ಕರ್ನಾಟಕ-ಒಡಿಶಾ ರಣಜಿ ಪಂದ್ಯ ಡ್ರಾ
ಗೌತಮ್-ಗೋಪಾಲ್ ಸಾಹಸ

ಹೊಸದಿಲ್ಲಿ, ನ.24: ಗೌತಮ್(95) ಹಾಗೂ ಶ್ರೇಯಸ್ ಗೋಪಾಲ್(77) ಸಾಹಸದ ನೆರವಿನಿಂದ ಕರ್ನಾಟಕ ತಂಡ ಒಡಿಶಾ ವಿರುದ್ಧ ಇಲ್ಲಿ ನಡೆಯುತ್ತಿದ್ದ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸಿದೆ. ಮೊದಲ ಇನಿಂಗ್ಸ್‌ನಲ್ಲಿ 163 ರನ್ ಮುನ್ನಡೆ ಪಡೆದಿದ್ದ ಒಡಿಶಾ ತಂಡ 3 ಅಂಕವನ್ನು ಗಳಿಸಿದರೆ, ಕರ್ನಾಟಕ ಒಂದಂಕ ಗಳಿಸಿತು.
ನಾಲ್ಕನೆ ಹಾಗೂ ಅಂತಿಮ ದಿನದಾಟವಾದ ಗುರುವಾರ 6 ವಿಕೆಟ್‌ಗಳ ನಷ್ಟಕ್ಕೆ 244 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡ 393 ರನ್ ಗಳಿಸಿ ಆಲೌಟಾಯಿತು. ಒಡಿಶಾದ ಗೆಲುವಿಗೆ 231 ರನ್ ಗುರಿ ನೀಡಿತು.
ವಿಕೆಟ್‌ಕೀಪರ್ ದಾಂಡಿಗ ಸಿಎಂ ಗೌತಮ್(95 ರನ್, 240 ಎಸೆತ, 5 ಬೌಂಡರಿ, 1 ಸಿಕ್ಸರ್), ಎಸ್.ಗೋಪಾಲ್(71 ರನ್, 130 ಎಸೆತ,4 ಬೌಂಡರಿ) ಹಾಗೂ ಕೆ. ಗೌತಮ್ (46 ರನ್, 62 ಎಸೆತ, 3 ಬೌಂಡರಿ,1 ಸಿಕ್ಸರ್)ಕರ್ನಾಟಕ ತಂಡ ಒಡಿಶಾ ವಿರುದ್ಧ ಡ್ರಾ ಸಾಧಿಸಲು ಪ್ರಮುಖ ಕಾಣಿಕೆ ನೀಡಿದರು.
81 ರನ್‌ನಿಂದ ಮುನ್ನಡೆಯೊಂದಿಗೆ ಎರಡನೆ ಇನಿಂಗ್ಸ್ ಮುಂದುವರಿಸಿದ ಗೌತಮ್ ಹಾಗೂ ಶ್ರೇಯಸ್ ಗೋಪಾಲ್ 7ನೆ ವಿಕೆಟ್‌ಗೆ 71 ರನ್ ಸೇರಿಸಿದರು. ಕೇವಲ 5 ರನ್‌ನಿಂದ ಶತಕ ವಂಚಿತರಾದ ಗೌತಮ್ ಅವರು ಪ್ರಧಾನ್‌ಗೆ ವಿಕೆಟ್ ಒಪ್ಪಿಸಿದರು.
ಗೌತಮ್ ಔಟಾದ ಬಳಿಕ ಗೋಪಾಲ್ ಹಾಗೂ ಆಫ್ ಸ್ಪಿನ್ನರ್ ಕೆ.ಗೌತಮ್ 8ನೆ ವಿಕೆಟ್‌ಗೆ ಉಪಯುಕ್ತ 86 ರನ್ ಜೊತೆಯಾಟ ನಡೆಸಿದರು. ಗೌತಮ್ ಔಟಾಗುವುದರೊಂದಿಗೆ ಕರ್ನಾಟಕದ ಎರಡನೆ ಇನಿಂಗ್ಸ್‌ಗೆ ತೆರೆ ಬಿತ್ತು.
ಗುರುವಾರ ಇಲ್ಲಿ ನಡೆದ ನಾಲ್ಕನೆ ದಿನದಾಟದಲ್ಲಿ ಕರ್ನಾಟಕ ಕೊನೆಯ ನಾಲ್ಕು ವಿಕೆಟ್‌ಗಳಲ್ಲಿ 162 ರನ್ ಕಲೆ ಹಾಕಿತು. ಈ ಮೂಲಕ ಒಡಿಶಾದ ಗೆಲುವಿಗೆ ಕಠಿಣ ಸವಾಲು ಒಡ್ಡಿತು.
ಗೆಲ್ಲಲು ಕಠಿಣ ಗುರಿ ಪಡೆದಿದ್ದ ಒಡಿಶಾ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವ ಮೊದಲು 32 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿತು. ಪಟ್ನಾಯಕ್(ಅಜೇಯ 27) ಹಾಗೂ ರಂಜಿತ್ ಸಿಂಗ್(35) ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು.
ಈ ಋತುವಿನಲ್ಲಿ ಮೊದಲ ಬಾರಿ ಎದುರಾಳಿ ತಂಡಕ್ಕೆ ಮುನ್ನಡೆ ಬಿಟ್ಟುಕೊಟ್ಟಿರುವ ಕರ್ನಾಟಕ ಒಂದಂಕಕ್ಕೆ ತೃಪ್ತಿಪಟ್ಟುಕೊಂಡಿತು. ಆದರೆ, ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.
ಸ್ಕೋರ್ ವಿವರ
ಕರ್ನಾಟಕ ಪ್ರಥಮ ಇನಿಂಗ್ಸ್: 179 ರನ್‌ಗೆ ಆಲೌಟ್
ಒಡಿಶಾ ಪ್ರಥಮ ಇನಿಂಗ್ಸ್: 342 ರನ್‌ಗೆ ಆಲೌಟ್
ಕರ್ನಾಟಕ ದ್ವಿತೀಯ ಇನಿಂಗ್ಸ್: 121.2 ಓವರ್‌ಗಳಲ್ಲಿ 393
ಆರ್.ಸಮರ್ಥ್ ಸಿ ಪೊದ್ದಾರ್ ಬಿ ಧೀರಜ್ ಸಿಂಗ್ 49
ಅಗರವಾಲ್ ಸಿ ರಂಜಿತ್ ಬಿ ಮೊಹಾಂತಿ 07
ಉತ್ತಪ್ಪ ಎಲ್‌ಬಿಡಬ್ಲು ಬಿ ಧೀರಜ್ ಸಿಂಗ್ 32
ಕೆ.ಅಬ್ಬಾಸ್ ಸಿ ಸಬ್ ಬಿ ಧೀರಜ್ ಸಿಂಗ್ 00
ಸ್ಟುವರ್ಟ್ ಬಿನ್ನಿ ಸಿ ಪಟ್ನಾಯಕ್ ಬಿ ಪೊದ್ದಾರ್ 32
ಸಿಎಂ ಗೌತಮ್ ಸಿ ರಾವತ್ ಬಿ ಪ್ರಧಾನ್ 95
ವಿನಯಕುಮಾರ್ ಸಿ ಪಟ್ನಾಯಕ್ ಬಿ ಸಮಂಟ್ರೆ 41
ಎಸ್.ಗೋಪಾಲ್ ಬಿ ಧೀರಜ್ ಸಿಂಗ್ 46
ರೋಹನ್ ಮೋರೆ ಸಿ ರಾವತ್ ಬಿ ಪೊದ್ದಾರ್ 02
ಇತರ 012
ವಿಕೆಟ್ ಪತನ: 1-16, 2-74, 3-80, 4-108, 5-133, 6-231, 7-300,8-386, 9-391, 10-393.
ಬೌಲಿಂಗ್ ವಿವರ:
ಪ್ರಧಾನ್ 20-2-82-1
ಮೊಹಾಂತಿ 23-6-56-1
ಮಂಗರಾಜ್ 13-2-43-0
ಸಮಂಟ್ರೆ 15-1-47-1
ಧೀರಜ್ ಸಿಂಗ್ 29.2-1-98-5
ಪೊದ್ದಾರ್ 21-1-60-2.
ಒಡಿಶಾ ದ್ವಿತೀಯ ಇನಿಂಗ್ಸ್: ವಿಕೆಟ್ ನಷ್ಟವಿಲ್ಲದೆ 63
ಪಟ್ನಾಯಕ್ ಅಜೇಯ 27
ರಂಜಿತ್ ಸಿಂಗ್ ಅಜೇಯ 35
ಇತರ 01
ಬೌಲಿಂಗ್ ವಿವರ: ಕೆ.ಗೌತಮ್ 8-6-6-0
ರಣಜಿ ಟ್ರೋಫಿ: 4ನೆ ದಿನದ ಫಲಿತಾಂಶ
ಗುವಾಹಟಿ: ಆಂಧ್ರ (226, 193/4)- ಕೇರಳ (219, 302/6 ಡಿಕ್ಲೇರ್)
ಪಂದ್ಯ ಡ್ರಾ
ಚೆನ್ನೈ: ಅಸ್ಸಾಂ 256, 234, ಮಹಾರಾಷ್ಟ್ರ 542
ಮಹಾರಾಷ್ಟ್ರಕ್ಕೆ ಇನಿಂಗ್ಸ್ ಹಾಗೂ 52 ರನ್ ಜಯ
ವಲ್ಸಾಡ್: ಛತ್ತೀಸ್‌ಗಢ 188, 241, ಹೈದರಾಬಾದ್ 351,122
ಹೈದರಾಬಾದ್‌ಗೆ 44 ರನ್ ಜಯ
ವಯನಾಡ್: ರಾಜಸ್ಥಾನ 238,221, ದಿಲ್ಲಿ 307,156/8
ದಿಲ್ಲಿಗೆ 2 ವಿಕೆಟ್‌ಗಳ ಜಯ
ಗಾಝಿಯಾಬಾದ್: ಹರ್ಯಾಣ (568)- ಗೋವಾ (413,152/5) ಪಂದ್ಯ ಡ್ರಾ
ಹುಬ್ಬಳ್ಳಿ: ಮುಂಬೈ (422)-ಗುಜರಾತ್ (437, 82-0) ಪಂದ್ಯ ಡ್ರಾ
ಸೂರತ್: ಹಿಮಾಚಲಪ್ರದೇಶ (296, 145/2)- ಸರ್ವಿಸಸ್ (401, 295/9 ಡಿಕ್ಲೇರ್) ಪಂದ್ಯ ಡ್ರಾ
ಮುಂಬೈ: ತ್ರಿಪುರಾ (297, 168/8)- ಜಮ್ಮು-ಕಾಶ್ಮೀರ (315, 318/4 ಡಿಕ್ಲೇರ್)ಪಂದ್ಯ ಡ್ರಾ
ದಿಲ್ಲಿ: ಕರ್ನಾಟಕ (179, 393)- ಒಡಿಶಾ (342, 63/0) ಪಂದ್ಯ ಡ್ರಾ
ದಿಲ್ಲಿ: ಮ.ಪ್ರ. (510/8 ಡಿಕ್ಲೇರ್)- ರೈಲ್ವೇಸ್ 371, 150/1.
ನಾಗ್ಪುರ: ತಮಿಳುನಾಡು (354,103/1)- ಪಂಜಾಬ್ (284, 375/5) ಪಂದ್ಯ ಡ್ರಾ
ದಿಲ್ಲಿ: ಸೌರಾಷ್ಟ್ರ (301,189), ವಿದರ್ಭ (347,146/2)
ವಿದರ್ಭಕ್ಕೆ 8 ವಿಕೆಟ್ ಜಯ







