ಡಿ.10, 11: ರಾಜ್ಯಮಟ್ಟದ ಅರೆಭಾಷೆ ಸಂಸ್ಕೃತಿ- ಸಾಹಿತ್ಯ ಸಮ್ಮೇಳನ
ಸುಳ್ಯ, ನ.25: ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಅಕಾಡಮಿ ವತಿಯಿಂದ ಸುಳ್ಯ ಗೌಡರ ಯುವ ಸೇವಾ ಸಂಘದ ಸಹಯೋಗದಲ್ಲಿ ಸಂಸ್ಕೃತಿ ಮತ್ತು ಸಾಹಿತ್ಯ ಸಂಬಂಧಿಸಿದ ಉತ್ಸವ ಡಿ.10 ಹಾಗೂ 11ರಂದು ಕೊಡಿಯಾಲ್‌ಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಅಕಾಡಮಿಯ ಸದಸ್ಯ ಸದಾನಂದ ಮಾವಾಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನವನ್ನು ಡಿ.10ರಂದು ಪೂರ್ವಾಹ್ನ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಭಾಷೆ, ಸಾಹಿತ್ಯದ ಬಗ್ಗೆ 3 ವಿಚಾರಗೋಷ್ಠಿ, 6 ಪ್ರಬಂಧ ಮಂಡನೆಯಾಗಲಿದೆ. ಕವಿ ಕುತ್ಯಾಳ ನಾಗಪ್ಪಗೌಡ ಅಧ್ಯಕ್ಷತೆಯಲ್ಲಿ ಅರೆಭಾಷೆ ಕವಿಗೋಷ್ಠಿ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಗುವುದು ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡಮಿಯ ಸದಸ್ಯರಾದ ಮದುವೆಗದ್ದೆ ಬೋಜಪ್ಪ ಗೌಡ, ಡಾ.ಎನ್.ಎ.ಜ್ಞಾನೇಶ್, ಡಾ.ಪೂವಪ್ಪ ಕಣಿಯೂರು, ಗೌಡ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು
Next Story





