ಮಂಗಳೂರು ವಿವಿ ಕ್ರೀಡಾ ತಂಡಗಳಿಗೆ ಆಯ್ಕೆ ಪ್ರಕ್ರಿಯೆ
ಮಂಗಳೂರು, ನ.25: ಅಂತರ್ ವಿಶ್ವವಿದ್ಯಾನಿಲಯದ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯದ ತಂಡವನ್ನು ಆಯ್ಕೆ ಮಾಡಲು ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳ ಆಸಕ್ತ ಕ್ರೀಡಾಪಟುಗಳು ತಮ್ಮ ಗುರುತಿನ ಚೀಟಿ ಮತ್ತು ಶೈಕ್ಷಣಿಕ ಅರ್ಹತಾ ವಿವರಗಳೊಂದಿಗೆ ಭಾಗವಹಿಸಲು ಪ್ರಕಟನೆ ತಿಳಿಸಿದೆ.
ಆಯ್ಕೆ ಪ್ರಕ್ರಿಯೆ ನಡೆಯುವ ದಿನಾಂಕ ಮತ್ತು ಸ್ಥಳ ಕೆಳಗಿನಂತಿವೆ.
*ಪುರುಷರ ಮತ್ತು ಮಹಿಳೆಯರ ಹಗ್ಗ ಜಗ್ಗಾಟ: ನ.28ರಂದು ಬೆಳಗ್ಗೆ 9:30ಕ್ಕೆ. ಸ್ಥಳ- ಮಂಗಳೂರು ವಿವಿ ಕ್ಯಾಂಪಸ್, ಮಂಗಳಗಂಗೋತ್ರಿ.
*ಪುರುಷರ ಕ್ರಿಕೆಟ್: ಡಿಸೆಂಬರ್ 2 ಮತ್ತು 3ರಂದು ಬೆಳಗ್ಗೆ 9:30ಕ್ಕೆ. ಸ್ಥಳ-ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರ.
*ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ಸ್:
ಡಿ.10ರಂದು ಬೆಳಗ್ಗೆ 9:30. ಸ್ಥಳ-ಆಳ್ವಾಸ್ ಕಾಲೇಜು, ಮೂಡುಬಿದಿರೆ.*ಪುರುಷರ ಹಾಕಿ: ಡಿ.11ರಂದು ಬೆಳಗ್ಗೆ 9:30ಕ್ಕೆ. ಸ್ಥಳ-ಎಫ್.ಎಂ.ಕೆ.ಎಂ. ಕಾರಿಯಪ್ಪಕಾಲೇಜು, ಮಡಿಕೇರಿ.
*ಪುರುಷರ ಮತ್ತು ಮಹಿಳೆಯರ ಬಾಲ್‌ಬ್ಯಾಡ್ಮಿಂಟನ್: ಡಿ.12ರಂದು ಪೂವಾಹ್ನ 9:30ಕ್ಕೆ. ಸ್ಥಳ-ಮಂಗಳೂರು ವಿವಿ ಮಂಗಳಗಂಗೋತ್ರಿ.
*ಪುರುಷರ ಬಾಸ್ಕೆಟ್‌ಬಾಲ್: ಡಿ.16ರಂದು ಪೂರ್ವಾಹ್ನ 9:30ಕ್ಕೆ. ಸ್ಥಳ-ಡಾ. ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು, ನಿಟ್ಟೆ.
*ಮಹಿಳೆಯರ ಖೋ-ಖೋ: ಜನವರಿ 8ರಂದು ಪೂರ್ವಾಹ್ನ 9:30ಕ್ಕೆ. ಸ್ಥಳ-ವಿವಿ ಕಾಲೇಜು, ಮಂಗಳೂರು.





