ಅಂಡರ್-20 ವಿಶ್ವಕಪ್‌ಗೆ ಭಾರತ ಬಿಡ್ ಸಲ್ಲಿಕೆ: ಪಟೇಲ್

ದೋಹಾ, ನ.21: ದೇಶದಲ್ಲಿ ಫುಟ್ಬಾಲ್‌ನ್ನು ಅಭಿವೃದ್ದಿಪಡಿಸುವ ನಿಟ್ಟಿಯಲ್ಲಿ ಭಾರತ ಅಂಡರ್-20 ವಿಶ್ವಕಪ್‌ಗೆ ಬಿಡ್ ಸಲ್ಲಿಸಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್ ಹೇಳಿದ್ದಾರೆ.
ಭಾರತ ಮುಂದಿನ ವರ್ಷ ಅಂಡರ್-17 ವಿಶ್ವಕಪ್‌ನ್ನು ಆತಿಥ್ಯವಹಿಸಿಕೊಂಡಿದೆ.
‘‘ಮುಂದಿನ ವರ್ಷ ನಡೆಯಲಿರುವ ಅಂಡರ್-17 ವಿಶ್ವಕಪ್ ಭಾರತೀಯ ಫುಟ್ಬಾಲ್‌ನ ಸ್ಮರಣೀಯ ಕ್ಷಣವಾಗಿದೆ. ನಾವು ಅಂಡರ್-16 ಹಾಗೂ ಅಂಡರ್-17 ತಂಡಗಳತ್ತ ಹೆಚ್ಚು ಗಮನ ನೀಡುತ್ತಿದ್ದೇವೆ. ಮುಂದಿನ ವರ್ಷದ ವಿಶ್ವಕಪ್‌ನ ಬಳಿಕ ಅಂಡರ್-20 ವಿಶ್ವಕಪ್‌ಗೆ ಬಿಡ್ ಸಲ್ಲಿಸಲಿದ್ದೇವೆ. 2019ರಲ್ಲಿ ವಿಶ್ವಕಪ್ ಆತಿಥ್ಯವಹಿಸಿಕೊಳ್ಳಲು ಉತ್ಸುಕರಾಗಿದ್ದೇವೆ ಎಂದು ಫಿಫಾ ಟೂರ್ನಿಯ ಸಮಿತಿಗೆ ತಿಳಿಸಿದ್ದೇವೆ ಎಂದು ಪಟೇಲ್ ಹೇಳಿದ್ದಾರೆ.
Next Story





