ಅಟೋಮ್ಯಾಟ್ರಿಕ್ಸ್‌ನಲ್ಲಿ ಟ್ಯಾಕ್ಸಿ ಚಾಲಕರಿಗೆ ವಿಶೇಷ ಕೊಡುಗೆ
ಪ್ರತಿ ತಿಂಗಳು 50,000 ರೂ. ಗಳಿಕೆಗೆ ಅವಕಾಶ

ಮಂಗಳೂರು, ನ.25: ನಗರದ ಟಾಟಾ ಕಾರುಗಳ ಅಧಿಕೃತ ಮಾರಾಟ ಹಾಗೂ ಸೇವಾದಾರರೂ ಆಗಿರುವ ಅಟೋಮ್ಯಾಟ್ರಿಕ್ಸ್‌ನವರು ಟ್ಯಾಕ್ಸಿ ಚಾಲಕರಿಗಾಗಿ ವಿಶೇಷ ಕೊಡುಗೆಯನ್ನು ನವೆಂಬರ್‌ನಲ್ಲಿ ನೀಡುತ್ತಿದೆ.
ಈ ಕೊಡುಗೆಯನ್ವಯ ಟ್ಯಾಕ್ಸಿ ಚಾಲಕರು ಟಾಟಾ ಕಾರನ್ನು ಖರೀದಿಸಿ ವೋಲಾ ಹಾಗೂ ಊಬರ್ ಜೊತೆ ಸಹಯೋಗ ಹೊಂದಿದ್ದಲ್ಲಿ ಪ್ರತಿ ತಿಂಗಳಿಗೆ 50,000 ರೂ.ವರೆಗಿನ ಗಳಿಕೆಯನ್ನು ಗಳಿಸಬಹುದಾಗಿದೆ.
ಈ ಕೊಡುಗೆ ಎಲ್ಲ ಟಾಟಾ ಕಾರುಗಳನ್ನು ಖರೀದಿಸಿದಲ್ಲಿ ಗ್ರಾಹಕರು ಒಂದು ಸ್ಮಾರ್ಟ್ ಫೋನನ್ನು ಉಡುಗೊರೆಯಾಗಿ ಪಡೆಯಲಿದ್ದಾರೆ. ಇದಲ್ಲದೆ ಟಾಟಾ ಕಾರುಗಳ ವಿವಿಧ ಮಾದರಿಗಳಾದ ಇಂಡಿಕಾದ ಮೇಲೆ 32,500ರೂ. , ಇಂಡಿಗೋ 46,000ರೂ. , ಝೆಸ್ಟ್ 40,000ರೂ. ಹಾಗೂ ಬೋಲ್ಟ್ ಕಾರಿನ ಮೇಲೆ 50,000ರೂ.ವರೆಗಿನ ಉಳಿತಾಯ ಹಾಗೂ ಸಬ್ಸಿಡಿ ಪ್ರಯೋಜನವು ಟ್ಯಾಕ್ಸಿ ಚಾಲಕರಿಗೆ ಲಭ್ಯವಾಗಲಿದೆ.
ಗ್ರಾಹಕರ ಅನುಕೂಲತೆಗಾಗಿ ಹಳೆ ಕಾರಿನ ವಿನಿಮಯ, ಶೀಘ್ರ ಸಾಲ ಮಂಜೂರಾತಿ ಹಾಗೂ ಅತೀ ಕಡಿಮೆ ಡಾಕ್ಯೂಮೆಂಟೇಶನ್‌ಗಳಂತಹ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮಂಗಳೂರಿನ ಬಿಜೈ, ಪುತ್ತೂರಿನ ಬೊಳ್ವಾರಿನಲ್ಲಿರುವ ಅಟೋಮ್ಯಾಟ್ರಿಕ್ಸ್ ಶೋರೂಂನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.





