ಡಿಸೆಂಬರ್‌ನಲ್ಲಿ ಮಹಿಳಾ ಸಮಾವೇಶ: ಮಸೂದ್

ಮಂಗಳೂರು, ನ. 22: ಶರೀಅತ್ ವಿಷಯದಲ್ಲಿ ಕೇಂದ್ರದ ಹಸ್ತಕ್ಷೇಪ ವಿರೋಧಿಸಿ ಮುಂದಿನ ಡಿಸೆಂಬರ್ ತಿಂಗಳಲ್ಲಿ ಮಹಿಳೆರಿಂದಲೇ ಸಮಾವಶ ನಡೆಯಲಿದೆ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ಹೇಳಿದ್ದಾರೆ.
ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ. ಮತ್ತು ಉಡುಪಿ ಜಿಲ್ಲೆಯ ನೇತೃತ್ವದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳ ಆಶ್ರಯದಲ್ಲಿ ಇಂದು ನಗರದ ನೆಹರೂ ಮೈದಾನದಲ್ಲಿ ನಡೆದ ಬೃಹತ್ ‘ಶರೀಅತ್ ಸಂರಕ್ಷಣಾ ಸಮಾವೇಶ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾನ ನಾಗರಿಕ ಸಂಹಿತೆ ಜಾರಿತೆ ತರಲು ಉದ್ದೇಶಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ. ಶರೀಅತ್ ವಿಷಯದಲ್ಲಿ ಕೈ ಹಾಕಿದರೆ ಧರ್ಮ ರಕ್ಷಣೆಗಾಗಿ ಮುಸ್ಲಿಮರು ಹುತಾತ್ಮರಾಗಲೂ ಸಿದ್ಧರಾಗಿದ್ದಾರೆ ಎಂದರು.
Next Story





