ಯೆನಪೊಯ ಮೆಡಿಕಲ್ ಕಾಲೇಜಿನಲ್ಲಿ ಪ್ರತ್ಯಕ್ಷ ಶಸ್ತ್ರಚಿಕಿತ್ಸೆ ಕಾರ್ಯಾಗಾರ

ಮಂಗಳೂರು,ನ.22: ನಗರದ ಯೆನಪೊಯ ವೈದ್ಯಕೀಯ ಮಹಾವಿದ್ಯಾಲಯದ ಇಎನ್‌ಟಿ ಹಾಗೂ ತಲೆ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸಾ ವಿಭಾಗವು ಇತ್ತೀಚಿಗೆ ಎರಡು ದಿನಗಳ ಪ್ರತ್ಯಕ್ಷ ಶಸ್ತ್ರಚಿಕಿತ್ಸಾ ಕಾರ್ಯಾಗಾರ ‘ಯೆನ್ ಒಟೊಫೆಸ್ 2016 ’ನ್ನು ಹಮ್ಮಿಕೊಂಡಿತ್ತು.
ಈ ಕಾರ್ಯಾಗಾರವು ಪ್ರತಿಷ್ಠಿತ ಅತಿಥಿ ಬೋಧಕರಿಂದ ಕಿವಿ ಮತ್ತು ಮೂಗಿನ ವಿವಿಧ ಶಸ್ತ್ರಚಿಕಿತ್ಸೆಗಳ ಕುರಿತು ಉಪನ್ಯಾಸಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ಒಳಗೊಂಡಿತ್ತು. ಖ್ಯಾತ ಕರ್ಣಶಾಸ್ತ್ರಜ್ಞರಾದ ಬೆಂಗಳೂರಿನ ಡಾ.ವಿಜಯೇಂದ್ರ ಎಚ್.ಮತ್ತು ಡಾ.ದೀಪಕ್ ಹಳದಿಪುರ ಅವರು ಅತಿಥಿ ಬೋಧಕರಾಗಿದ್ದರು.
ಯೆನಪೊಯ ವಿವಿಯ ನಿರ್ದೇಶಕ(ಹಣಕಾಸು)ಫರ್ಹಾದ್ ಯೆನಪೊಯ ಅವರು ಉದ್ಘಾಟಿಸಿದ ಕಾರ್ಯಾಗಾರದಲ್ಲಿ ಕರ್ನಾಟಕ ಮತ್ತು ಕೇರಳಗಳ ಸುಮಾರು 80ಕ್ಕೂ ಅಧಿಕ ವೈದ್ಯರು ಭಾಗವಹಿಸಿದ್ದರು.
Next Story





