ಮೋಹಿತ್ ಆರ್.ಹೆಗ್ಡೆಗೆ ಅಂತಾರಾಷ್ಟ್ರೀಯ ಗೌರವ ಡಾಕ್ಟರೇಟ್

ಮೂಡಬಿದಿರೆ, ನ.23: ಬೆಂಗಳೂರಿನ ಕ್ರಿಯೇಟಿವ್ ಇನ್ಫೋಟೆಕ್ ನಿರ್ದೇಶಕ ಮೋಹಿತ್ ಆರ್. ಹೆಗ್ಡೆಯವರು ಆಡಳಿತ ನಿರ್ವಹಣೆಯಲ್ಲಿ ತೋರಿರುವ ಅತ್ಯುತ್ತಮ ಸಾಧನೆಯನ್ನು ಗುರುತಿಸಿ, ಅವರಿಗೆ ದಕ್ಷಿಣ ಕೊರಿಯಾದ ಕೆ.ಇ.ಐ.ಎಸ್.ಐ.ಇ. ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯವು ಕಾನ್ಫೆಡರೇಶನ್ ಆಫ್ ಇಂಟರ್‌ನ್ಯಾಷನಲ್ ಹೆಲ್ತ್ ಕೇರ್ ಫೌಂಡೇಶನ್‌ನ ಸಹಭಾಗಿತ್ವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಬೆಂಗಳೂರಿನ ಪುರಭವನದಲ್ಲಿ ನಡೆದ ಜ್ಞಾನ ಸಮಾವೇಶದಲ್ಲಿ ಕೆ.ಇ.ಐ.ಎಸ್.ಐ.ಇ. ವಿ.ವಿ. ಅಧ್ಯಕ್ಷ ಡಾ.ವೈಯ್ನೆ ಬೊಟ್ಟಿಗೆರ್ ಮತ್ತು ಸಿಐಎಸಿ ಆ್ಯಂಡ್ ಸಿಐಎಚ್‌ಎಫ್ ಗ್ಲೋಬಲ್‌ನ ಅಧ್ಯಕ್ಷ ಪ್ರೊ.ಡಾ.ಜಿ.ಡಿ.ಸಿಂಗ್ ಪ್ರಶಸ್ತಿ ಪ್ರದಾನಗೈದರು. ಸಂಘಟಕ, ಬೆಂಗಳೂರಿನ ಇಂಪೀರಿಯಲ್ ಕಾಲೇಜಿನ ಸ್ಥಾಪಕಾಧ್ಯಕ್ಷ ಡಾ. ಹರಿಕೃಷ್ಣ ಮಾರಮ್, ಸಿನಿಮಾ ನಟಿ ನೇಹಾ ಸಕ್ಸೇನಾ ಉಪಸ್ಥಿತರಿದ್ದರು.
ಇವರು ಕೊಡ್ಯಡ್ಕ ರಘುರಾಮ ಹೆಗ್ಡೆ -ಕಲಾವತಿ ದಂಪತಿಯ ಪುತ್ರ.
Next Story





