ಇಸ್ರೇಲ್ ಬೆಂಕಿ ನಂದಿಸಲು ಸಹಕರಿಸಿದ ಫೆಲೆಸ್ತೀನ್ ಅಗ್ನಿ ಶಾಮಕ ಪಡೆ

ಇಸ್ರೇಲ್ ,ನ.25 : ಇಸ್ರೇಲ್‌ನಲ್ಲಿ ಹಬ್ಬುತ್ತಿರುವ ಕಾಡ್ಗಿಚ್ಚನ್ನು ನಂದಿಸಲು ಫೆಲೆಸ್ತೀನ್‌ನ ಎಂಟು ಅಗ್ನಿಶಾಮಕ ತಂಡಗಳು ಗುರುವಾರ ಸಂಜೆಯ ವೇಳೆಗೆ ಇಸ್ರೇಲ್ ತಲುಪಿವೆ.
ಅವುಗಳ ಪೈಕಿ ನಾಲ್ಕು ತಂಡಗಳು ಹೈಫದಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿರುವ ತಂಡಗಳಿಗೆ ನೆರವು ನೀಡಲು ಗಿಲ್ಬೋವ ಗಡಿದಾಟು ಮೂಲಕ ಉತ್ತರ ಭಾಗವನ್ನು ಪ್ರವೇಶಿಸಿವೆ.
‘‘ಬೆಂಕಿಗೆ ಯಹೂದಿ ಮತ್ತು ಅರಬ್ಬರು ಎಂಬ ಭೇದಭಾವವಿಲ್ಲ’’ ಎಂದು ‘ಜಾಯಿಂಟ್ ಲಿಸ್ಟ್’ನ ಅಧ್ಯಕ್ಷ ಎಂ.ಕೆ. ಅಯ್ಮನ್ ಉದೇಹ್ ಹೇಳಿದ್ದಾರೆ.
‘‘ಕಾರ್ಮೆಲ್ ಉರಿಯುತ್ತಿರುವುದನ್ನು ನೋಡಿ ಹೃದಯ ಚೂರಾಗಿದೆ. ಇದು ಪ್ರಚೋದನೆಗೆ ಸಮಯವಲ್ಲ. ಇದು ಎಲ್ಲರೊಂದಿಗೆ ಕೈಜೋಡಿಸಿ ಕಾರ್ಮೆಲನ್ನು ಉಳಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವ ಸಮಯ’’ ಎಂದರು.
Next Story





