ನಜೀಬ್‌ನನ್ನು ಹುಡುಕಿ ಕೊಡಿ: ಲೋಕಸಭೆಯಲ್ಲಿ ಶಶಿತರೂರ್ ಆಗ್ರಹ

ಹೊಸದಿಲ್ಲಿ,ನವೆಂಬರ್ 25: ಎಬಿವಿಪಿ ಕಾರ್ಯಕರ್ತರುಹಲ್ಲೆ ನಡೆಸಿದ ಬಳಿಕ ನಾಪತ್ತೆಯಾಗಿರುವ ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್‌ರನ್ನು ಪತ್ತೆಹಚ್ಚಿಕೊಡಬೇಕೆಂದು ಕಾಂಗ್ರೆಸ್ ಸಂಸದ ಶಶಿತರೂರ್ ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆಂದು ವರದಿ ತಿಳಿಸಿದೆ.
ವಿಶ್ವವಿದ್ಯಾನಿಲಯ ಮತ್ತು ಪೊಲೀಸರು ಆರೋಪಿಗಳವಿರುದ್ಧ ಕ್ರಮಜರಗಿಸಲು ಹೆದರುತ್ತಿದ್ದಾರೆ. ಸರಿಯಾದ ತನಿಖೆ ನಡೆಸಿ ನಜೀಬ್‌ನನ್ನು ಶೀಘ್ರ ಪತ್ತೆ ಹಚ್ಚಬೇಕಿದೆ. ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ಗಳಲ್ಲಿ ರಕ್ಷಣೆ ಕೊಡಬೇಕು. ಅವರಿಗೆ ಮಾತಾಡುವ ಮತ್ತು ಚಿಂತಿಸುವ, ಪ್ರತಿಕ್ರಿಯಿಸುವ ಸ್ವಾಂತತ್ರ್ಯ ಇರಬೇಕಿದೆಗಮನಸೆಳೆವ ನೋಟಿಸ್ ಮೂಲಕ ಶಶಿತರೂರ್ ವಿಷಯವನ್ನು ಸಂಸತ್ತಿನಲ್ಲಿಪ್ರಸ್ತಾಪಿಸಿದ್ದಾರೆಂದು ವರದಿ ತಿಳಿಸಿದೆ.
Next Story





