ಆರ್‌ಜೆಡಿ ಶಾಸಕನ ಜಾಮೀನು ಸುಪ್ರೀಂ ಕೋರ್ಟ್‌ನಿಂದ ರದ್ದು
ಹೊಸದಿಲ್ಲಿ, ನ.24: ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿರುವ ಅಮಾನತುಗೊಂಡಿರುವ ಆರ್‌ಜೆಡಿ ಶಾಸಕ ರಾಜವಲ್ಲಭ ಯಾದವ್‌ಗೆ ಪಾಟ್ನಾ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಗುರುವಾರ ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
ಅತ್ಯಾಚಾರ ಪ್ರಕರಣದ ವಿಚಾರಣೆ ಮುಗಿಯುವವರೆಗೆ ರಾಜ್ಯದಿಂದ ಹೊರಗಿರು ವೆನೆಂದು ಮುಚ್ಚಳಿಕೆ ನೀಡಲು ಒಪ್ಪಿದ ಯಾದವ್‌ರ ಮನವಿಯನ್ನು ನ್ಯಾಯಮೂರ್ತಿ ಗಳಾದ ಎ.ಕೆ.ಸಿಕ್ರಿ ಹಾಗೂ ಎ.ಎ.ಸಪ್ರೆಯವರಿದ್ದ ಪೀಠವು ತಿರಸ್ಕರಿಸಿದೆ. ಬಿಹಾರದ ಶಾಸಕನ ಮೇಲಿರುವ ಆರೋಪಗಳು ಗಂಭೀರವಾದವುಗಳಾಗಿವೆ. ಅವರು ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬಹುದೆಂದು ಪೀಠ ಅಭಿಪ್ರಾಯಿಸಿದೆ.
ಯಾದವ್‌ಗೆ ಜಾಮೀನು ಮಂಜೂರು ಮಾಡಿದ ಪಾಟ್ನಾ ಹೈಕೋರ್ಟ್‌ನ ಆದೇಶವನ್ನು ನಿತೀಶ್ ಕುಮಾರ್ ಸರಕಾರ ಪ್ರಶ್ನಿಸಿತ್ತು.
Next Story





