ಪ್ರಳಯವೇನೂ ಆಗಿಲ್ಲ : ಶ್ವೇತಭವನ ಸಿಬ್ಬಂದಿಗೆ ಒಬಾಮ

ವಾಶಿಂಗ್ಟನ್, ನ. 21: ‘‘ಪ್ರಳಯವೇನೂ ಆಗಿಲ್ಲ’’ ಎಂಬುದಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ಬಳಿಕ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ತನ್ನ ಶ್ವೇತಭವನದ ಸಿಬ್ಬಂದಿಗೆ ಹೇಳಿದ್ದಾರೆ ಎಂದು ‘ದ ನ್ಯೂಯಾರ್ಕರ್’ ಪತ್ರಿಕೆ ವರದಿ ಮಾಡಿದೆ.
ಟ್ರಂಪ್ ವಿಜಯದ ಬಳಿಕ ಶ್ವೇತಭವನದಲ್ಲಿ ‘ಸಾವಿನ ಸೂತಕದ ಛಾಯೆ’ ನೆಲೆಸಿದೆ ಎಂದು ಅದು ಹೇಳಿದೆ.
ಟ್ರಂಪ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರದ ಬೆಳಗ್ಗೆ ಒಬಾಮ ತನ್ನ ಸಿಬ್ಬಂದಿಯನ್ನು ಓವಲ್ ಕಚೇರಿಗೆ ಕರೆಸಿಕೊಂಡರು.
‘‘ಅವರಲ್ಲಿ ವಿಷಣ್ಣತೆಯ ಭಾವವಿತ್ತು. ಕೆಲವರ ಕಣ್ಣುಗಳು ಹನಿಗೂಡಿದ್ದವು. ಸೋಲಿನಿಂದ ಅವಮಾನಿತರಾಗಿದ್ದರು. ಚುನಾವಣಾ ಫಲಿತಾಂಶವು ಒಬಾಮ ಮತ್ತು ಅವರ ಜನರನ್ನು ಅಚ್ಚರಿಯಲ್ಲಿ ಕೆಡವಿದರೂ, ‘ನಮ್ಮಲ್ಲಿ ಇದಕ್ಕೆ ಪರಿಹಾರವಿರಲಿಲ್ಲ’ ’’ಎಂದು ಮೂಲವೊಂದನ್ನು ಉಲ್ಲೇಖಸಿ ಪತ್ರಿಕೆ ವರದಿ ಮಾಡಿದೆ.
Next Story





