ಬ್ಯಾಂಕಿನ ಸರದಿ ಸಾಲಿನಲ್ಲಿ ನಿಂತಿದ್ದ ವೃದ್ಧೆ ಮೃತ್ಯು
ಬಲಿಯಾ,ನ.25: ಇಲ್ಲಿಯ ರಟ್ಸಾದ್ ಪ್ರದೇಶದಲ್ಲಿಯ ಬ್ಯಾಂಕಿನಿಂದ ಹಣವನ್ನು ಹಿಂಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದ ವೃದ್ಧೆಯೋರ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದರು. ನಿನ್ನೆ ಇಲ್ಲಿಯ ಸೆಂಟ್ರಲ್ ಬ್ಯಾಂಕ್‌ನ ಶಾಖೆಯಲ್ಲಿ ಮೂರು ಗಂಟೆಗಳ ಕಾಲ ಸರದಿ ಸಾಲಿನಲ್ಲಿ ಕಾದು ನಿಂತಿದ್ದ ಇಂದ್ರಸನಿ ದೇವಿ(70) ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದು, ಮನೆಗೆ ಸಾಗಿಸುತ್ತಿದ್ದಾಗ ದಾರಿಮಧ್ಯೆ ಹೃದಯಾಘಾತದಿಂದ ನಿಧನರಾದರು.
ಆಕೆಯ ಶವಸಂಸ್ಕಾರ ನೆರವೇರಿಸಲೂ ಕುಟುಂಬದ ಬಳಿ ಹಣವಿರಲಿಲ್ಲ, ಹೀಗಾಗಿ ಹಣವನ್ನು ಪಡೆಯಲು ಆಕೆಯ ಸೊಸೆ ಅದೇ ಬ್ಯಾಂಕಿಗೆ ತೆರಳಿ ಸರದಿ ಸಾಲಿನಲ್ಲಿ ನಿಲ್ಲುವಂತಾಗಿತ್ತು. ಈ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಇದಕ್ಕೆ ಹೊಣೆಯಾದವರ ವಿರುದ್ಧ ಸೂಕ್ತಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಸ್‌ಪಿ ವೈಭವ ಕೃಷ್ಣ ತಿಳಿಸಿದರು.
Next Story





