ಕರ್ಣಾಟಕ ಬ್ಯಾಂಕ್‌ನಿಂದ ಶ್ರವಣದೋಷ ಪತ್ತೆ ಯಂತ್ರ ಕೊಡುಗೆ
ಯಂತ್ರ ಕೊಡುಗೆ

ಮಂಗಳೂರು, ನ.21: ವಾಕ್ ಮತ್ತು ಶ್ರವಣ ದೋಷ ಚಿಕಿತ್ಸಾ ಕೇಂದ್ರವನ್ನು ಹೊಂದಿರುವ ನಗರದ ಪಾಂಡೇಶ್ವರದಲ್ಲಿರುವ ಸೇವಾ ಗಿಲ್ಡ್ (ಸೇವಾ ಸಮಾಜಂ) ಸಂಸ್ಥೆಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಶ್ರವಣ ದೋಷವನ್ನು ಪತ್ತೆ ಮಾಡುವ ಆಡಿಯೋ ಮೀಟರ್ ಯಂತ್ರವನ್ನು ಇಂದು ಕೊಡುಗೆಯಾಗಿ ನೀಡಲಾಯಿತು. ಯಂತ್ರವನ್ನು ಉದ್ಘಾಟಿಸಿದ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಜಯರಾಮ ಭಟ್, ಬಡವರ ಸೇವಾ ಕಾರ್ಯದಲ್ಲಿ ನಿರತರಾಗಿರುವ ಸೇವಾ ಸಮಾಜಂಗೆ ಉತ್ತಮ ಕಾರ್ಯಕ್ಕಾಗಿ ಕೊಡುಗೆ ನೀಡಲು ಬ್ಯಾಂಕ್ ಸಂತಸಪಡುತ್ತದೆ ಎಂದರು.
ಈ ಸಂದರ್ಭ ಬ್ಯಾಂಕಿನ ಉಪಮಹಾಪ್ರಬಂಧಕ ವಿಜಯಶಂಕರ ರೈ ಕೆ.ವಿ., ಸಹಾಯಕ ಉಪ ಮಹಾ ಪ್ರಬಂಧಕಿ ರೇಣುಕಾ ಎನ್. ಬಂಗೇರ, ಮುಖ್ಯ ಪ್ರಬಂಧಕ ಹಾಗೂ ಪಿಆರ್‌ಒ ಶ್ರೀನಿವಾಸ್ ದೇಶಪಾಂಡೆ, ಸೇವಾ ಗಿಲ್ಡ್‌ನ ಅಧ್ಯಕ್ಷೆ ವಿಜಯಲಕ್ಷ್ಮಿ ಅರಿಗ, ಗೌರವ ಕಾರ್ಯದರ್ಶಿ ಶಾಲಿನಿ ಡಿ. ರೈ, ಸಂಸ್ಥೆಯ ಪ್ರತಿನಿಧಿ ಡಾ.ಎ.ವಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Next Story





