ಕುಶಾಲನಗರ ದರೋಡೆ ಪ್ರಕರಣ
ನಾಲ್ವರು ಆರೋಪಿಗಳ ಬಂಧನ: ಸೊತ್ತು ವಶ

ಐವರಿಗಾಗಿ ಶೋಧ
ಕುಶಾಲನಗರ, ನ. 25: ಇಲ್ಲಿನ ಹೊಸ ಪಟ್ಟಣ ಗ್ರಾಮದ ನಿವಾಸಿ ಶಿವಕುಮಾರ್ ರವರ ಮನೆಗೆ ಗುರುವಾರ ನುಗ್ಗಿ ಅವರಿಗೆ ಹಲ್ಲೆ ನಡೆಸಿ ನಗ- ನಗದು ದೋಚಿದ್ದ ಚೋರರ ತಂಡದ ನಾಲ್ವರನ್ನು ಕುಶಾಲನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೊಡಗು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ರಾಜೇಂ ದ್ರ ಪ್ರಸಾದ್, ಬಂಧಿತರನ್ನು ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ನಿವಾಸಿ ಅಬ್ದುಲ್ ರೆಹಮಾನ್(24), ಮಂಗಳೂರಿನ ಉಳ್ಳಾಲ ನಿವಾಸಿ ಮುಹಮ್ಮದ್ ಹನೀಫ್(28), ಮುಹಮ್ಮದ್ ಫೂಝ್(28), ಜಾಫರ್ ಸಾದಿಕ್(25) ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಮೂಲತಃ ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿ ಆಟೋ ಚಾಲಕ ಕೃಷ್ಣ ಹಾಗೂ ಉಳಿದ 5 ಮಂದಿ ನಿಝಾಮ್, ಮಜೀದ್, ಸಲಿಯಾತ್, ಜಲಾಲ್ ಎಂಬವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಂಗಳೂರಿನ ಉಳ್ಳಾಲ ನಿವಾಸಿ ಮುಹಮ್ಮದ್ ಹನೀಫ್‌ನ ಮೇಲೆ ಉಳ್ಳಾಲ ಪೋಲೀಸ್ ಠಾಣೆಯಲ್ಲಿ 19, ಮುಹಮ್ಮದ್ ಫಯಾಝ್‌ನ 13 ಹಾಗೂ ಜಾಫರ್ ಸಾದಿಕ್ ಎಂಬಾತನ ಮೇಲೆ ಒಂದು ಸುಲಿಗೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ಬಂಧಿತರಿಂದ ಒಟ್ಟು 42 ಸಾವಿರದ ಗದು, 1 ನೆಕ್ಲೇಸ್, 4 ಚಿನ್ನದ ಉಂಗುರ, 2 ಚಿನ್ನದ ಸರ, ಒಂದು ಚಿನ್ನದ ಕರಿಮಣಿ ಪದಕ, 2 ಚಿನ್ನದ ಬಳೆ, 1 ಪಿಸ್ತೂಲು, ವಜ್ರ, ಬೆಳ್ಳಿನಾಣ್ಯ, ಚಿನ್ನದ ನಾಣ್ಯ, ಸಿಗಾರ್ ಲೈಟ್ ಸೇರಿದಂತೆ ಅಂದಾಜು 40 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸೊ
ೀಮವಾರಪೇಟೆ ವಲಯ ಡಿವೈಎಸ್ಪಿ ಸಂಪತ್ ಕುಮಾರ್, ಅಪರಾಧ ಪತ್ತೆ ದಳ ವಿಭಾಗದ ಇನ್‌ಸ್ಪೆಕ್ಟರ್ ಕರೀಂ, ಗುಪ್ತ ದಳ ವಿಭಾಗದ ಇನ್‌ಸ್ಪೆಕ್ಟರ್ ಮಹೇಶ್, ಕುಶಾಲನಗರ ವೃತ್ತನಿರೀಕ್ಷಕ ಕ್ಯಾತೆಗೌಡ, ಸುಂಟಿಕೊಪ್ಪಠಾಣಾಧಿಕಾರಿ ಅನೂಪ್ ಮಾದಪ್ಪ, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಜೆ.ಇ. ಮಹೇಶ್, ಕುಶಾಲನಗರದ ಸಹಾಯಕ ಠಾಣಾಧಿಕಾರಿ ಸ್ವಾಮಿ, ಸಿಬ್ಬಂದಿ ಸಜೀ, ಉದಯ, ಲೋಕೇಶ್, ಸಂಪತ್, ಮೋಹನ್, ಜಯಪ್ರಕಾಶ್, ಮಂಜುನಾಥ್, ಲೋಕೇಶ್, ಸುರೇಶ್, ನಾಗರಾಜ್ ಮತ್ತಿತರರಿದ್ದರು.





