ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಉಡುಪಿ, ನ.23: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಒಂದನೆ ಆರೋಪಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ಅರ್ಜಿಯ ವಿಚಾರಣೆಯನ್ನು ಮತ್ತೆ ನ.30ಕ್ಕೆ ಮುಂದೂಡಲಾಗಿದೆ.
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವ ಶಂಕರ್ ಅಮರಣ್ಣವರ್ ವರ್ಗಾವಣೆಗೊಂಡಿದ್ದು, ನೂತನ ನ್ಯಾಯಾಧೀಶರು ಇನ್ನಷ್ಟೆ ಅಧಿಕಾರ ವಹಿಸಿಕೊಳ್ಳಬೇಕಾಗಿದೆ. ಆದುದರಿಂದ ನ್ಯಾಯಾಧೀಶರು ಇಲ್ಲದ ಕಾರಣ ಇಂದು ನಡೆಯಬೇಕಾಗಿದ್ದ ಜಾಮೀನು ಅರ್ಜಿ ವಿಚಾರಣೆ ಯನ್ನು ಮುಂದೂಡಲಾಗಿದೆ.
ನೂತನ ನ್ಯಾಯಾಧೀಶರು
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಆರ್.ಬಿ.ಧರ್ಮಗೌಡರ್ ರನ್ನು ನೇಮಕ ಮಾಡಲಾಗಿದೆ. ಇವರು ಈ ಹಿಂದೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದರು.
Next Story





