ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ
ಮಂಗಳೂರು, ನ.21: ಅಲ್ಪ ಸಂಖ್ಯಾ ತರ ವಿದ್ಯಾರ್ಥಿಗಳಿಗೆ 2016-17ನೆ ಸಾಲಿನ ಅಲ್ಪಸಂಖ್ಯಾತ ಇಲಾಖೆಯಿಂದ ಕೌಶಲ್ಯ ಕಾರ್ಯಕ್ರಮದಲ್ಲಿ ಅನುಷ್ಠಾನ ಗೊಳ್ಳುವ ಜಿಎನ್‌ಎಂ, ಬಿಎಸ್ಸಿ ಮತ್ತು ಪ್ಯಾರಾಮೆಡಿಕಲ್ ನರ್ಸಿಂಗ್ ತರಬೇತಿ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಅರ್ಹರು ಅರ್ಜಿ ನಮೂನೆಯನ್ನು www.gokdom.kar.nic.in ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯ ಕಚೇರಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನ ಆಝಾದ್ ಕಲ್ಯಾಣ ಭವನ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು-1 ಇಲ್ಲಿಂದ ಪಡೆಯ ಬಹುದು. ಅರ್ಜಿಗಳನ್ನು ಅಗತ್ಯ ದಾಖ ಲಾತಿಗಳೊಂದಿಗೆ ಡಿ.15ರೊಳಗೆ ಸಲ್ಲಿ ಸಲು ಪ್ರಕಟನೆ ತಿಳಿಸಿದೆ.
Next Story





