ಗಾಂಜಾ ಬೆಳೆ: ಓರ್ವನ ಬಂಧನ

ಸಾಗರ, ನ.25: ತಾಲೂಕಿನ ಆವಿನಹಳ್ಳಿಯ ಚಿಕ್ಕಮತ್ತೂರು ಗ್ರಾಮದ ಸರ್ವೇ ನಂ. 107ರ ಬಗರ್‌ಹುಕುಂ ಜಾಗದಲ್ಲಿ ಶುಂಠಿ ಬೆಳೆ ನಡುವೆ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡವನ್ನು ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಸ ಹುಚ್ಚಪ್ಪ ಎಂಬವರಿಗೆ ಸೇರಿದ ಬಗರ್‌ಹುಕುಂ ಜಮೀನಿನಲ್ಲಿ ಶುಂಠಿ ಬೆಳೆ ನಡುವೆ ಅಕ್ರಮವಾಗಿ ಬೆಳೆದಿದ್ದ ಸುಮಾರು 85ಸಾವಿರ ರೂ. ಮೌಲ್ಯದ 29 ಕೆ.ಜಿ. ಹಸಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು, ಜಮೀನಿನ ಮಾಲಕ ಹುಚ್ಚಪ್ಪ ಎಂಬವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಎಎಸ್ಪಿ ನಿಶಾ ಜೇಮ್ಸ್ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಪಿಎಸ್ಸೈ ಸುರೇಶ್, ಶಿವರುದ್ರಯ್ಯ, ನಾಗರಾಜ್, ಸಿಬ್ಬಂದಿ ತಾಹಿರ್, ಶ್ರೀಕಾಂತ್, ಫೈರೋಝ್, ಕೃಷ್ಣ, ಸಂದೀಪ್ ಇನ್ನಿತರರು ಪಾಲ್ಗೊಂಡಿದ್ದರು.
Next Story





