ಇಂದು ಜಿಎಸ್‌ಟಿ ಅರಿವು ಕಾರ್ಯಕ್ರಮ
ಉಡುಪಿ, ನ.21: ಉಡುಪಿಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು, ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆಯ ಸಹಯೋಗದೊಂದಿಗೆ ನ.22ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಚಿಟ್ಪಾಡಿಯಲ್ಲಿರುವ ಯು.ಎಸ್.ನಾಯಕ್ ಹಾಲ್‌ನಲ್ಲಿ ಒಂದು ದಿನದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಗೆ ಸಂಬಂಧ ಪಟ್ಟ ನೂತನ ತೆರಿಗೆ ಪದ್ಧತಿಯ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಿದೆ ಎಂದು ಯುಸಿಸಿಐನ ತೆರಿಗೆ ವಿಷಯಗಳ ಸಮಿತಿ ಅಧ್ಯಕ್ಷ ರಂಜಿತ್ ಪಿ.ಎಸ್. ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಇ-ಆಡಿಟ್) ಕೆ.ಎಸ್.ಬಸವರಾಜ್, ಮಂಗಳೂರು ವಿಭಾಗದ ವಾಣಿಜ್ಯ ತೆರಿಗೆಗಳ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯ ತೆರಿಗೆ ಇಲಾಖೆಯ ಬಿ.ಟಿ.ಮನೋಹರ್ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
Next Story





