ಕುಂದಾಪುರ: ಶೃಂಗೇರಿ ಜಗದ್ಗುರುಗಳ ಅಭಿವಂದನ ಸಮಿತಿ ರಚನೆ
ಕುಂದಾಪುರ, ನ.25: ಹಾಲಾಡಿಯಿಂದ ಭಟ್ಕಳದವರೆಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಶೃಂಗೇರಿ ಶ್ರೀಶಾರದಾ ಪೀಠದ ಉಭಯ ಜಗದ್ಗುರುಗಳು ಇಲ್ಲಿನ ಕುಂದೇಶ್ವರ ದೇವಾಲಯದ ‘ಗುರು ಭವನ’ದಲ್ಲಿ ನಾಲ್ಕು ದಿನಗಳ ಕಾಲ ಮೊಕ್ಕಾಂ ಮಾಡಲಿದ್ದು, ಅವರ ಸ್ವಾಗತ ಮತ್ತು ಅಭಿವಂದನೆ ಕುರಿತು ಚರ್ಚಿಸಲು ಗುರುವಾರ ಸಮಾಲೋಚನಾ ಸಭೆ ಕುಂದೇಶ್ವರ ದೇವಾಲಯದ ‘ಶಂಕರ ಕೃಪಾ’ ಪ್ರವಚನ ಮಂದಿರದಲ್ಲಿ ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕಿನಾದ್ಯಂತದಿಂದ ಬಂದ ಶೃಂಗೇರಿ ಶ್ರೀಮಠದ ಶಿಷ್ಯ ಸಮಾಜದವರು ಸಮಾಲೋಚನೆಯಲ್ಲಿ ಭಾಗವಹಿಸಿ, ಸಲಹೆ-ಸೂಚನೆ ನೀಡಿದರು. ಡಿ.4ರ ಸಂಜೆ 5:30ಕ್ಕೆ ಶೃಂಗೇರಿಮಠದ ಶ್ರೀಗಳಿಗೆ ವೇದ-ವಾದ್ಯಘೋಷಗಳೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿ, ಕುಂದೇಶ್ವರ ಸಭಾಮಂಟಪದಲ್ಲಿ ಸಾರ್ವಜನಿಕ ನೆಲೆಯಲ್ಲಿ ಅಭಿವಂದನೆ ಸಲ್ಲಿಸಲು ನಿರ್ಧರಿಸಲಾಯಿತು.
ಇದಕ್ಕಾಗಿ ರಚಿಸಲಾದ ಅಭಿವಂದನ ಸಮಿತಿಯ ಪದಾಧಿಕಾರಿಗಳಾಗಿ ಎ. ಎಸ್.ಎನ್.ಹೆಬ್ಬಾರ್ (ಅಧ್ಯಕ್ಷರು) ವಸಂತಿ ಸಾರಂಗ, ಶೋಭ ಶೆಟ್ಟಿ, ಸದಾನಂದ ಚಾತ್ರ, ಬಿ.ಎಂ. ಸುಕುಮಾರ ಶೆಟ್ಟಿ, ಟಿ.ಕೆ.ಎಂ. ಭಟ್ಟ, ಡಾ.ಕೆ.ಎಸ್. ಕಾರಂತ, ಸುಬ್ರಾಯ ಹಾಲಂಬಿ, ಸೀತಾರಾಮ ನಕ್ಕಾತ್ತಾಯ, ಕೆ. ರವೀಂದ್ರ ಕಾವೇರಿ, ಗೀತಾ, ಜಯಾನಂದ ಖಾರ್ವಿ, ಸುರೇಶ್ ಬೆಟ್ಟಿನ್, ಅರುಣ ಕುಮಾರ ಶೆಟ್ಟಿ, ಡಾ.ಬಿ.ವಿ. ಉಡುಪ, ಜಿ.ಡಿ.ಕೇಶವ ಶೇರೆಗಾರ್, ಬಿ.ಎಲ್.ಎನ್. ಉಪಾಧ್ಯ (ಉಪಾಧ್ಯಕ್ಷರು) ಡಾ.ಎಚ್.ವಿ. ನರಸಿಂಹಮೂರ್ತಿ (ಪ್ರಧಾನ ಕಾರ್ಯದರ್ಶಿ) ಗಣೇಶ್ ರಾವ್ ಕುಂಭಾಸಿ, ರಮೇಶ ಹೊಳ್ಳ, ಎಚ್.ಎಸ್. ಹತ್ವಾರ್, ಶೋಭಾ ಮಧ್ಯಸ್ಥ (ಜತೆಕಾರ್ಯದರ್ಶಿಗಳು), ಎಸ್.ಕೃಷ್ಣಾನಂದ ಚಾತ್ರ (ಕೋಶಾಧಿಕಾರಿ) ಮೋಹನದಾಸ ಶೆಣೈ, ಕೆ.ಆರ್.ನಾಯಕ್, ರಾಮಚಂದ್ರ ಪೂಜಾರಿ, ಪ್ರೊ. ಕೆ.ವಿ.ಕೆ. ಐತಾಳ್, ಶಿವರಾಮ ಉಪಾಧ್ಯ, ಕೆ.ಎನ್. ವೈದ್ಯ, ವಿ.ಆರ್.ಕೆ. ಹೊಳ್ಳ, ಸಂಜೀವ ಖಾರ್ವಿ, ಗೋಪಾಲಕೃಷ್ಣ ಶೆಟ್ಟಿ, ಪಿ.ಎನ್. ಐತಾಳ್, ಶ್ರೀಧರ ಶೆಟ್ಟಿ, ಕೇಶವ ಖಾರ್ವಿ ಮತ್ತು ಪ್ರೇಮಾ ವೈದ್ಯ (ಸದಸ್ಯರು) ಆಯ್ಕೆಯಾದರು. ಡಾ.ಎಚ್.ವಿ. ನರಸಿಂಹಮೂರ್ತಿ ಸ್ವಾಗತಿಸಿದರು. ಗಣೇಶ್ ರಾವ್ ಕುಂಭಾಸಿ ವಂದಿಸಿದರು.







