ಕ್ರಿಕೆಟ್ ಮ್ಯಾನೇಜರ್ ಸಮೀರ್ ದಾಸ್‌ಗುಪ್ತಾ ನಿಧನ
ಕೋಲ್ಕತಾ, ನ.23: ದೀರ್ಘಕಾಲದಿಂದ ಕ್ರಿಕೆಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಮೀರ್ ದಾಸ್‌ಗುಪ್ತಾ ಬುಧವಾರ ಹಠಾತ್ ನಿಧನರಾದ ಹಿನ್ನೆಲೆಯಲ್ಲಿ ಬಂಗಾಳ ಕ್ರಿಕೆಟ್ ವಲಯ ಆಘಾತಗೊಂಡಿದೆ.
ದಾಸ್ ಗುಪ್ತಾ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 74ರ ಪ್ರಾಯದ ದಾಸ್‌ಗುಪ್ತಾ ರಾಜ್‌ಕೋಟ್‌ನಲ್ಲಿ ನ.13 ರಿಂದ 16ರ ತನಕ ನಡೆದಿದ್ದ ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ಬಂಗಾಳ ತಂಡದೊಂದಿಗೆ ಇದ್ದರು.
ರಾಜ್‌ಕೋಟ್‌ನಲ್ಲಿ ಆಡಿದ ಬಳಿಕ ಬಂಗಾಳ ತಂಡ ಲಾಹ್ಲಿಗೆ ತೆರಳಿದೆ. ಆದರೆ,ದಾಸ್‌ಗುಪ್ತಾರ ಆರೋಗ್ಯ ಹದಗೆಟ್ಟ ಕಾರಣ ಅವರು ಮುಂಬೈನಿಂದ ಕೋಲ್ಕತಾಕ್ಕೆ ವಾಪಸಾಗಿದ್ದರು. ನ.19 ರಂದು ಕೋಲ್ಕತಾದ ಆಸ್ಪತ್ರೆಗೆ ದಾಖಲಾಗಿದ್ದರು.
ದಾಸ್ ಗುಪ್ತಾ ಆರ್‌ಎನ್ ಠಾಕೂರ್ ಆಸ್ಪತ್ರೆಯಲ್ಲಿ ಬೆಳಗ್ಗೆ 6:40ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ದಾಸ್‌ಗುಪ್ತಾರ ಅಳಿಯ ತಿಳಿಸಿದ್ದಾರೆ.
ಈಸ್ಟ್‌ಬಂಗಾಳ ಕ್ಲಬ್‌ನಲ್ಲಿ ಉಪಾಧ್ಯಕ್ಷರಾಗಿದ್ದ ದಾಸ್‌ಗುಪ್ತಾ ಕ್ರಿಕೆಟ್ ಕಾರ್ಯದರ್ಶಿ ಸಹಿತ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.





