ಪಾಂಟಿಂಗ್ ಆಸ್ಟ್ರೇಲಿಯದ ಮುಖ್ಯ ಕೋಚ್?

ಮೆಲ್ಬೋರ್ನ್, ನ.24: ಆಸ್ಟ್ರೇಲಿಯದ ಮಾಜಿ ಕ್ರಿಕೆಟ್ ನಾಯಕ ರಿಕಿ ಪಾಂಟಿಂಗ್ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಆಸ್ಟ್ರೇಲಿಯ ತಂಡದ ಕೋಚ್ ಇಲ್ಲವೇ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನ ಅಲಂಕರಿಸುವ ಬಗ್ಗೆ ಪಾಂಟಿಂಗ್ ಒಲವು ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕ ವಿರುದ್ಧ ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋತ ಬಳಿಕ ಆಯ್ಕೆ ಸಮಿತಿಯ ಮುಖ್ಯಸ್ಥ ರಾಡ್ ಮಾರ್ಷ್ ರಾಜೀನಾಮೆ ನೀಡಿದ್ದರು. ಮಾರ್ಷ್‌ರಿಂದ ತೆರವಾಗಿರುವ ಸ್ಥಾನಕ್ಕೆ ಪಾಂಟಿಂಗ್ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ.
ಪೂರ್ಣಕಾಲಿಕ ಕೋಚ್ ಆಗಿ ಕಾರ್ಯನಿರ್ವಹಿಸುವ ಬಯಕೆಯಿದೆ. ಯಾವ ಹುದ್ದೆಯನ್ನಾದರೂ ನಿಭಾಯಿಸಲು ತಯಾರಿದ್ದೇನೆ ಎಂದು ಕ್ರಿಕೆಟ್ ಆಸ್ಟ್ರೇಲಿಯಕ್ಕೆ ತಾನು ತಿಳಿಸಿದ್ದೇನೆ ಎಂದು ಪಾಂಟಿಂಗ್ ತಿಳಿಸಿದ್ದಾರೆ.
41ರ ಹರೆಯದ ಪಾಂಟಿಂಗ್ ಆಸ್ಟ್ರೇಲಿಯದ ಪರ 168 ಟೆಸ್ಟ್, 375 ಏಕದಿನ ಹಾಗೂ 17 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
Next Story





