ದಾರುಸ್ಸಲಾಂ ಅಕಾಡಮಿಯಲ್ಲಿ ಕಾನೂನು ಮಾಹಿತಿ ಶಿಬಿರ
ಮಂಗಳೂರು, ನ.21: ನಾಟೆಕಲ್ ಸಮೀಪದ ಮಂಗಳನಗರದಲ್ಲಿ ಕಾರ್ಯಾಚರಿಸುತ್ತಿರುವ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿಯ ಅಧೀನದ ಕಾತಿಬಿಯ್ಯ ಸ್ಟೂಡೆಂಟ್ಸ್ ಅಸೋಸಿಯೇಶನ್ ಪಂಚವಾರ್ಷಿಕ ಕಾರ್ಯಕ್ರಮದ ಪ್ರಯುಕ್ತ ‘ಕಾನೂನು ಮಾಹಿತಿ’ ಶಿಬಿರವು ಇತ್ತೀಚೆಗೆ ನಡೆಯಿತು.
ಸಂಸ್ಥೆಯ ಪ್ರಾಂಶುಪಾಲ ಖಾಸಿಂ ದಾರಿಮಿ ಕಿನ್ಯ ಶಿಬಿರವನ್ನು ಉದ್ಘಾಟಿಸಿದರು. ಅಬ್ದುಲ್ ಜಲೀಲ್ ನಂದಾವರ ವಿಷಯ ಮಂಡಿಸಿದರು. ಸಿದ್ದೀಕ್ ಅಬ್ದುಲ್ ಖಾದರ್ ಮಾತನಾಡಿದರು.
ಸುಲೈಮಾನ್ ಫೈಝಿ ಕುಶಾಲನಗರ, ಸಂಸ್ಥೆಯ ಉಪನ್ಯಾಸಕ ಕೆ. ಮುಹಮ್ಮದ್ ರಿಯಾಝ್ ವೇಣೂರು ಮತ್ತಿತರರು ಉಪಸ್ಥಿತರಿದ್ದರು.
Next Story





