ನಾಳೆ ಪಜೀರ್‌ಗೆ ನೌಶಾದ್ ಬಾಖವಿ

ಕೊಣಾಜೆ, ನ.25: ಎಸ್ಕೆಎಸ್ಸೆಸ್ಸೆಫ್ ಹಾಗೂ ಎಸ್‌ವೈಎಸ್ ಪಜೀರ್ ಶಾಖೆಯ 5ನೆ ವಾರ್ಷಿಕೋತ್ಸವದ ಅಂಗವಾಗಿ ನ.27ರಂದು ಧಾರ್ಮಿಕ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಖ್ಯ ಭಾಷಣಕಾರರಾಗಿ ಖ್ಯಾತ ವಾಗ್ಮಿ ಎ.ಎಂ.ನೌಶಾದ್ ಬಾಖವಿ ಭಾಗವಹಿಸುವರು ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ಪಜೀರ್ ಗ್ರಾಪಂ ಸದಸ್ಯ ಕೆ.ಮುಹಮ್ಮದ್ ರಫೀಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂದು ಸಂಜೆ 6:30ಕ್ಕೆ ಪಜೀರು ರಹ್ಮಾನಿಯಾ ಜುಮಾ ಮಸೀದಿಯ ಮರ್‌ಹೂಮ್ ಝೈನುಲ್ ಉಲಮಾ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅಸೈಯದ್ ಜುನೈದ್ ಜಿಫ್ರಿ ತಂಙಳ್ ದುಆದೊಂದಿಗೆ ಚಾಲನೆ ದೊರೆಯಲಿದೆ. ಅಸೈಯದ್ ಕೆ.ಎಸ್.ಅಲಿ ತಂಙಳ್ ಕುಂಬೋಳ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಖಾಸಿಂ ಬಾವ ಪಜೀರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ, ಜಾಬಿರ್ ಹುದವಿ ತ್ರಿಕರಿಪುರ ಪ್ರಾಸ್ತಾವಿಕ ಭಾಷಣ ಮಾಡುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಖಾಸಿಂ ಬಾವ ಪಜೀರ್, ಎಸ್ಕೆಎಸ್ಸೆಸ್ಸೆಫ್‌ಪಜೀರ್ ಯುನಿಟ್ ಅಧ್ಯಕ್ಷ ಮುಹಮ್ಮದ್ ಖಾನ್, ಎಸ್‌ವೈಎಸ್ ಶಾಖಾಧ್ಯಕ್ಷ ಸಿ.ಎಚ್.ಮೊಯ್ದಿನ್ ಕುಂಞಿ ಮತ್ತಿತರರು ಉಪಸ್ಥಿತರಿದ್ದರು.





