ಕ್ಯಾಸ್ಟ್ರೊ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಹೊಸದಿಲ್ಲಿ,ನ.26: ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗಾಢ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ. ಫಿಡೆಲ್ ಕ್ಯಾಸ್ಟ್ರೊ ಅವರ ನಿಧನಕ್ಕಾಗಿ ಕ್ಯೂಬಾದ ಸರಕಾರ ಮತ್ತು ಜನತೆಗೆ ನನ್ನ ಗಾಢ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಈ ದುಃಖದ ಗಳಿಗೆಯಲ್ಲಿ ಕ್ಯೂಬಾ ಸರಕಾರ ಮತ್ತು ಜನತೆಗೆ ಬೆಂಬಲವಾಗಿ ನಾವಿದ್ದೇವೆ ಎಂದು ಅವರು ಹೇಳಿದ್ದಾರೆ.
ಕ್ಯಾಸ್ಟ್ರೊ 20ನೆ ಶತಮಾನದ ಮೇರುನಾಯಕರಲ್ಲೊಬ್ಬರಾಗಿದ್ದರು. ಅವರ ನಿಧನದಿಂದಾಗಿ ಭಾರತವು ತನ್ನ ಮಹಾನ್ ಮಿತ್ರನನ್ನು ಕಳೆದುಕೊಂಡಿದೆ ಎಂದು ಮೋದಿ ತಿಳಿಸಿದ್ದಾರೆ.
Next Story





