ಇಂದು ವಾಹನ ರ್ಯಾಲಿ
ಡಿಕೆಎಸ್‌ಸಿ 20ನೆ ವಾರ್ಷಿಕ
ಉಡುಪಿ, ನ.25: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ಡಿಕೆಎಸ್‌ಸಿ)ನ 20ನೆ ವಾರ್ಷಿಕ ಮಹಾ ಸಮ್ಮೇಳನವು ಡಿ.2ರಿಂದ 4ರವರೆಗೆ ಅಲ್‌ಇಹ್ಸಾನ್ ಸ್ಕೂಲ್ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಇದರ ಪ್ರಚಾರಾರ್ಥ ಅಲ್‌ಇಹ್ಸಾನ್ ಹಳೆ ವಿದ್ಯಾರ್ಥಿಗಳಿಂದ ಮಸೀರತುಲ್ ಇಹ್ಸಾನ್ ವಾಹನ ರ್ಯಾಲಿಯು ನ.26ರಂದು ಮುಲ್ಕಿ ಕಾರ್ನಾಡಿನಿಂದ ಕಾಪು ಜಂಕ್ಷನ್‌ವರೆಗೆ ನಡೆಯಲಿದೆ. ಮುಲ್ಕಿ ಜುಮಾ ಮಸೀದಿಯ ಖತೀಬ್ ಇಬ್ರಾಹೀಂ ದಾರಿಮಿಯವರ ದುಆದೊಂದಿಗೆ ರ್ಯಾಲಿಯು ಚಾಲನೆಗೊಳ್ಳಲಿದೆ.
ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಹಾಜಿ ಮಮ್ತಾಝ್ ಅಲಿ ವಹಿಸುವರು. ಮುಲ್ಕಿ ಜುಮಾ ಮಸೀದಿಯ ಅಧ್ಯಕ್ಷ ಇಕ್ಬಾಲ್ ಮುಲ್ಕಿ ಉದ್ಘಾಟಿಸುವರು. ಸಂಸ್ಥೆಯ ಜನರಲ್ ಮೆನೇಜರ್ ಮುಸ್ತಫಾ ಸಅದಿ ಪ್ರಚಾರ ಸಮಿತಿಯ ಮುಖ್ಯಸ್ಥ ಹಾಜಿ ಮೊಯ್ದೀನ್ ಕಾಪುರವರಿಗೆ ಧ್ವಜವನ್ನು ಹಸ್ತಾಂತರಿಸಲಿರುವರು.
ರ್ಯಾಲಿಯ ವೇಳೆ ಕಾರ್ನಾಡ್, ಮುಲ್ಕಿ, ಪಡುಬಿದ್ರೆ, ಉಚ್ಚಿಲ, ಕಾಪು ಮುಂತಾದೆಡೆಗಳಲ್ಲಿ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಹಾಫಿಳ್ ಸುಫ್ಯಾನ್ ಸಖಾಫಿ, ಅಶ್ರಫಿ ಅಮ್ಜದಿ, ನಝೀರ್ ಅಹ್ಸನಿ ಸಂದೇಶ ಭಾಷಣ ಮಾಡುವರು ಎಂದು ಪ್ರಕಟನೆ ತಿಳಿಸಿದೆ.





