ಜ.21ರಿಂದ ಹಾಕಿ ಇಂಡಿಯಾ ಲೀಗ್ ಆರಂಭ

ಹೊಸದಿಲ್ಲಿ, ನ.22: ಐದನೆ ಆವೃತ್ತಿಯ ಹಾಕಿ ಇಂಡಿಯ ಲೀಗ್(ಎಚ್‌ಐಎಲ್) ವೇಳಾಪಟ್ಟಿಯಲ್ಲಿ ಹಾಕಿ ಇಂಡಿಯಾ ಮಂಗಳವಾರ ಘೋಷಿಸಿದೆ.
ಎಚ್‌ಐಎಲ್ ಜ.21 ರಿಂದ ಫೆ.26ರ ತನಕ ನಡೆಯಲಿದೆ. ಉದ್ಘಾಟನಾ ಪಂದ್ಯ ಮುಂಬೈನಲ್ಲಿ ಆತಿಥೇಯ ದಬಾಂಗ್ ಮುಂಬೈ ಹಾಗೂ ಮಾಜಿ ಚಾಂಪಿಯನ್ ರಾಂಚಿ ರೇಯ್ಸಾ ನಡುವೆ ನಡೆಯಲಿದೆ.
ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯವನ್ನು ಸಂಪ್ರದಾಯದಂತೆ ಹಾಲಿ ಚಾಂಪಿಯನ್ ತಂಡದ ತವರು ಮೈದಾನದಲ್ಲಿ ನಡೆಯುವುದು. ಈ ಬಾರಿ ಜೇಪಿ ಪಂಜಾಬ್ ವಾರಿಯರ್ಸ್‌ನ ತವರು ಮೈದಾನ ಚಂಡೀಗಢದಲ್ಲಿ ನಡೆಯಲಿದೆ.
ಲೀಗ್ ಹಂತದ ಪಂದ್ಯಗಳು ಸಂಜೆ 7ಕ್ಕೆ ಆರಂಭವಾಗುತ್ತದೆ.ದಿನಕ್ಕೆ ಒಂದೇ ಲೀಗ್ ಪಂದ್ಯ ನಡೆಯುತ್ತದೆ. ನಾಕೌಟ್ ಹಂತದಲ್ಲಿ ದಿನಕ್ಕೆ ಎರಡು ಪಂದ್ಯಗಳು ಇರುತ್ತವೆ.
2017ರ ಆವೃತ್ತಿಯ ಎಚ್‌ಐಎಲ್‌ಗೆ ನ.16 ರಂದು ನಡೆದ ಬಿಡ್ ಪ್ರಕ್ರಿಯೆಯಲ್ಲಿ ಗುರ್ಬಾಜ್ ಸಿಂಗ್ 99,000 ಡಾಲರ್‌ಗೆ ಹರಾಜಾದರು.
Next Story





