ಹಾಂಕಾಂಗ್ ಓಪನ್: ಸೈನಾ, ಸಿಂಧು ಕ್ವಾರ್ಟರ್ ಫೈನಲ್‌ಗೆ

ಕೌಲೂನ್, ನ.24: ಚೀನಾ ಓಪನ್ ಚಾಂಪಿಯನ್ ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ಕಳೆದ ವಾರ ಚೀನಾ ಓಪನ್ ಜಯಿಸಿ ಚೊಚ್ಚಲ ಸೂಪರ್ ಸರಣಿಯನ್ನು ಮುಡಿಗೇರಿಸಿಕೊಂಡಿದ್ದ ಸಿಂಧು ಗುರುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ 2ನೆ ಸುತ್ತಿನ ಪಂದ್ಯದಲ್ಲಿ ಚೈನೀಸ್ ತೈಪೆಯ ಸು ಯಾ ಚಿಂಗ್‌ರನ್ನು 21-10, 21-4 ಗೇಮ್‌ಗಳ ಅಂತರದಿಂದ ಮಣಿಸಿದರು.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸೈನಾ ಅವರು ಜಪಾನ್‌ನ ಸಯಾಕಾ ಸಾಟೊರನ್ನು 21-18, 9-21, 21-16 ಗೇಮ್‌ಗಳ ಅಂತರದಿಂದ ಮಣಿಸಿದರು.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಬಾರಿ ಕಂಚಿನ ಪದಕ ಜಯಿಸಿದ್ದ ಸಿಂಧು ಮುಂದಿನ ಸುತ್ತಿನಲ್ಲಿ ಸಿಂಗಾಪುರದ ಕಿಯಾಯು ಲಿಯಾಂಗ್‌ರನ್ನು ಎದುರಿಸಲಿದ್ದಾರೆ. ಸೈನಾ ಮುಂದಿನ ಸುತ್ತಿನಲ್ಲಿ ಹಾಂಕಾಂಗ್‌ನ ಚೆಯುಂಗ್ ನಗಾನ್‌ರನ್ನು ಎದುರಿಸಲಿದ್ದಾರೆ.
ಸೈನಾ ಹಾಗೂ ಸಿಂಧು ಕ್ವಾರ್ಟರ್‌ಫೈನಲ್‌ನಲ್ಲಿ ವಿಜಯಿಯಾದರೆ, ಸೆಮಿ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಪುರುಷರ ಸಿಂಗಲ್ಸ್‌ನಲ್ಲಿ ಅಜಯ್ ಜಯರಾಮ್ ಚೀನಾದ ಹುಯಾಂಗ್ ಯೂಕ್ಸಿಯಾಂಗ್‌ರನ್ನು 21-18, 21-19 ಗೇಮ್‌ಗಳಿಂದ ಮಣಿಸಿದರು. ನ್ಯಾಶನಲ್ ಚಾಂಪಿಯನ್ ಸಮೀರ್ ವರ್ಮ ಜಪಾನ್‌ನ ಕಝುಮಸ ಸಕೈ ಅವರನ್ನು 19-21, 21-15, 21-11 ಗೇಮ್‌ಗಳ ಅಂತರದಿಂದ ಮಣಿಸಿದರು.







