ಆಕ್ಷೇಪಣೆ ಆಹ್ವಾನ
ಕನಿಷ್ಠ ವೇತನ ದರ ನಿಗದಿ
ಮಂಗಳೂರು, ನ.21: ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸದಲ್ಲಿ ತೊಡಗಿರುವ ಕಾರ್ಮಿಕರುಗಳು ಹಾಗೂ ಖಾಸಗಿ ಶಾಲಾ ಕಾಲೇಜು ಮತ್ತು ವಿವಿಧ ತರಬೆೇತಿ ಕೇಂದ್ರಗಳಲ್ಲಿ ಕೆಲಸ ಮಾಡುವ ಬೋಧಕೇತರ ಸಿಬ್ಬಂದಿ ಎಂಬ ಎರಡು ಉದ್ಯೋಗಗಳನ್ನು ಸೇರ್ಪಡೆಗೊಳಿಸಿ ಕನಿಷ್ಠ ವೇತನ ದರಗಳನ್ನು ನಿಗದಿಪಡಿಸಬೇಕೆಂದು ಸರಕಾರವು ನಿರ್ಧರಿಸಿದೆ. ಈ ಬಗ್ಗೆ ಆಕ್ಷೇಪಣೆ ಅಥವಾ ಸಲಹೆಗಳನ್ನು ಅಪರ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಸಚಿವಾಲಯ ಕೊಠಡಿ ಸಂಖ್ಯೆ 414, 4ನೆ ಮಹಡಿ, ವಿಕಾಸಸೌಧ ಬೆಂಗಳೂರು ಇವರಿಗೆ ಕಳುಹಿಸುವಂತೆ ಕಾರ್ಮಿಕ ಇಲಾಖೆಯ ಪ್ರಕಟನೆ ತಿಳಿಸಿದೆ.
Next Story





