Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈಗ ಐಎಂಇಐ ನಂಬರ್ ಇದ್ದರೂ ನಿಮ್ಮ ಕಳವಾದ...

ಈಗ ಐಎಂಇಐ ನಂಬರ್ ಇದ್ದರೂ ನಿಮ್ಮ ಕಳವಾದ ಮೊಬೈಲ್ ಪತ್ತೆ ಅಸಾಧ್ಯ!

ಕಳ್ಳರು ಮೊದಲು ಮಾಡುವುದೇನು?

ವಾರ್ತಾಭಾರತಿವಾರ್ತಾಭಾರತಿ25 Nov 2016 4:01 PM IST
share
ಈಗ ಐಎಂಇಐ ನಂಬರ್ ಇದ್ದರೂ ನಿಮ್ಮ ಕಳವಾದ ಮೊಬೈಲ್ ಪತ್ತೆ ಅಸಾಧ್ಯ!

ನಿಮ್ಮ ಫೋನ್ ಕಳುವಾದ ಮೇಲೆ ಏನಾಗುತ್ತದೆ ಎನ್ನುವ ಅಚ್ಚರಿ ನಿಮಗಿದ್ದಲ್ಲಿ ಇಲ್ಲಿದೆ ವಿವರ. ಪೊಲೀಸರ ಪರಕಾರ ನಿಮ್ಮ ಮೊಬೈಲ್ ಫೋನ್ ಗಳನ್ನು ಫ್ಲಾಷರ್ ಎನ್ನುವ ಸಾಧನ ಬಳಸಿ ಪತ್ತೆ ಮಾಡಲಾಗದಂತೆ ಮಾಡಲಾಗುತ್ತದೆ. ಪ್ರತೀ ಮೊಬೈಲ್‌ನಲ್ಲಿರುವ ಐಎಂಇಐ ಅಥವಾ 15 ಡಿಜಿಟ್ ವಿಶೇಷ ನಂಬರ್ ಪತ್ತೆ ಮಾಡದಂತೆ ಈ ಫ್ಲಾಷರ್ ಕೆಲಸ ಮಾಡುತ್ತದೆ. ಇತ್ತೀಚೆಗೆ ದರಿಯಾ ಗಂಜ್‌ನಿಂದ ಬಂಧನಕ್ಕೊಳಗಾದ ಇಬ್ಬರಿಂದ ಈ ವಿಷಯ ಹೊರಗೆ ಬಂದಿದೆ. ನವೆಂಬರ್ 9ರಂದು ರೂ. 75 ಲಕ್ಷ ಮೌಲ್ಯದ ಮೊಬೈಲ್ ಫೋನ್‌ಗಳ ಜೊತೆಗೆ ಇವರನ್ನು ಬಂಧಿಸಿದಾಗ ನಾಲ್ಕು ಫ್ಲಾಷರ್‌ಗಳು ಮತ್ತು ಒಂದು ಲ್ಯಾಪ್ ಟಾಪ್ ಕೂಡ ಸಿಕ್ಕಿದೆ. ನಗರದಲ್ಲಿ ಪಿಕ್‌ಪಾಕೆಟ್ ಮಾಡುವವರು ಕಳ್ಳತನ ಮಾಡಿದ ಫೋನ್‌ಗಳ ಐಎಂಇಐ ನಂಬರ್ ನಾಶ ಮಾಡಿ ಇವರು ಮಾರುತ್ತಿದ್ದರು. ಈವರೆಗೆ ಆರೋಪಿಗಳು 1000 ಮೊಬೈಲ್‌ಗಳನ್ನು ಹೀಗೇ ಮುಕ್ತ ಮಾರುಕಟ್ಟೆಯಲ್ಲಿ ಮಾರಿದ್ದಾರೆ. ಐಎಂಇಐ ನಂಬರ್ ಮೂಲಕ ಭದ್ರತಾ ಸಂಸ್ಥೆಗಳು ಮೊಬೈಲ್ ಮತ್ತು ಸ್ಯಾಟ್‌ಲೈಟ್ ಫೋನ್‌ಗಳನ್ನು ವಿಭಿನ್ನ ಸಿಮ್ ಇದ್ದರೂ ಟವರ್ ಮೂಲಕ ಪತ್ತೆ ಮಾಡುತ್ತಿದ್ದರು. ಆದರೆ ಐಎಂಇಐ ನಂಬರ್ ಟ್ಯಾಂಪರ್ ಮಾಡಲು ಸಾಧ್ಯವಿಲ್ಲ ಎನ್ನುವ ನಂಬಿಕೆಯೇ ಈಗ ಹುಸಿಯಾಗಿದೆ.

ಫ್ಲಾಷರ್ ಹೇಗೆ ಕೆಲಸ ಮಾಡುತ್ತದೆ?

ಸಾಧನವು ಸೆಲ್‌ಫೋನ್ ಪವರ್ ಬ್ಯಾಂಕ್ ನಷ್ಟು ದೊಡ್ಡದಿದ್ದು, ಯುಎಸ್‌ಬಿ ಕಾರ್ಡ್, ಒಂದು ಸಿಡಿ ಮತ್ತು ಕಂಪ್ಯೂಟರ್ ಇದ್ದರೆ ನಂಬರನ್ನು ಬದಲಿಸಬಹುದು. ಸಿಡಿ ಫ್ಲಾಷರ್ ಜೊತೆಗೆ ಇರುತ್ತದೆ. ಸಿಡಿ ಫೈಲ್ ಗಳನ್ನು ಕಂಪ್ಯೂಟರಲ್ಲಿ ತೆರೆದು ಫೋನ್ ಕನೆಕ್ಟ್ ಮಾಡಲಾಗುತ್ತದೆ. ಯುಎಸ್‌ಬಿ ಮೂಲಕ ಫ್ಲಾಷರ್ ಬಳಸಲಾಗುತ್ತದೆ. ಹೊಸ 15 ಡಿಜಿಟ್ ನಂಬರ್ ಬಳಸುವುದು ಅಥವಾ ಆಯ್ಕೆಯ ನಂಬರ್ ಬಳಸಬಹುದು. ಒಮ್ಮೆ ಐಎಂಇಐ ತೆಗೆದ ಮೇಲೆ ಫೋನ್ ಪತ್ತೆ ಮಾಡಲು ಸಾಧ್ಯವೇ ಇಲ್ಲ. "ಐಎಂಇಐ ನಂಬರ್ ಗಳನ್ನು ಹಾಳು ಮಾಡುವ ಈ ಸಂಪೂರ್ಣ ಕ್ರಿಯೆ 10 ನಿಮಿಷಗಳಲ್ಲಿ ನಡೆದು ಹೋಗುತ್ತದೆ" ಎನ್ನುತ್ತಾರೆ ಪೊಲೀಸರು.

ಆದರೆ ಈ ಫ್ಲಾಷರ್ ಐಫೋನ್‌ಗಳಲ್ಲಿ ಕೆಲಸ ಮಾಡುವುದಿಲ್ಲ. ಹೀಗಾಗಿ ಅವುಗಳನ್ನು ಕದ್ದಲ್ಲಿ ಕಳ್ಳಮಾರುಕಟ್ಟೆಯಲ್ಲಿ ಮಾರುವುದು ಕಷ್ಟ. ಪೊಲೀಸರು ಪತ್ತೆ ಮಾಡಿದ 401 ಸ್ಮಾರ್ಟ್ ಫೋನ್‌ಗಳಲ್ಲಿ 32 ಐಫೋನ್ 6 ಮತ್ತು 6ಎಸ್ ಆಗಿವೆ. ಕದ್ದ ಐಫೋನ್‌ಗಳನ್ನು ಜೋಡಣೆ ಕಳಚಿ ಅವುಗಳ ಭಾಗಗಳನ್ನು ಪ್ರತ್ಯೇಕವಾಗಿ ಮಾರಲಾಗುತ್ತದೆ. ಐಫೋನ್ ಸ್ಕ್ರೀನ್‌ಗಳಿಗೆ ಬಹಳ ಬೇಡಿಕೆ ಇದೆ. "ಆದರೆ ಐಫೋನ್ ಧೀರ್ಘ ಕಾಲಕ್ಕೆ ಭದ್ರವಲ್ಲ. ಇವುಗಲ ಐಎಂಇಐ ನಂಬರನ್ನೂ ಬದಲಿಸುವ ಸಾಫ್ಟ್‌ವೇರ್ ಸಿದ್ಧವಾಗುತ್ತಿದೆ" ಎನ್ನಲಾಗಿದೆ.

ಫ್ಲಾಷರ್ ಅನ್ನು ಯಾರು ಬೇಕಾದರೂ ಪಡೆದುಕೊಳ್ಳಬಹುದು. ಗಫರ್ ಮಾರುಕಟ್ಟೆಯಲ್ಲಿ ಇವುರು. 2500ರಿಂದ ರು. 5000ದೊಳಗೆ ಸಿಗುತ್ತವೆ. ಆದರೆ ಅದನ್ನು ಬಹಳ ರಹಸ್ಯವಾಗಿ ಮಾರುವ ಕಾರಣ ಸುಲಭವಾಗಿ ಖರೀದಿಸಲೂ ಸಾಧ್ಯವಿಲ್ಲ. ಕದ್ದ ಫೋನ್ ಗಳನ್ನು ಮಾರುವ ಉದ್ಯಮ ಮಾತ್ರ ದೆಹಲಿಯಲ್ಲಿ ವ್ಯಾಪಕವಾಗಿ ಬೆಳೆದಿದೆ. ಪ್ರತೀ ದಿನ 100-150 ಫೋನ್‌ಗಳು ಕಳುವಾಗುತ್ತವೆ. ಬಹಳಷ್ಟು ಮಂದಿ ಪೊಲೀಸರಿಗೆ ದೂರು ಕೊಡದೇ ಇರುವ ಕಾರಣ ಸಂಖ್ಯೆ ಇನ್ನೂ ಏರುವ ಸಾಧ್ಯತೆಯಿದೆ. ಪೊಲೀಸರ ಪ್ರಕಾರ ನಗರದಲ್ಲಿ ಈ ಸಂಬಂಧ ಫೋನ್ ಕಳವು ಮಾಡುವವರು, ಖರೀದಿಸುವವರು, ಮರು ಮಾರಾಟ ಮಾಡುವವರ ವ್ಯವಸ್ಥಿತ ರಾಕೆಟ್ ಇದೆ.

ಮೊಬೈಲ್ ಬೆಲೆಯ ಶೇ. 10-20ರಷ್ಟು ಕೊಟ್ಟು ಪಿಕ್‌ಪಾಕೆಟ್ ಮಾಡಿದವರಿಂದ ಫೋನ್ ಖರೀದಿಯಾಗುತ್ತದೆ. ನಂತರ ಶೇ. 40ರಿಂದ 50ರ ಬೆಲೆಗೆ ಮರು ಮಾರಾಟವಾಗುತ್ತದೆ. ಹೀಗಾಗಿ ಕದ್ದ ಮೇಲೂ ಮೊಬೈಲ್ ವಾಪಾಸು ಸಿಕ್ಕಿತೆಂದರೆ ನೀವು ಅದೃಷ್ಟವಂತರು!

ಕೃಪೆ: indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X