ನ.26ರಂದು ಅಹಿಂದ ಸಮಾವೇಶ, ವಿಚಾರ ಸಂಕಿರಣ
ಮಂಗಳೂರು, ನ.24: ಅಹಿಂದ ಜನ ಚಳವಳಿ ವತಿಯಿಂದ ನ.26ರಂದು ಬೆಳಗ್ಗೆ 10ಕ್ಕೆ ಬೆಂದೂರ್‌ವೆಲ್‌ನ ಹೊಟೇಲ್ ಸುಮನ್ ರೆಸಿಡೆನ್ಸಿಯಲ್ಲಿ ಕಾನೂನು ದಿನಾಚರಣೆ, ಅಹಿಂದ ಸಮಾವೇಶ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಲಿದೆ.
ದ.ಕ. ಜಿಲ್ಲಾ ಅಹಿಂದ ಜನ ಚಳವಳಿಯ ಗೌರವಾಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ಯುವ ಅಹಿಂದದ ಸಂಚಾಲಕ ಕೆ.ಆರ್.ಸುಭಾಷ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ವಿಷಯ ಮಂಡನೆ ಮಾಡಲಿದ್ದಾರೆ.
ಅಹಿಂದ ಜನ ಚಳವಳಿಯ ಜಿಲ್ಲಾಧ್ಯಕ್ಷ ವಾಸುದೇವ ಬೋಳೂರು, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಸಾಹಿತಿ ಚಂದ್ರಕಲಾ ನಂದಾವರ, ಕರಾವಳಿ ಕುರುಬರ ಸಂಘದ ಅಧ್ಯಕ್ಷ ಡಾ.ಕೆ.ಇ.ಪ್ರಕಾಶ್, ಸೂರ್ಯಪ್ರಕಾಶ್ ಕೋಲಿ, ಪುರುಷೋತ್ತಮ ಪೂಜಾರಿ ಕುಪ್ಪೆಪದವು, ಹಾಜಿ ಹಮೀದ್ ಕಂದಕ್, ಬಾಲಸುಬ್ರಮಣ್ಯಂ ಕುಪ್ಪೆಪದವು, ವಿಠಲ ಭಂಡಾರಿ, ಇಬ್ರಾಹೀಂ, ಗುರುವಪ್ಪ ಪೂಜಾರಿ, ಮಾರ್ಗರೇಟ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





