ನೋಟು ನಿಷೇಧ: ಜನತೆಯ ಅಭಿಪ್ರಾಯ ಕೋರಿದ ಪ್ರಧಾನಿ
ಹೊಸದಿಲ್ಲಿ,ನ.22: ಪ್ರತಿಪಕ್ಷಗಳ ದಾಳಿಯ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ಕ್ರಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತನ್ನ ಆ್ಯಪ್ ಮೂಲಕ ನೇರವಾಗಿ ತನಗೆ ತಿಳಿಸುವಂತೆ ಜನತೆಯನ್ನು ಕೋರಿಕೊಂಡಿದ್ದಾರೆ.
ಹಳೆಯ 500 ಮತ್ತು 1,000 ರೂ.ನೋಟುಗಳ ರದ್ದತಿಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳನ್ನು ಮುಂದಿರಿಸಲಾಗಿರುವ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಅವರು ಸಾರ್ವಜನಿಕರಿಗೆ ಟ್ವೀಟೊಂದರಲ್ಲಿ ಸೂಚಿಸಿದ್ದಾರೆ.
ನೀವು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹಂಚಿಕೊಳ್ಳಲು ಬಯಸುವ ಯಾವುದೇ ಸಲಹೆ/ಪರಿಕಲ್ಪನೆ ಅಥವಾ ಒಳನೋಟಗಳಿವೆಯೇ ಎಂಬಂತಹ ಪ್ರಶ್ನೆಗಳನ್ನು ಅವರು ಜನರ ಮುಂದಿರಿಸಿದ್ದಾರೆ.ಭಾರತದಲ್ಲಿ ಕಪ್ಪುಹಣ ಇದೆ ಎಂದು ನೀವು ಭಾವಿಸಿದ್ದೀರಾ? ಭ್ರಷ್ಟಾಚಾರ ಮತ್ತು ಕಪ್ಪುಹಣದ ಪಿಡುಗಿನ ವಿರುದ್ಧ ಹೋರಾಡಿ ಅದನ್ನು ನಿರ್ಮೂಲಿಸಬೇಕೆಂದು ನೀವು ಬಯಸಿದ್ದೀರಾ ಎಂಬಂತಹ ಇತರ ಪ್ರಶ್ನೆಗಳನ್ನೂ ಮೋದಿ ಕೇಳಿದ್ದಾರೆ. ನೋಟುಗಳನ್ನು ನಿಷೇಧಿಸಿರುವ ಸರಕಾರದ ಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದೂ ಅವರು ಪ್ರಶ್ನಿಸಿದ್ದಾರೆ.
Next Story





