ಫೆಲೊಶಿಪ್ ಅವಧಿ ವಿಸ್ತರಣೆ
ಮಂಗಳೂರು, ನ.21: ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ವ್ಯಾಪ್ತಿಗೊಳಪಡುವ ಸಂಗೀತ ನೃತ್ಯ ಇತ್ಯಾದಿ ಕಲೆಗಳಲ್ಲಿ ಹೆಚ್ಚಿನ ಸಂಶೋಧನೆ/ಅಧ್ಯಯನ ಮಾಡಲು 2016-17ನೆ ಸಾಲಿನ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪರಿಣಿತ ಕಲಾವಿದರು/ತಜ್ಞರಿಂದ ಸಂಶೋಧನೆಗಾಗಿ ಆಹ್ವಾನಿಸಲಾಗಿದ್ದ ಫೆಲೊಶಿಪ್ ಅರ್ಜಿಗಳ ಅವಧಿಯನ್ನು ನ.25ರವರೆಗೆ ವಿಸ್ತರಿಸಲಾಗಿದೆ. ಸಂಶೋಧನಾರ್ಥಿಗಳು ಪದವೀಧರರಾಗಿರಬೇಕು. ಅಭ್ಯರ್ಥಿಗಳು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅರ್ಜಿಗಳನ್ನು ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





