ಉಗ್ರಗಾಮಿಯ ಶರಣಾಗತಿ

ಶ್ರೀನಗರ,ನ.25: ಬಾರಾಮುಲ್ಲಾ ಜಿಲ್ಲೆಯ ಸೋಪೊರ್‌ನಲ್ಲಿ ಭದ್ರತಾ ಪಡೆಗಳಿಂದ ಸುತ್ತುವರಿಯಲ್ಪಟ್ಟಿದ್ದ ಸ್ಥಳೀಯ ಉಗ್ರನೋರ್ವ ಶರಣಾಗತನಾಗಿದ್ದಾನೆ.
ಸೋಪೊರ್‌ನ ತುಜ್ಜಾರ್ ಪ್ರದೇಶದಲ್ಲಿ ಉಗ್ರನೋರ್ವ ಭದ್ರತಾ ಪಡೆಗಳಿಗೆ ಶರಣಾಗಿದ್ದು,ಆತನ ಶರಣಾಗತಿಯನ್ನು ಒಪ್ಪಿಕೊಳ್ಳಲಾಗಿದೆ ಎಂದು ಸೇನೆಯ ಅಧಿಕಾರಿಯೋರ್ವರು ಇಂದಿಲ್ಲಿ ತಿಳಿಸಿದರು.
ಹಿಂಸೆಯ ಮಾರ್ಗವನ್ನು ತೊರೆಯುವಂತೆ ಸೇನೆಯು ದಾರಿ ತಪ್ಪಿರುವ ಯುವಕರಿಗೆ ಕರೆ ನೀಡಿದೆ ಎಂದರು.
ಸೋಪೊರ್‌ನಲ್ಲಿ ಇದು ಈ ತಿಂಗಳಲ್ಲಿ ಭದ್ರತಾ ಪಡೆಗಳಿಗೆ ಉಗ್ರಗಾಮಿ ಶರಣಾ ಗಿರುವ ಎರಡನೇ ಘಟನೆಯಾಗಿದೆ. ನ.4ರಂದು ಲಷ್ಕರ್‌ನ ಉಗ್ರನೋರ್ವ ಭದ್ರತಾ ಪಡೆಗಳೆದುರು ಶರಣಾಗಿದ್ದ.
Next Story





