾಗಿದೆ. ಇವರು ಶಾನರ ಬೆಟ್ಟುವಿನ ಶೇಖರ ಶೆಟ್ಟಿ ಎಂಬವರ ಮನೆ ನಿರ್ಮಾಣಕ್ಕೆ ಬೇಕಾದ ಮರಳನ್ನು ತನ್ನ ಮಾಲಕತ್ವದ ಟೆಂಪೋದಲ್ಲಿ ತುಂಬಿಸಿ ತಂದಿದ್ದು, ಅಲ್ಲಿಯ ಇಳಿಜಾರಿನ ಮಣ್ಣು ರಸ್ತೆಯಲ್ಲಿ ಟೆಂಪೋ ಚಾಲಕ ಅದನ್ನು ಹಿಮ್ಮುಖವಾಗಿ ಚಲಾಯಿಸಿ ಕೊಂಡು ಬರುವಾಗ ಹಿಂಬದಿಯ ಟಯರ್‌ಗೆ ಕಟ್ಟೆ ಇಡಲು ಅನಿಲ್‌ಶೆಟ್ಟಿ ಮುಂದಾದರು. ಆಗ ಟೆಂಪೊ ಎಡಗಡೆ ವಾಲಿ ಕಲ್ಲು ಇಡಲು ಯತ್ನಿಸುತ್ತಿದ್ದ ಅನಿಲ್ ಶೆಟ್ಟಿ ಮೇಲೆ ಅಡ್ಡ ಬಿತ್ತು.
ಇದರಿಂದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅನಿಲ್ ಶೆಟ್ಟಿ ಸ್ಥಳದಲ್ಲಿಯೆ ಮೃತಪಟ್ಟರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





