ನೋಟು ರದ್ದತಿ ಕುರಿತ ಸಮೀಕ್ಷೆ: ಪ್ರಧಾನಿ ಮೋದಿ ಜನರಲ್ಲಿ ಕೇಳಬೇಕಾಗಿದ್ದ 10 ಪ್ರಶ್ನೆಗಳು

1 ಸಾವಿರ ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ತನ್ನ ನಿರ್ಧಾರದಿಂದಾಗಿ ಭುಗಿಲೆದ್ದಿರುವ ವಿವಾದಗಳನ್ನು ಶಮನಗೊಳಿಸುವ ಪ್ರಯತ್ನವಾಗಿ ಪ್ರಧಾನಿ ನರೇಂದ್ರ ಮೋದಿ, ತನ್ನ ಅಧಿಕೃತ ಮೊಬೈಲ್ ಫೋನ್ ಆ್ಯಪ್ಲಿಕೇಶನ್ ಮೂಲಕ ಜನಾಭಿಪ್ರಾಯ ಸಂಗ್ರಹಿಸಿದ್ದರು.
ಆದರೆ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವವರಿಗೆ, ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅತ್ಯಂತ ಕಡಿಮೆ ಅವಕಾಶಗಳಿದ್ದವು. ಅದರ ಬದಲಾಗಿ ಸರಕಾರವು ಬಯಸುತ್ತಿರುವಂತಹ ಉತ್ತರಗಳೇ ಜನರಿಂದ ದೊರೆಯುವಂತಹ ರೀತಿಯಲ್ಲಿ ಈ ಪ್ರಶ್ನೆಗಳನ್ನು ರೂಪಿಸಲಾಗಿತ್ತು.
‘‘ಭಾರತದಲ್ಲಿ ಕಪ್ಪು ಹಣವು ಅಸ್ತಿತ್ವದಲ್ಲಿದೆಯೇ ಎಂಬುದಾಗಿ ನೀವು ಭಾವಿಸುವಿರಾ?’’ ಹಾಗೂ ಭ್ರಷ್ಟಾಚಾರ ಹಾಗೂ ಕಪ್ಪು ಹಣದ ದುಷ್ಟಪಿಡುಗನ್ನು ನಿರ್ಮೂಲನೆಗೊಳಿಸುವ ಅಗತ್ಯವಿದೆಯೆಂದು ನೀವು ಭಾವಿಸಿದ್ದೀರಾ? ’’ ಎಂಬಂತಹ ಪ್ರಶ್ನೆಗಳನ್ನು ಈ ಸಮೀಕ್ಷೆಯು ಒಳಗೊಂಡಿತ್ತು. ಒಂದು ವೇಳೆ ಮೋದಿಯವರಿಗೆ ದೇಶದ ಪ್ರಜೆಗಳಿಂದ ನೈಜವಾದ ಪ್ರತಿಕ್ರಿಯೆಯನ್ನು ಪಡೆಯಲು ಬಯಸಿದ್ದರೆ, ಅವರು ಕೇಳಬೇಕಾಗಿದ್ದ 10 ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ.
1. ನಿಮ್ಮ ಖಾತೆಯಿಂದ ನಿಮ್ಮ ಹಣವನ್ನು ಪಡೆಯಲು ಬ್ಯಾಂಕ್ ಅಥವಾ ಎಟಿಎಂಗಳಲ್ಲಿ ಎಷ್ಟು ಸಮಯವನ್ನು ಕಳೆದಿದ್ದೀರಿ?.
2. ನಿಮಗೆ ಅಗತ್ಯವಿರುವಷ್ಟು ಮೊತ್ತವನ್ನು ನೀವು ಪಡೆಯುತ್ತಿದ್ದೀರಾ?. ಒಂದು ವೇಳೆ ಹೌದಾಗಿದ್ದಲ್ಲಿ ಇದಕ್ಕಾಗಿ ನೀವು ಎಷ್ಟು ಬಾರಿ ಪ್ರಯತ್ನಿಸಿದ್ದೀರಿ?.
3.ನೀವು ಎದುರಿಸುತ್ತಿರುವ ಸಮಸ್ಯೆಗಳು ಇವುಗಳ ಪೈಕಿ ಯಾವುದನ್ನು ಸೂಚಿಸುತ್ತವೆಯೆದು ನೀವು ಭಾವಿಸಿದ್ದೀರಿ?.
ಎ) ಕಪ್ಪು ಹಣದ ವಿರುದ್ಧ ಹೋರಾಡುವ ಸರಕಾರದ ನಿರ್ಧಾರದಿಂದ ಅನಿವಾರ್ಯವಾಗಿ ಉದ್ಭವಿಸಿರುವ ಪರಿಣಾಮ ಇದಾಗಿದೆ.
ಬಿ) 125 ಕೋಟಿ ಜನಸಂಖ್ಯೆಯಿರುವ ಈ ದೇಶದಲ್ಲಿ ಇದೊಂದು ತಪ್ಪಿಸಲು ಸಾಧ್ಯವಿಲ್ಲದ ಸಮಸ್ಯೆಯಾಗಿದೆ.
ಸಿ) ನೋಟು ಅಮಾನ್ಯತೆಯನ್ನು ಅನುಷ್ಠಾನಗೊಳಿಸುವಲ್ಲಿ ಸರಕಾರದಿಂದ ಸಮರ್ಪಕ ಪೂರ್ವಸಿದ್ಧತೆಯ ಕೊರತೆ.
4) 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳು ಅಮಾನ್ಯಗೊಂಡಿರುವುದರಿಂದ ಭಯೋತ್ಪಾದಕರಿಗೆ ತಮ್ಮ ಚಟುವಟಿಕೆಗಳನ್ನು ನಡೆಸುವುದಕ್ಕೆ ಹಣದ ಅಭಾವವುಂಟಾಗುವುದೆಂದು ನೀವು ಭಾವಿಸುತ್ತೀರಾ?.
5). ಅಧಿಕ ವೌಲ್ಯದ ಕರೆನ್ಸಿ ನೋಟುಗಳು ಭ್ರಷ್ಟಾಚಾರ ಸ್ನೇಹಿ ಹಾಗೂ ಕಪ್ಪುಹಣದ ಸಂಗ್ರಹವನ್ನು ಸುಲಭಗೊಳಿಸುತ್ತವೆ. ಹೀಗಿರುವಾಗ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ನೀವು ಬೆಂಬಲಿಸುವಿರಾ?.
6). 2 ಸಾವಿರ ರೂ. ಮುಖಬೆಲೆಯ ನೋಟುಗಳು ಯಾವುದೇ ಹೆಚ್ಚುವರಿ ಭದ್ರತಾ ಅಂಶಗಳನ್ನು ಒಳಗೊಂಡಿರುವುದಿಲ್ಲ.ಅವುಗಳ ಖೋಟಾ ನೋಟುಗಳನ್ನು ತಯಾರಿಸಲಾಗುತ್ತದೆ ಹಾಗೂ ಅವುಗಳನ್ನು ಭಯೋತ್ಪಾದಕರು ಬಳಸಿಕೊಳ್ಳಲಿದ್ದಾರೆಂದು ನೀವು ಭಾವಿಸುತ್ತೀರಾ?.
7). ಈ ಯೋಜನೆಯ ಪ್ರಾಥಮಿಕ ಗುರಿ ಏನೆಂದು ನೀವು ಭಾವಿಸುವಿರಿ?
ಎ) ಆರ್ಥಿಕ
ಬಿ) ಇದೊಂದು ಭ್ರಷ್ಟಾಚಾರದ ವಿರುದ್ಧ ದಾಳಿಯಾಗಿದೆ.
ಇ) ರಾಜಕೀಯ
8.ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ನೀವು ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಸಮಯವನ್ನು ತ್ಯಾಗ ಮಾಡಿದ್ದೀರಿ ಹಾಗೂ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ ಎಂದು ಭಾವಿಸುತ್ತೀರಾ? ಅಥವಾ ಯಾರೋ ಮಾಡಿದ ತಪ್ಪಿಗಾಗಿ ನೀವು ಬೆಲೆತೆರಬೇಕಾಗಿ ಬಂದಿದೆಯೆಂದು ಯೋಚಿಸುತ್ತೀರಾ?.
9. ನಗದು ಅಮಾನ್ಯತೆಯ ಬಳಿಕ ಜನರು ಸಾವನ್ನಪ್ಪುತ್ತಿರುವ ಅಥವಾ ಅನುಭವಿಸುತ್ತಿರುವ ಬವಣೆಗಳ ಕುರಿತು ಪ್ರಕಟವಾಗುತ್ತಿರುವ ವರದಿಗಳು ನಕಲಿ ಅಥವಾ ರಾಜಕೀಯ ಪ್ರೇರಿತವೆಂದು ನೀವು ಭಾವಿಸುವಿರಾ?.
10. ನೋಟುಗಳನ್ನು ನಿಷೇಧಿಸುವ ನಿರ್ಧಾರ ಹಾಗೂ ಈ ನೀತಿಯನ್ನು ಜಾರಿಗೊಳಿಸಿದ ರೀತಿ ಇವೆರಡೂ ಪ್ರತ್ಯೇಕ ವಿಷಯಗಳಾಗಿವೆ ಹಾಗೂ ಆ ಬಗ್ಗೆ ಎರಡು ವಿಭಿನ್ನ,ತದ್ವಿರುದ್ಧ ಅಭಿಪ್ರಾಯಗಳಿರಬಹುದು ಎಂದು ನೀವು ಭಾವಿಸುತ್ತೀರಾ?.







