ನೋಟು ರದ್ದು ಎಫೆೆಕ್ಟ್: ರಿಯಲ್ ಎಸ್ಟೇಟ್ ಉದ್ಯಮ ಸ್ತಬ್ಧ ಕಡಿಮೆಯಾದ ನಿವೇಶನ, ಮನೆ ಖರೀದಿದಾರರ ಸಂಖ್ಯೆ

ಶಿವಮೊಗ್ಗ, ನ. 26: ಇತ್ತೀಚೆಗೆ ಕೇಂದ್ರ ಸರಕಾರವು ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟು ಚಲಾವಣೆ ರದ್ದುಗೊಳಿಸಿದ ಪರಿಣಾಮ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಭಾರೀ ದೊಡ್ಡ ಪರಿಣಾಮ ಬೀರಿರುವುದು ಕಂಡು ಬಂದಿದೆ. ನೋಟ್ ರದ್ದತಿ ಆದೇಶಕ್ಕೂ ಮುನ್ನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕಂಡುಬರುತ್ತಿದ್ದ ವಹಿವಾಟು ಪ್ರಸ್ತುತ ಇಲ್ಲವಾಗಿದೆ. ನಿವೇಶನ, ಮನೆ ಖರೀದಿದಾರರ ಸಂಖ್ಯೆ ದಿಢೀರ್ ಆಗಿ ಕುಸಿದಿದೆ. ಮತ್ತೊಂದೆಡೆ ಬ್ಯಾಂಕ್‌ಗಳಲ್ಲಿ ಹಣದ ಚಲಾವಣೆಗೆ ಸಂಬಂಧಿಸಿದಂತೆ ಸರಕಾರ ನಿಗದಿಪಡಿಸಿರುವ ಮಿತಿಯು ರಿಯಲ್ ಎಸ್ಟೇಟ್ ಉದ್ಯಮವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಈ ಹಿಂದೆ ಶಿವಮೊಗ್ಗ ನಗರ ವ್ಯಾಪ್ತಿ ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ದೊಡ್ಡ ಸಂಖ್ಯೆಯಲ್ಲಿ ಲೇಔಟ್‌ಗಳ ನಿರ್ಮಾಣ ಪ್ರಕ್ರಿಯೆ ನಡೆಯಿತು. ನಿವೇಶನಗಳಿಗೆ ಸಾಕಷ್ಟು ಬೇಡಿಕೆಯೂ ಇತ್ತು. ಅದೇ ರೀತಿಯಲ್ಲಿ ಮನೆ, ಫ್ಲಾಟ್‌ಗಳಿಗೆ ಡಿಮ್ಯಾಂಡ್ ಇತ್ತು. ಆದರೆ ಇತ್ತೀಚೆಗೆ ನಿವೇಶನ, ಮನೆ, ಫ್ಲಾಟ್‌ಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ವ್ಯವಹಾರ ಅಷ್ಟಕಷ್ಟೆ ಎಂಬಂತಿತ್ತು. ಕೇಂದ್ರ ಸರಕಾರ ಹಳೆಯ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸಿದ ನಂತರ ರಿಯಲ್ ಎಸ್ಟೇಟ್ ಉದ್ಯಮ ಅಕ್ಷರಶಃ ಸ್ತಬ್ಧ್ದವಾಗಿದೆ ಎಂದರೆ ತಪ್ಪಾಗಲಾರದು. ವ್ಯವಹಾರದಲ್ಲಿ ತೀವ್ರ ಕುಸಿತ ಉಂಟಾಗಿದೆ. ಹೊಸದಾಗಿ ಖರೀದಿ ಮಾಡುವುದಿರಲಿ, ಈ ಹಿಂದೆ ನಿವೇಶನ ಖರೀದಿಗೆ ಮುಂಗಡ ಹಣ ನೀಡಿ ಛಾಪ ಕಾಗದದ ಮೇಲೆ ಒಪ್ಪಂದ ಮಾಡಿಕೊಂಡವರು ಇದೀಗ ನಿವೇಶನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಮತ್ತೆ ಕೆಲವರು ಚಲಾವಣೆ ರದ್ದುಗೊಳಿಸಿರುವ ನೋಟುಗಳನ್ನು ನೀಡಲು ಮುಂದಾಗುತ್ತಿದ್ದಾರೆ. ಲಕ್ಷಾಂತರ ರೂ. ವೌಲ್ಯದ ಹಳೆಯ ನೋಟುಗಳನ್ನು ಪಡೆಯುವ ಸ್ಥಿತಿಯಲ್ಲಿ ನಾವಿಲ್ಲ. ಏನು ಮಾಡಬೇಕು ಎಂಬುವುದೇ ಗೊತ್ತಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಮುಂದಿನ ದಿನಗಳಲ್ಲಿ ಏನಾಗುವುದೋ ಎಂಬ ಆತಂಕ ಆವರಿಸುವಂತಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ನಗರದ ರಿಯಲ್ ಎಸ್ಟೇಟ್ ಉದ್ಯಮಿಯೋರ್ವರು ಹೇಳುತ್ತಾರೆ. ನೋಂದಣಿಯೂ ಇಲ್ಲ: ನೋಟ್ ರದ್ದತಿಯ ಆದೇಶದ ನಂತರ, ಶಿವಮೊಗ್ಗ ನಗರದಲ್ಲಿ ವಸತಿ ಸ್ಥಿರಾಸ್ತಿಗಳ ನೋಂದಣಿ ಪ್ರಮಾಣದಲ್ಲಿಯೂ ಗಣನೀಯ ಪ್ರಮಾಣದ ಕುಸಿತ ಉಂಟಾಗಿದೆ. ನಗರದ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಮೂಲಗಳು ಹೇಳುವ ಪ್ರಕಾರ, ನೋಟು ರದ್ದುಗೊಳಿಸುವ ಆದೇಶ ಹೊರಡಿಸುವುದಕ್ಕೂ ಮುನ್ನ ನಡೆಯುತ್ತಿದ್ದ ವಸತಿ ಸ್ಥಿರಾಸ್ತಿಯ ನೋಂದಣಿಗೂ ಪ್ರಸ್ತುತ ಆಗುತ್ತಿರುವ ನೋಂದಣಿಗೂ ಅಜಗಜಾಂತರ ವ್ಯತ್ಯಾಸವಿದೆ. ನಿವೇಶನ, ಮನೆ ಮಾರಾಟದ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ನೋಟು ರದ್ದು ಆದೇಶವೇ ಕಾರಣವಾಗಿದೆ. ಈ ಹಿಂದಿನಂತೆ ನೋಂದಣಿ ಪ್ರಕ್ರಿಯೆಗಳು ನಡೆಯಬೇಕಾದರೆ, ವರ್ಷವೇ ಬೇಕಾಗಬಹುದು. ಸದ್ಯಕ್ಕಂತೂ ವಸತಿ ಸ್ಥಿರಾಸ್ತಿ ನೋಂದಣಿ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಕಡಿಮೆಯಿದೆ.
ಸ್ಥಗಿತ: ದಿಢೀರ್ ಆಗಿ ನಿವೇಶನ, ಮನೆ, ಫ್ಲಾಟ್‌ಗಳ ಬೇಡಿಕೆಯಲ್ಲಿ ಕುಸಿತ ಉಂಟಾಗಿರುವ ಕಾರಣದಿಂದ, ಹೊಸದಾಗಿ ಲೇಔಟ್ ರಚನೆ ಮಾಡುವವರು ಹಿಂದೆಮುಂದೆ ನೋಡುವಂತಾಗಿದೆ. ಎಂಟು ಎಕರೆ ಪ್ರದೇಶದಲ್ಲಿ ಲೇಔಟ್ ರಚನೆ ಮಾಡಲು ಕಾನೂನುಬದ್ಧ್ದವಾಗಿ ಭೂ ಪರಿವರ್ತನೆ ಮಾಡಿಸಿದ್ದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದಲೂ ನಕ್ಷೆ ಅನುಮೋದನೆ ಪಡೆಯಲಾಗಿತ್ತು. ಇಷ್ಟರಲ್ಲಿಯೇ ಕೆಲಸ ಆರಂಭಿಸಲು ಸಕಲ ಸಿದ್ಧತೆ ನಡೆಸಲಾಗಿತ್ತು. ಆದರೆ ನೋಟು ರದ್ದು ಆದೇಶದ ನಂತರ ರಿಯಲ್ ಎಸ್ಟೇಟ್ ಉದ್ಯಮದ ಸ್ಥಿತಿಯೇ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಬಡಾವಣೆ ರಚನೆ ಪ್ರಸ್ತಾಪವನ್ನು ಮುಂದೂಡಿದ್ದೇನೆ. ಉದ್ಯಮದಲ್ಲಿ ಚೇತರಿಕೆ ಕಂಡುಬಂದ ನಂತರ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿದ್ದೇನೆ ಎಂದು ಹೆಸರು ಬಹಿರಂಗಪಡಿಸಲಿಚ್ಛ್ಚಿಸದ ರಿಯಲ್ ಎಸ್ಟೇಟ್ ಉದ್ಯಮಿದಾರರೊಬ್ಬರು ಅಭಿಪ್ರಾಯಪಡುತ್ತಾರೆ. ಒಟ್ಟಾರೆ ನೋಟು ರದ್ದು ಆದೇಶದ ಎಫೆಕ್ಟ್, ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಭಾರೀ ದೊಡ್ಡ ಪ್ರಮಾಣದಲ್ಲಿಯೇ ಬೀರಿದೆ.
ಮರು ಮಾರಾಟಕ್ಕೂ ಕುತ್ತು...!
ಕೆಲವರು ಕಡಿಮೆ ದರದಲ್ಲಿ ನಿವೇಶನ, ಮನೆಗಳನ್ನು ಖರೀದಿಸಿ ಕೆಲ ತಿಂಗಳುಗಳ ನಂತರ ಹೆಚ್ಚಿನ ದರಕ್ಕೆ ಮರು ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದರು. ಆದರೆ ನೋಟು ರದ್ದು ಆದೇಶದಿಂದ ಈ ವ್ಯವಹಾರಕ್ಕೂ ಕುತ್ತು ಬಂದಿದೆ. ನಿವೇಶನ, ಮನೆಗಳಿಗೆ ಡಿಮ್ಯಾಂಡ್ ಕಡಿಮೆಯಾಗಿರುವುದರಿಂದ ಮರು ಮಾರಾಟ ಬಿಸಿನೆಸ್ ಸಂಪೂರ್ಣ ಕುಸಿದಿದೆ. ಮರು ಮಾರಾಟ ವ್ಯವಹಾರ ನಡೆಸುವವರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದ್ದು, ತಾವು ಖರೀದಿಸಿದ ಬೆಲೆಗೆ ನಿವೇಶನ-ಮನೆ ಮಾರಾಟ ಮಾಡಲು ಮುಂದಾದರೂ ಖರೀದಿದಾರರು ಸಿಗದಂತಹ ದುಃಸ್ಥಿತಿ ಅವರದ್ದಾಗಿದೆ.
ಕಪ್ಪು ಹಣ ಬಿಳಿಯಾಗಿಸುವುದು ಕಷ್ಟ
ಕೆಲ ಕಾಳಧನಿಕರು ತಮ್ಮ ಬಳಿಯಿರುವ ಹಣವನ್ನು ನಿವೇಶನ-ಮನೆ ಖರೀದಿಯ ಮೇಲೆ ಹೂಡುವ ಮೂಲಕ ಬಿಳಿಯಾಗಿಸುವ ಕೆಲಸ ಮಾಡುತ್ತಿದ್ದರು. ಕಪ್ಪು ಹಣವನ್ನು ಬಿಳಿಯಾಗಿಸುವ ಧಂದೆ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿತ್ತು. ಆದರೆ ಪ್ರಸ್ತುತ ಆದಾಯ ತೆರಿಗೆ ಇಲಾಖೆಯು ಬ್ಯಾಂಕ್ ವಹಿವಾಟುಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಸ್ಥಿರಾಸ್ತಿ ನೋಂದಣಿಯ ಮೇಲೆಯೂ ಕಣ್ಣಿಟ್ಟಿದೆ. ಈ ಹಿಂದಿನಂತೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕಪ್ಪು ಹಣವನ್ನು ಬಿಳಿಯಾಗಿಸುವುದು ಸುಲಭದ ಕೆಲಸವಲ್ಲವಾಗಿದೆ. ಶಾಲಾ ಆವರಣದಲ್ಲಿ ನಾಗರಹಾವು ಪ್ರತ್ಯಕ್ಷ!
ಮೂಡಿಗೆರೆ, ನ.26: ಶಾಲೆ ಆವರಣದಲ್ಲಿ ನಾಗರಹಾವು ಪ್ರತ್ಯಕ್ಷಗೊಂಡು ಶಾಲಾ ಮಕ್ಕಳನ್ನು ಭಯಭೀತಿಗೊಳಿಸಿದ ಘಟನೆ ತಾಲೂಕಿನ ಹಂಡುಗುಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲೆಯ ಶೌಚಾಲಯದ ಪಕ್ಕದಲ್ಲಿ ಕಾಣಿಸಿರುವ ಹಾವು ಕೆಲ ಕಾಲ ಅಲ್ಲಿಂದ ಕದಲದೆ ಭಯ ಹುಟ್ಟಿಸಿತು. ನಂತರ ಗ್ರಾಮಸ್ಥರು ಸ್ನೇಕ್ ಅಹ್ಮದ್ ಅವರನ್ನು ಕರೆಯಿಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.







