ಟೆಂಪೊದಡಿ, ಬಿದ್ದು, ವ್ಯಕ್ತಿ, ಮೃತ್ಯು,
ಹಿರಿಯಡ್ಕ, ನ.21: ಪೆರ್ಡೂರು ಗ್ರಾಮದ ಶಾನರಬೆಟ್ಟು ಎಂಬಲ್ಲಿ ಶನಿವಾರ ಮಧ್ಯಾಹ್ನ್ನ ತನ್ನದೇ ಟೆಂಪೊದ ಅಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಅನಿಲ್ ಶೆಟ್ಟಿ(37) ಎಂದು ಗುರುತಿಸಲಾಗಿದೆ.
ಅನಿಲ್ ಶೆಟ್ಟಿ ಶಾನರ ಬೆಟ್ಟುವಿನ ಶೇಖರ ಶೆಟ್ಟಿ ಎಂಬವರ ಮನೆ ನಿರ್ಮಾಣಕ್ಕೆ ಬೇಕಾದ ಮರಳನ್ನು ತನ್ನ ಟೆಂಪೊದಲ್ಲಿ ತುಂಬಿಸಿ ತಂದಿದ್ದರು. ಅಲ್ಲಿಯ ಇಳಿಜಾರಿನ ಮಣ್ಣು ರಸ್ತೆಯಲ್ಲಿ ಟೆಂಪೊ ನಿಲ್ಲಿಸಿ ಹಿಂಬದಿಯ ಟಯರ್ಗೆ ಅವರು ಕಟ್ಟೆ ಇಡಲು ಯತ್ನಿಸುತ್ತಿದ್ದಾಗ, ಟೆಂಪೊ ಎಡಗಡೆ ವಾಲಿ ಅನಿಲ್ ಶೆಟ್ಟಿ ಮೇಲೆ ಅಡ್ಡ ಬಿತ್ತು ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story